chakravarty-sulibele-ವಿಶ್ವ ಗುರುವನ್ನಾಗಿಸಲು ಪ್ರಯತ್ನಿಸುವ ಯತಿ ಶ್ರೇಷ್ಠರಿಗೆ ಒಂದಿಲ್ಲೊಂದು ಆರೋಪ ಬರುತ್ತಲೇ ಇದೆ. ಶ್ರೀರಾಘವೇಶ್ವರರನ್ನೂ ಹತ್ತಿರದಿಂದ ನೋಡಿದ್ದೇನೆ. ಅವರ ಮೇಲಿನ ಆರೋಪ ನಿರಾಧಾರವಾಗಿದ್ದು, ಅವರು ನಿರಪರಾನಿಧಿಯಾಗಿ ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂದು ಖ್ಯಾತ ಭಾಷಣಕಾರ ಚರ್ಕರ್ವಿ ಸೂಲಿಬೆಲೆ ಹೇಳಿದರು.
ಗೋಕರ್ಣದಲ್ಲಿ ನಡೆದ ಯತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಕಂಚಿ ಶ್ರೀ ಹಾಗೂ ಆಸಾರಾಮ ಬಾಪು ಬಗ್ಗೆ ಬಂದ ಆರೋಪವನ್ನು ಪ್ರಸ್ತಾಪಿಸಿ ಮಾದ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕಂಚಿ ಶ್ರೀ ಹಾಗೂ ಆಸಾರಾಮ ಬಾಪು ಅವರ ಮೇಲೆ ಬಂದ ಆರೋಪ ಸತ್ಯಕ್ಕೆ ದೂರ ಎನ್ನುವುದು ಸಾಬೀತಾಯಿತು. ಆದರೆ ಕಂಚಿ ಶ್ರೀಗಳ ಮೇಲೆ ಆರೋಪ ಬಂದಾಗ ಮಾಧ್ಯಮಗಳು ೩೦ ತಾಸು ಅಪಪ್ರಚಾರ ನಡೆಸಿದವು. ನಂತರ ನಿರಪರಾಧಿ ಶ್ರೀಗಳ ಕುರಿತು ೧೫ ನಿಮಿಷ ಸುದ್ಧಿ ಬಿತ್ತರಿಸಿ ಸುಮ್ಮನಾದವು ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.
ಇತ್ತೀಚೆಗೆ ಧರ್ಮಗ್ರಂಥ ಹಾಗೂ ಗೋವಿನ ಮೇಲೆ ನಿರಂತರ ಪ್ರಹಾರ ಹೆಚ್ಚಿದೆ. ಶೇ ೮೦ ರಷ್ಟು ಜನರು ಗೋವನ್ನು ಪೂಜಿಸುತ್ತಿರುವಾಗ ರಾಜ್ಯದ ಮುಖ್ಯಮಂತ್ರಿಯಾದವರು ಗೋಮಾಂಸ ತಿನ್ನುವ ಹೇಳಿಕೆ ನೀಡುತ್ತಾರೆ. ವಿದೇಶಿಯರು ಈ ಹಿಂದೆ ದೇವಸ್ಥಾನ ಧ್ವಂಸಮಾಡಿದರು ಆದರೆ ಹಿಂದೂ ಧರ್ಮ ಅಳಿಯಲಿಲ್ಲ. ಯಾಕೆಂದರೆ ಪ್ರತಿಯೋರ್ವನಲ್ಲೂ ದೇವನಿದ್ದಾನೆ. ಹೀಗಾಘಿ ಹಿಂದೂ ಧರ್ಮಕ್ಕೆ ಸಾವಿಲ್ಲ ಎಂದರು.
ರಾಘವೇಶ್ವರ ಶ್ರೀ ಪ್ರಕರಣದ ಕುರಿತು ಮಾತನಾಡಿದ ಅವರು, ಶ್ರೀಗಳ ವಿರುದ್ಧ ಫೋಲೀಸರು ಹಾಕಿದ ಚಾರ್ಜಶೀಟನಲ್ಲಿ ಏನೂ ಹುರುಳಿಲ್ಲ. ಆರೋಪ ಮಾಡಿದವರ ಮೇಲಿನ ದೂರು ಸರಿಯಾಗಿ ತನಿಖೆಯಾದಲ್ಲಿ ಯಾರು ಯಾಕಾಗಿ ಮಾಡಿದ್ದಾರೆಂದು ತಿಳಿಯುತ್ತದೆ. ಪೊಲೀಸರು ಹಾಖಿದ ಚಾರ್ಟ್‌ಶೀಟ್‌ ಓದಿದರೆ ಇದೊಂದು ಷಡ್ಯಂತ್ರದಿಂದ ದಾಖಲಿಸಿದ ಕೇಸ್‌ ಎಂದು ತಿಳಿದುಬಿಡುತ್ತದೆ ಎಂದ ಅವರು, ಗುರುಗಳ ರಕ್ಷಣೆಗೆ ಶಿಷ್ಯರಿರಬೇಕು. ನಮ್ಮ ಆತ್ಮಬಲ ಗಟ್ಟಿಗೊಳ್ಳಬೇಕು. ಶ್ರೀಗಳ ಪರ ರಾಮನಿದ್ದಾನೆ. ಶ್ರೀಗಳನ್ನು ಕಾಪಾಡಲು ಬಂದ ಎಲ್ಲ ಸಮಾಜದ ಶಿಷ್ಯರು ಅವಿಸ್ಮರಣೀಯ ಎಂದರು.