ಚಿತ್ರದುರ್ಗ, ಆಗಸ್ಟ್ 4 : ಚಿತ್ರದುರ್ಗ ಜಿಲ್ಲಾ ಕಂದಾಯ ಇಲಾಖಾ ಘಟಕದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಲೆಕ್ಕಿಗರ (village accountant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 75 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 28, 2015. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅಂಚೆ ಅಥವ ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಜುಲೈ 29ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವ ಸಿ.ಬಿ.ಎಸ್‌.ಇ. ಅಥವ ಐ.ಸಿ.ಎಸ್‌.ಇ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದೆ. ಕಂಪ್ಯೂಟರ್ ಸಾಮಾನ್ಯ ಜ್ಞಾನ ಹೊಂದಿರಬೇಕು. [ಅರ್ಜಿ ಸಲ್ಲಿಸಲು ವಿಳಾಸ] ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ -1/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಇತರರಿಗೆ 200 ರೂ.. 11,600 ರಿಂದ 21,000 ವೇತನ ಶ್ರೇಣಿ ಇದೆ. [police constable ನೇಮಕಾತಿ ಆದೇಶ] ಅರ್ಜಿಯನ್ನು ಚಲನ್ ಮೂಲಕ SBM ಜೆಸಿಆರ್ ಶಾಖೆ, ಚಿತ್ರದುರ್ಗ, ಖಾತೆಸಂಖ್ಯೆ 64094883524 ಜಮಾ ಮಾಡಬೇಕು. IFSC code : SBMY0040635. ವಯೋಮಿತಿ : ಸಾಮಾನ್ಯ ವರ್ಗ 35 ವರ್ಷಗಳು. 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ. ಪ.ಜಾ/ಪ.ಪಂ/ಪ್ರವರ್ಗ-1 40 ವರ್ಷ. ಪ್ರಮುಖ ದಿನಾಂಕಗಳು * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 28 * ಶುಲ್ಕ ಪಾವತಿ ಚಲನ್ ಅಪ್‌ಲೋಡ್ ಮಾಡಲು ಸೆಪ್ಟೆಂಬರ್ 4 ಕೊನೆಯ ದಿನ