sasikala1ಜಯಲಲಿತಾ ಅವರು ಇಹಲೋಕ ತ್ಯಜಿಸಿರುವ ಹಿನ್ನಲೆಯಲ್ಲಿ ಜಯಲಲಿತಾ ಅವರ ನಿಟಕವರ್ತಿ ಹಣಕಾಸು ಸಚಿವರಾಗಿದ್ದ ಒ.ಪನ್ನೀರ್ ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಜಯಲಲಿತಾ ಅವರ ಪರಮಾಪ್ತ ಗೆಳತಿ ಶಶಿಕಲಾ ಅವರುಎಐಎಡಿಎಂಕೆ ಪಕ್ಷದ ನಿಯಂತ್ರಣ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಪನ್ನೀರ್‌ ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀರಿಸಿದ ಹಿನ್ನೆಲೆಯಲ್ಲಿ ಶಶಿಕಲಾ ಅವರು ಸೂಚಿಸುವ ವ್ಯಕ್ತಿಯನ್ನು ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ. ಶಶಿಕಲಾ ಅವರು ಜಯಲಲಿತಾ ಉತ್ತರಾಧಿಕಾರಿಯಾಗಿ ಪಕ್ಷದ ಹಿಡಿತ ಸಾಧಿಸುವುದು ಖಚಿತವಾದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಸಂಸದ ಹಾಗೂ ಲೋಕಸಭೆಯ ಉಪಸ್ಪೀಕರ್ ಎಂ.ತಂಬಿದೊರೈ ಅವರು ಪಕ್ಷದ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಬಹಿರಂಗಪಡಿಸಿವೆ.ಬಿಜೆಪಿ ಕೂಡಾ ತಂಬಿದೊರೈ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಪಕ್ಷದ ಹಿತಾಸಕ್ತಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.
ಸೋಮವಾರ ತಡರಾತ್ರಿಯೇ ಎಲ್ಲ ಸಚಿವರ ಪ್ರಮಾಣ ವಚನ ಸ್ವೀಕಾರ :
ತಮಿಳುನಾಡಿನ ರಾಜಭವನದಲ್ಲಿರುವ ರಾಜಾಜಿ ಹಾಲ್ ನಲ್ಲಿ ಸೋಮವಾರ ತಡರಾತ್ರಿ 1.20 ನಡೆದ ಸರಳ ಕಾರ್ಯಕ್ರಮದಲ್ಲಿ ಪನ್ನೀರ್ ಸೆಲ್ವಂ ಮತ್ತು 31 ನೂತನ ಸಚಿವರು ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ ಜಯಲಲಿತಾ ಸಂಪುಟದಲ್ಲಿ ಸಚಿವರಾಗಿದ್ದವರೇ ಮತ್ತೆ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ತಮಿಳುನಾಡು ರಾಜ್ಯ ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯದರ್ಶಿ ಪಿ.ರಾಮಮೋಹನ್ ರಾವ್ ಮತ್ತು ತಮಿಳುನಾಡು ರಾಜ್ಯ ಸರ್ಕಾರದ ಸಲಹೆಗಾರರಾದ ಶೀಲಾ ರಾಮಕೃಷ್ಣನ್ ಸೇರಿದಂತೆ ಜಯಲಲಿತಾ ಅವರ ಕೆಲವೇ ಆಪ್ತರು ಹಾಜರಿದ್ದರು.