o-SEX-BEDಸಕ್ಸ್‌ ಎಂದಾಕ್ಷಣ ಮುಜುಗುರ ಪಡುವುದೇ ಹೆಚ್ಚು. ಆದರೆ ಸೆಕ್ಸ್‌ ಅಥವಾ ಲೈಂಗಿಕ ಕ್ರಿಯೆಯಿಂದ ಉತ್ತಮ ಆರೋಗ್ಯ ಲಭಿಸುವ ಬಗ್ಗೆ ಗಮನಹರಿಸುವುದೇ ಇಲ್ಲ. ಈ ಬಗ್ಗೆ ಇಲ್ಲೊಂದು ಚಿಕ್ಕ ಮಾಹಿತಿ ಇದೆ ನೋಡಿ..
ಸೆಕ್ಸ್‌ ಕುರಿತು ಕೆಲವು ದೇಶಗಳಲ್ಲಿ ಮುಕ್ತವಾಗಿ ಚರ್ಚೆ ಮಾಡಲಾಗುತ್ತೆ. ಕಾರಣ ಏನೇ ಇರಲಿ. ಲೈಂಗಿಕ ಕ್ರಿಯೆಯಿಂದ ಗಂಡ, ಹೆಂಡತಿಯ ಸಂಬಂಧ ಬಲಗೊಳ್ಳುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ತ್ಯುತ್ತಮ ಎನ್ನುವುದು ಅಧ್ಯಯನ ವರದಿ.
ಪ್ರತಿದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಕೆಲವರಿಗೆ ತಿಳಿದ ವಿಚಾರ. ಅದರಲ್ಲೂ ಮಹಿಳೆಯ ವಿಚಾರಕ್ಕೆ ಬಂದರೆ, ಪುರುಷರಿಗಿಂತ ಮಹಿಳೆಯರಿಗೇ ಸೆಕ್ಸ್‌ನಿಂದ ಹೆಚ್ಚು ಲಾಭವಂತೆ. ಅಧ್ಯಯನವೊಂದರ ಪ್ರಕಾರ, ಉತ್ತಮ ಲೈಂಗಿಕ ಕ್ರಿಯೆಯಿಂದ ಮಹಿಳೆಯರ ಒತ್ತಡ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಚರ್ಮ ಕಾಂತಿಯುತವಾಗುವುದಲ್ಲದೇ, ದೇಹದ ತೂಕ ನಿಯಂತ್ರಣದಲ್ಲಿರುತ್ತದೆಯಂತೆ.
ವಾರದಲ್ಲಿ ಎರಡರಿಂದ ಮೂರು ಬಾರಿ ಸಂಬಂಧ ಬೆಳೆಸುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಹೊಡೆಯುವುದಿಲ್ಲ. ಲೈಂಗಿಕ ಕ್ರಿಯೆಯಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಹಾರ್ಮೋನುಗಳ ಬಿಡುಗಡೆಯಿಂದ ನೋವುಗಳಿಂದ ಬಿಡುಗಡೆ ಹೊಂದಬಹುದಾಗಿದೆ ಎನ್ನುವುದು ಅಧ್ಯಯನ ವರದಿ.