childlaboursಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ ಭಾರತ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ದ್ವಿಗುಣ ಹೊಂದುತ್ತಿದ್ದು, ಇದಕ್ಕೆ ಶಿಕ್ಷಣ ಪದ್ದತಿಯೇ ಕಾರಣ ಎಂದು ಭಾರತೀಯ ಮೂಲದ ಸಂಶೋದಕರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ಸೇರಿದಂತೆ ಕೆಲವು ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಶಿಕ್ಷಣ ಕಡ್ಡಾಯಗೊಳಿಸಿದರೂ ಬಾಲಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದ್ದು, ಇದಕ್ಕೆ ಆರ್ಥಿಕ ಸಂಪದ್ಬರಿತತೆ, ಬಡತನರೇಖೆಯ ಮೇಲೆ ನಾಟಕೀಯ ಬದಲಾವಣೆ ಹಾಗೂ ಶಿಕ್ಷಣ ಪಡೆಯುವುದರಲ್ಲಿಯ ತೊಡಕು ಎಂದು ತಿಳಿಸಿದೆ.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಯುನಿರ್ವಸಿಟಿ ಆಫ್ ಟೆಕ್ನಾಲಜಿ ಆಂಡ್‌ ಬಿಜಿನೆಸ್‌ ಸ್ಕೂಲ್‌ನ ಪ್ರಧ್ಯಾಪಕರಾದ ಜಯಂತರ ಸರ್ಕಾರ್‌ ಮತ್ತು ದೀಪಾನ್ವಿತ್‌ ಸರ್ಕಾರ್‌ ಈ ವಿಷಯದ ಬಗ್ಗೆ ದೀರ್ಘಕಾಲದ ಅಧ್ಯಯನ ನಡೆಸಿದ್ದು, ಈ ಪ್ರಕಾರ, ಬಾಲ ಕಾರ್ಮಿಕರ ಸಂಖ್ಯೆ ಮತ್ತು ಆರ್ಥಿಕ ಅಸಮಾನತೆಯ ನಡುವೆ ಇರುವ ಅಂತರದ ಪ್ರಮುಖ ಕಾರಣವನ್ನು ಹೊರಗೆ ತಂದಿದ್ದಾರೆ. ಅವರ ಅಧ್ಯಯನದ ಪ್ರಕಾರ, ಭಾರತದಂಥ ರಾಷ್ರಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ತಂದರೂ ಸಂಪೂಣವಾಗಿ ಬಾಲ ಕಾರ್ಮಿಕರರ ಸಂಖ್ಯೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬದಲಾಗಿ ಈ ಸಮಸ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಬಾಲ ಕಾರ್ಮಿಕರ ಸಮಸ್ಯೆ ಹೆಚ್ಚಲು ಕೆಲವು ಕಾರಣಗಳನ್ನು ಗುರುತಿಸಿದ್ದು, ತೀರಾ ಹಿಂದುಳಿದ ವರ್ಗದ ಪಾಲಕರಿಗೆ ತಮ್ಮ ಮಕ್ಕಳ ಶಾಲೆಯ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವಿಲ್ಲದಿರುವುದು. ದಿನಗೂಲಿ ವೇತನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದೇ ಪಾಲಕರು ಮಕ್ಕಳನ್ನು ಶಾಲೆಯ ಬದಲು ದುಡಿಯಲು ಕಳುಹಿಸವ ಕಾರಣ ಎಂದು ಅಧ್ಯಯನ ವರದಿ ತಿಳಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಯುನಿಸೆಫ್ ಕೂಡ ಆತಂಕ ವ್ಯಕ್ತಪಡಿಸಿದ್ದು, ಯುನಿಸೆಫ್ ಅಂಕಿ ಅಂಶಗಳ ಪ್ರಕಾರ, 2246 ಮಿಲಿಯನ್‌ ಬಾಲ ಕಾರ್ಮಿಕರು ಇನ್ನೂ ದುಡಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದೆ. ಈ ಸಂಖ್ಯೆ ಏಷ್ಯಾಖಂಡದಲ್ಲಿಯೇ ದ್ವಿಗುಣಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಉಚಿತ ಶಿಕ್ಷಣ ನೀಡಿದರೆ ಮಾತ್ರ ಸಾಲದು, ಪಾಲಕರಿಗೆ ತಮ್ಮ ಮಕ್ಕಳ ದಿನನಿತ್ಯದ ಶಾಲಾ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಬೆಳೆಸುವುದೇ ಇದಕ್ಕೆ ಪರಿಹಾರ ಎಂದು ಅಭಿಪ್ರಾಯ ಪಟ್ಟಿದೆ.