jaishankar_ದೆಹಲಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರ ಬಲಿಗೆ ಬೇರೊಬ್ಬರಿಗೆ ವಿದೇಶಾಂಗ ಖಾತೆಯ ಜವಾಬ್ದಾರಿ ವಹಿಸಲು ಪ್ರಧಾನಿ ಮೋದಿ ಚಿಂತನೆ ನಡೆಸಿದ್ದು, ಚಳಿಗಾಲ ಅಧಿವೇಶನದ ನಂತರ ಪೂರ್ಣ ಪ್ರಮಾಣದ ಸಚಿವರನ್ನು ನೇಮಕ ಮಾಡಲು ಸಿದ್ದತೆ ನಡೆದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಈ ವರೆಗೆ ಅತ್ಯುತ್ತಮವಾಗಿ ತಮ್ಮ ಕಾರ್ಯನಿರ್ವಹಿಸಿದ್ದು, ಸುಷ್ಮಾ ಅವರಂತೆ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಸಚಿವರಿಗಾಗಿ ಹುಡುಕಾಟ ನಡೆದಿದೆ. ಈ ಜೊತೆಗೆ ಚಳಿಗಾಲದ ಅಧಿವೇಶ ಮುಗಿದ ನಂತರ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ತರಲು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿದೇಶಾಂಗ ಕಾರ್ಯದರ್ಶಿ ಎಸ್‌ ಜಯಶಂಕರ ಅವರಿಗೆ ಮೊದಲ ಆದ್ಯತೆ ನೀಡಿದ್ದು, ಜಯಶಂಕರ್‌ ಅವರಿಗೇ ವಿದೇಶಾಂಗ ಖಾತೆಯ ಸಂಪೂರ್ಣ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಜನವರಿಯಲ್ಲಿ ಜಯಶಂಕರ್‌ ಅವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಅವರನ್ನೇ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಧ್ಯ ಸುಷ್ಮಾ ಸ್ವರಾಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಿನ ಪರಿಸ್ಥಿತಿಯಲ್ಲಿ ಸ್ವರಾಜ್‌ ವರಿಗೆ ಎಂದಿನಂತೆ ತಮ್ಮ ಇಲಾಖೆಯ ಕಾರ್ಯನಿರ್ವಹಣೆ ಅಸಾಧ್ಯವಾಗಿದ್ದು, ಇನ್ನೂ ಅನೇಕ ದಿನಗಳ ವರೆಗೆ ದೆಹಲಿಯ ಎಐಐಎಂಎಸ್‌ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವರಾಜ್‌, ಭಾನುವಾರ ಅಮೃತಸರದಲ್ಲಿ ನಡೆದ ಹಾರ್ಟ್ ಆಫ್ ಏಶಿಯಾ ಸಮಾವೇಶದಲ್ಲಿಯೂ ಭಾಗವಹಿಸಲಾಗಿಲ್ಲ. ಹೀಗಾಗಿ ತ್ವರಿರಗತಿಯಲ್ಲಿ ವಿದೇಶಾಂಗ ಖಾತೆಯನ್ನು ಬದಲಾವಣೆಗೆ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.