07kar4bಕಾರವಾರ:ಕರಾವಳಿ ಉತ್ಸವದಲ್ಲಿ ಆಗಮಿಸುವ ಲಕ್ಷಾಂತರ ಜನರ ಹಾಗೂ ವಿವಿಐಪಿಗಳ ರಕ್ಷಣೆ, ಸುರಕ್ಷಣೆಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಜನಸಂದಣಿ ಪ್ರದೇಶದಲ್ಲಿ ಒಟ್ಟೂ 16 ಸಿಸಿ ಕ್ಯಾಮೆರಾ ಅಳವಡಿಸಿದ್ದು ಪೊಲೀಸರ ಬೀಗಿ ಭದ್ರತೆಗಳನ್ನು ಕಲ್ಪಿಸುವ ಕ್ರಮಕೈಗೊಂಡಿದೆ.
ಕರಾವಳಿ ಉತ್ಸವಕ್ಕೆ ಮುಖ್ಯವಾಗಿ ಜನರ ರಕ್ಷಣೆಗಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮಗಾರಗಳನ್ನು ಅಳವಡಿಸಿ ಆಮೂಲಕ ಕಣ್ಗಾವಲು ಇರಿಸಲು ಮುಂದಾಗಿದ್ದು ಇದೇ ಮೊದಲ ಪ್ರಯತ್ನವಾಗಿದ್ದು ಸಿಸಿಟಿವಿಗಳಲ್ಲಿ ರಿಕಾರ್ಡ್ ಆಗುವ ಕ್ಷಣ ಕ್ಷಣದ ಮಾಹಿತಿಯ ಮೇಲೆ ನಿಗಾ ಇಡಲು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಉತ್ಸವದಲ್ಲಿ ವಿವಿಧ 8 ಎತ್ತರದ ಪ್ರದೇಶಗಳಲ್ಲಿ ಪೊಲೀಸರಿಗೆ ಕಣ್ಗಾವಲಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಉತ್ಸವಕ್ಕೆ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಆಗಮಿಸಲಿದ್ದಾರೆ. ಅಲ್ಲದೇ ಮ್ಯಾರಾಥಾನ್ ಓಟಕ್ಕೆ ಚಲನ ಚಿತ್ರ ತಾರೆಯರು ಆಗಮಿಸಲಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಉತ್ಸವಕ್ಕೆ ಮೆರಗು ನೀಡಲಿದ್ದಾರೆ. ಕಿಸೆಗಳ್ಳತನ, ಸರಗಳ್ಳತನ ಸಣ್ಣಪುಟ್ಟ ಗಲಾಟೆ ಇವುಗಳ ಬಗ್ಗೆ ನಿಗಾ ಇಡಲು ಮುನ್ನೆಚ್ಚರಿಯ ಕ್ರಮಕೈಗೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲೆದೆ. ಕೆಲವು ಕಡೆಗಳಲ್ಲಿ ಸಮವಸ್ತ್ರದಲ್ಲಿ ಪೊಲೀಸರು ರಕ್ಷಣೆ ನೀಡುವುದು ಒಂದೆಡೆಯಾದರೆ ಸಮವಸ್ತ್ರವಿಲ್ಲದೆ ಪೊಲೀಸರು ಗಸ್ತು ಹೊಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ, ಉಡುಪಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇನ್ನಿತರ ಕಡೆಗಳಿಂದ ಪೆÇಲೀಸರ ನಿಯೋಜನೆಗೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 500 ಪೆÇಲೀಸರು, ಎಂಟು ಸಿಪಿಐ ಹಾಗೂ ಎರಡು ಡಿವೈಎಸ್‍ಪಿಗಳನ್ನು ಉತ್ಸವದ ಭದ್ರತೆಗಾಗಿಯೇ ಶ್ರಮಿಸಲಿದ್ದಾರೆ.
ಉತ್ಸವಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ನಗರದ ಲಂಡನ್ ಬ್ರಿಡ್ಜ್, ಕಡವಾಡ, ಕಾಳಿ ಬ್ರಿಡ್ಜ್ ಹಾಗೂ ಅಂಕೋಲಾದ ಬಾಳೆಗುಳಿ ಕ್ರಾಸ್‍ನಲ್ಲಿ ತಾತ್ಕಾಲಿಕ ಚೆಕ್ ಪೆÇಸ್ಟ್ ನಿರ್ಮಾಣಕ್ಕೆ ಪೆÇಲೀಸ್ ಇಲಾಖೆ ಸಿದ್ದತೆ ನಡೆಸಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರನ್ನು ನಾನಾ ಕಡೆಯ ಚೆಕ್ ಪೋಸ್ಟ್‍ಗಳಲ್ಲಿಯೇ ತಪಾಸಣೆ ಮಾಡಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರು, ಪಾಸ್ ಹೊಂದಿರುವವರಿಗೆ, ಕಲಾವಿದರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಸಿದ್ದಪಡಿಸಲಾಗುತ್ತಿದೆ.
ಕರಾವಳಿ ಉತ್ಸವದ ನಿಮಿತ್ತ ನಗರದ ಎಂ.ಜಿ. ರಸ್ತೆಯನ್ನು ಡಾಂಬರೀಕರಣವನ್ನು ಕರಾವಳಿ ಉತ್ಸವದ ಅಂಗವಾಗಿ ನಗರದ ಎಂ.ಜಿ. ರಸ್ತೆಯಲ್ಲಿ ಡಾಂಬರೀಕರಣವನ್ನು ನಗರಸಭೆಯ 14ನೇ ಹಣಕಾಸಿನ ಅನುದಾನದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ನಗರಸಭೆ ಕೈಗೆತ್ತಿಕೊಂಡಿದ್ದು ಜನ ಸಂಚಾರಕ್ಕೆ ವ್ಯವಸ್ಥಿತವಾದ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೆ ಪಾರ್ಕಿಂಗ್‍ಗಳಿಗೂ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿದೆ.
ಟಿಕೆಟ್ ವ್ಯವಸ್ಥೆ ರದ್ದು
ಕಳೆದ ಕೆಲವು ದಿನಗಳ ಹಿಂದೆ ಕರಾವಳಿ ಉತ್ಸವದ ಅಂಗವಾಗಿ ಮಯೂರವರ್ಮ ವೇದಿಕೆಯ ಮುಂಭಾಗದ ಸಿಟುಗಳನ್ನು 1000 ರೂ. ಹಾಗೂ 500ರೂ. ಶುಲ್ಕ ಪಡೆದು ಟಿಕೆಟ್ ವ್ಯವಸ್ಥೆ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಈ ಟಿಕೆಟ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಬಿಟ್ಟಿದೆ. ವಿವಿಐಪಿ, ವಿಐಪಿ, ಅಧಿಕಾರಿಗಳಿಗೆ ಮಾತ್ರ ಸಿಮಿತಗೊಳಿಸಲಾಗಿದೆ. ಉಳಿದಂತೆ ಇತರರಿಗೆ ಗ್ಯಾಲರಿ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವಿಕ್ಷಣೆಗೆ ಬರುವ ಸಾರ್ವಜನಿಕರಿಗೂ ಕುರ್ಚಿ ವ್ಯವಸ್ಥೆ ಇದೆ.