sonia-gandhi-herald-case-ನಾಗರಾಜ ಹೆಗಡೆ
ನ್ಯಾಶನಲ್ ಹೆರಾಲ್ಡ್ ಎನ್ನುವ ಹೆಸರನ್ನು ಬಹುತೇಕ ಎಲ್ಲರೂ ಕೇಳಿರಲೇ ಬೇಕು. ಇತ್ತೀಚೆಗಂತೂ ಈ ಸಂಸ್ಥೆಯಲ್ಲಿ ದೊಡ್ಡ ಗೋಲ್‌ಮಾಲ್‌ ನಡೆದು, ಸುದ್ಧಿಯಲ್ಲಿದೆ. ಇದು ಕಾಂಗ್ರೆಸ್‌ ಗ್ರೇಟ್‌ ಫೇಸ್‌ಗಳ ನಿದ್ದೆಗೆಡಿಸಿದೆ. ಸುಬ್ರಮಣಿಯನ್‌ ಸ್ವಾಮಿ ಗಾಂಧಿ ಕುಟುಂಬದ ಬಹುಕೋಟಿ ಅವ್ಯವಹಾರದ ದಂದೆಯನ್ನು ಬೆಳಕಿಗೆ ತಂದಿದ್ದಾರೆ. ಈ ಗೋಲ್‌ಮಾಲ್‌ಗೆ ಕೇವಲ ಗಾಂಧಿ ಕುಟುಂಬವಷ್ಟೇ ಭಾಗಿಯಾಗಿಲ್ಲ. ಇದಕ್ಕೆ ಕೈನ ಕೆಲವು ಗ್ರೇಟ್‌ ಫೇಸ್‌ ಎನಿಸಿಕೊಂಡವರು ಕೂಡ ಇದರಲ್ಲಿ ಕೈಜೋಡಿಸಿದ್ದಾರೆ..!
ಆದರೆ ಒಂದು ವಿಪರ್ಯಾಸ ಎಂದರೆ ಕೈ ಮುಖಂಡರಿಂದ ಇಷ್ಟೊಂದು ದೊಡ್ಡ ಗೋಲ್‌ಮಾಲ್‌ ನಡೆದಿದ್ದರೂ ಇದಕ್ಕೆಲ್ಲ ಪ್ರಧಾನಿ ಮೋದಿ ಕಾರಣ ಎನ್ನುವುದು ಎಷ್ಟೊಂದು ಹಾಸ್ಯಾಸ್ಪದ. ತಮ್ಮ ತಪ್ಪನ್ನು ಮುಚ್ಚಿಕೊಳ್ಳೋಕೆ ಇದಕ್ಕೆ ಬಿಜೆಪಿ ಕಾರಣ ಎಂದು ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ. ಅಲ್ಲದೇ ಈ ಮೂಲಕ ಜನರ ಸಿಂಪತಿ ಗಿಟ್ಟಿಸುವ ಹುನ್ನಾರ ಕಾಂಗ್ರೆಸ್‌ನದ್ದು, ಅದೇನೇ ಇರಲಿ,,,ಏನಿದು ಹೆರಾಲ್ಡ್‌ ಗಲಾಟೆ ಎಂದು ನೋಡಿದರೆ ಸೋನಿಯಾ ಗಾಂಧಿ ಕುಟುಂಬದ ಬ್ರಷ್ಟಾಚಾರದ ಅಸಲಿಯತ್ತು ಜಗಜ್ಜಾಹೀರಾಗುತ್ತದೆ. ಅದೇನಂತೀರಾ,, ನೀವೇ ಓದಿ,,
ನ್ಯಾಶನಲ್‌ ಹೆರಾಲ್ಡ್‌ ಸ್ಥಾಪನೆ ಮಾಡಿದ್ದು, ಜವಾಹರ ಲಾಲ್‌ ನೆಹರೂ. 1938ರಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪೆನಿಯೊಂದರ ಸ್ಥಾಪನೆಯಾಗಿದೆ. ಇದು ಮೊದಲು ನಂತದರಲ್ಲಿ ನ್ಯಾಷನಲ್ ಹೆರಾಲ್ಡ್ (ಇಂಗ್ಲಿಷ್), ನವಜೀವನ್ (ಹಿಂದಿ) ಮತ್ತು ಖ್ವಾಮಿ ಆವಾಜ್ (ಉರ್ದು)-ಆ ಮೂರು ದಿನಪತ್ರಿಕೆಗಳಾಗಿ ಈ ಸಂಸ್ಥೆಯ ಆಸ್ತಿ 5 ಸಾವಿರ ಕೋಟಿ ರೂ. ಗಳಿಸಿತ್ತು. ಇದೊಂದು ಪಬ್ಲಿಕ್‌ ಸೆಕ್ಟರ್‌ ಸಂಸ್ಥೆ. ನಂತರ ದಿನಗಳಲ್ಲಿ ಹಟಾತ್ ಬೆಳವಣಿಗೆ ಎನ್ನುವಂತೆ ಈ ಸಂಸ್ಥೆ ನಷ್ಟ ಅನುಭವಿಸುತ್ತದೆ. ಸುಮಾರು 2000 ನೇ ಸಾಲಿನಲ್ಲಿ ಸಂಸ್ಥೆಯ ನಷ್ಟ ಹೆಚ್ಚಾಗಿ ಸುಮಾರು 90 ಕೋಟಿ ಸಾಲದಲ್ಲಿದೆ ಎಂದು ಘೋಷಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಸಾಮ್‌ ಪಿತ್ರೋಡಾ ಎನ್ನುವವರು ಅದರ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದರು. ಈ ಸಮಯದಲ್ಲಿ ಯಂಗ್ ಇಂಡಿಯಾ ಎನ್ನುವ ಸಂಸ್ಥೆಗೆ ಮಾರಲು ನಿರ್ಧರಿಸಲಾಗುತ್ತದೆ. ಇಲ್ಲಿಂದ ಈ ಕಾಂಗ್ರೆಸ್ ಮುಖಂಡರ ಖರಾಮತ್ತು ಆರಂಭವಾಗುತ್ತದೆ.
ಇದನ್ನು ಮಾರಲು ನಿರ್ಧರಿಸಿದ ಈ ಮುಖಂಡರು ಒಂದು ಒಪ್ಪಂದವನ್ನೂ ಮಾಡಿಕೊಂಡರು. ಇದರ ಪ್ರಕಾರ, ಯಂಗ್ ಇಂಡಿಯಾ ಕಂಪನಿ ಹೆರಾಲ್ಡ್‌ 90 ಕೋಟಿ ರೂ ಸಾಲವನ್ನು ತೀರಿಸಬೇಕು. ಇದನ್ನು ತೀರಿಸಿದರೆ ಅಸೋಸಿಯೇಟೆಡ್‌ ಜರ್ನಲ್ಸ್ ಲಿಮಿಟೆಡ್ ಒಡೆತನದ ಹೆರಾಲ್ಡ್‌ ಪತ್ರಿಕೆಯ 5000 ಕೋಟಿ ರೂ ಆಸ್ತಿ ಯಂಗ್ ಇಂಡಿಯಾ ಕಂಪನಿಗೆ ನೀಡುವುದು ಎಂದು ಇದರ ಮಾಸ್ಟರ್ ಪ್ಲಾನ್. ವಿಪರ್ಯಾಸ ಎಂದರೆ ಈ ಯಂಗ್ ಇಂಡಿಯಾ ಎನ್ನುವ ಕಂಪನಿ ಯಾರದ್ದು ಎನ್ನೊದನ್ನು ಗಮನಿಸಿದರೆ ಇದರ ಮಾಸ್ಟರ್ ಪ್ಲಾನ್ ಭಟಾಬಯಲಾಗುತ್ತದೆ. ಈ ಯಂಗ್ ಇಂಡಿಯಾ ಕಂಪನಿ ಕೂಡ ಮೋತಿಲಾಲ್ ವೋರಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಾಗೂ ಆಸ್ಕರ್ ಫರ್ನಾಂಡಿಸ್, ಸಾಮ್‌ ಪಿತ್ರೋಡಾ ಹಾಗೂ ಸಂಜಯ್‌ ದುಬೆ ಒಡೆತನದ ಕಂಪನಿಯಾಗಿತ್ತು. ಇಲ್ಲಿ ಆಸ್ಕರ್ ಫರ್ನಾಂಡಿಸ್ ಒಬ್ಬರನ್ನು ಹೊರತು ಪಡಿಸಿದರೆ ಉಳಿದ ಸದಸ್ಯರೆಲ್ಲರೂ ಹೆರಾಲ್ಡ್ ಕಂಪನಿಯ ಸದಸ್ಯರೇ ಆಗಿದ್ದರು. ಅದರಲ್ಲಿಯೂ 38 ರಷ್ಟು, ಸೋನಿಯಾ ಗಾಂಧಿ ಹಾಗೂ 38 ರಷ್ಟು ಶೇರು ರಾಹುಲ್ ಗಾಂಧಿಗೆ ಸೇರಿದ್ದಾಗಿತ್ತು. ಅಂದರೆ ಯಂಗ್ ಇಂಡಿಯಾದ 76 ರಷ್ಟು ಶೇರು ಗಾಂಧಿ ಮನೆತನಕ್ಕೆ ಸೇರಿದೆ. ಉಳಿದ 24 ರಷ್ಟು ಈ ಮಾಸ್ಟರ್‌ ಪ್ಲಾನ್‌ಗೆ ಕೈಜೋಡಿಸಿದವರಿಗೆ ಸೇರಿದೆ.
ಇಲ್ಲೊಂದಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ಹೆರಾಲ್ಡ್‌ ಆಸ್ತಿ ಡೀಲ್ ಮಾಡಲು ಮುಂದಾಗಿದ್ದು ಮೋತಿಲಾಲ್ ವೋರಾ. ಹೆರಾಲ್ಡ್‌ ಡೈರೆಕ್ಟರ್ ಮೊತಿಲಾಲ್ ವೋರಾ ಯಂಗ್ ಇಂಡಿಯಾದ ಮೋತಿಲಾಲ್ ವೋರಾ ಜೊತೆ ಮಾತುಕತೆ ನಡೆಸಿ ಡೀಲ್ ಖುದುರಿಸಿದ್ದಾಗಿ ಕೊಟ್ಟಿ ಕಾಗದ ಪತ್ರ ತಯಾರಿಸಲಾಗಿದೆ. ಆದರೆ ಇಲ್ಲಿ ಮೋತಿಲಾಲ್ ವೋರಾ ಎನ್ನುವ ವ್ಯಕ್ತಿ ಎರಡೂ ಕಂಪನಿಯ ಡೈರೆಕ್ಟರ್ ಆಗಿರುತ್ತಾರೆ. ಅಂದರೆ ಅವನ ಜೊತೆಯಲ್ಲಿ ಅವನೇ ಮಾತುಕತೆ ನಡೆಸಿ ಡೀಲ್ ಕುದುರಿಸುತ್ತಾನೆ. ಇದು ಈ ಆಸ್ತಿ ಕಬಳಿಸೋ ಮಾಸ್ಟರ್ ಪ್ಲಾನ್.
ಈಗ ಇಲ್ಲೊಂದು ಟ್ವಿಸ್ಟ್ ಬರುತ್ತೆ. ಯಂಗ್ ಇಂಡಿಯಾ ಸಂಸ್ಥೆ ಹೆರಾಲ್ಡ್‌ ಸಾಲ ತೀರಿಸಲು ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ವಿನಂತಿಸಿಕೊಂಡಿತು. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಒಂದು ಸಭೆ ಕರೆಯಿತು. ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಹಾಗೂ ಖಜಾಂಚಿ ಸಭೆಯಲ್ಲಿ ಹಾಜರಾಗುತ್ತಾರೆ. ಈಗ ಮತ್ತೆ ಇವರೆಲ್ಲ ಮತ್ತೊಂದು ನಾಟಕಕ್ಕೆ ಸಜ್ಜಾಗುತ್ತಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್, ಖಜಾಂಚಿಯಾಗಿ ಮೋತಿಲಾಲ್ ವೋರಾ ಇರುತ್ತಾರೆ. ಈಗ ಯಂಗ್ ಇಂಡಿಯಾ ಸಾಲದ ಬೇಡಿಕೆಗೆ ಕಾಂಗ್ರೆಸ್ ಪಕ್ಷದ ಖಜಾಂಚಿ ಒಪ್ಪಿಗೆ ಸೂಚಿಸುತ್ತಾರೆ. ಇಲ್ಲಿ ಖಜಾಂಚಿ ಯಾರು. ಮತ್ತದೇ ಮೋತಿಲಾಲ್ ವೋರಾ..!
ಇಲ್ಲಿ ಕಾಂಗ್ರೆಸ್ ಪಕ್ಷದ ಖಜಾಂಚಿ ಸಾಲ ಪಡೆದ ಯಂಗ್ ಇಂಡಿಯಾದ ಡೈರೆಕ್ಟರ್ ಮೋತಿಲಾಲ್ ವೋರಾ ಹೆರಾಲ್ಡ್ ನಿರ್ಧೇಶಕ ಮೋತಿಲಾಲ್ ವೋರಾಗೆ ನೀಡಲಾಗುತ್ತದೆ. ಆಗ ಹೆರಾಲ್ಡ್‌ ನ 90 ಕೋಟಿ ಸಾಲ ತೀರಿಸಿ ಯಂಗ್ ಇಂಡಿಯಾ ಖರೀದಿಸುವ ಮೂಲಕ ನ್ಯಾಶನಲ್ ಹೆರಾಲ್ಡ್ ಎನ್ನುವ ಸಂಸ್ಥೆಯನ್ನು ಮುಳುಗಿಸಲಾಗುತ್ತದೆ. ಮರುದಿನ ಕಾಂಗ್ರೆಸ್ ಪಕ್ಷದ ಸಭೆ ಕರೆಯಲಾಗಿತ್ತು. ಮತ್ತೆ ಸೋನಿಯಾ, ರಾಹುಲ್, ಆಸ್ಕರ್ ಫರ್ನಾಂಡಿಸ್, ಮೋತಿಲಾಲ್ ವೋರಾ ಭಾಗವಹಿಸುತ್ತಾರೆ. ಈ ಸಭೆಯಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅದು ಏನಂತಾರಾ..? ನೀವೇ ಓದಿ,,,, ನ್ಯಾಶನಲ್ ಹೆರಾಲ್ಡ್ ನಮ್ಮ ಭಾರತದ ಸ್ವಾತಂತ್ರದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದೆ, ಇದಕ್ಕಾಗಿ ಹೆಲಾಲ್ಡ್‌ ನೀಡಿದ ಸಾಲವನ್ನು ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಆದರೆ ಇಲ್ಲಿ ಕಾಂಗ್ರೆಸ್ ಸಾಲ ನೀಡಿದ್ದು ಯಂಗ್ ಇಂಡಿಯಾಕ್ಕಾಗಿದ್ದರೂ ಹೆರಾಲ್ಡ್‌ ನೀಡಿದ್ದು, ಎನ್ನುವ ಕಾರಣಕ್ಕೆ ಸಾಲ ಮನ್ನಾ ಎಂದು ಘೋಷಣೆ ಮಾಡಲಾಗುತ್ತದೆ. ಆದರೆ ಹೆರಾಲ್ಡ್‌ 5000 ಕೋಟಿ ರೂ. ಆಸ್ತಿ ಮಾತ್ರ ಯಂಗ್ ಇಂಡಿಯಾ ಪಾಲಾಗುತ್ತದೆ. ಎಂಥ ಗ್ರೇಟ್ ಐಡಿಯಾ ಅಲ್ವಾ..?
ಯಂಗ್ ಇಂಡಿಯಾದಲ್ಲಿನ 76 ರಷ್ಟು ಶೇರು ಗಾಂಧಿ ಕುಟುಂಬದ ಸ್ವಾಧಿನಕ್ಕೆ ಬರುತ್ತದೆ. ಈ ಮಾಸ್ಟರ್ ಪ್ಲಾನ್‌ ನಲ್ಲಿ  ಕೈಜೋಡಿಸಿದವರಿಗೆ 24 ಪರ್ಸೆಂಟೇಜ್‌ ನಷ್ಟು ನೀಡಲಾಗಿದೆ. ದೆಹಲಿಯಲ್ಲಿರುವ ಬಹದ್ದೂರ್ ಶಾ ಜಫರ್ ರಸ್ತೆಯ 11 ಮಹಡಿಯ ಕಟ್ಟಡ ಒಳಗೊಂಡಿದೆ. ಈ ಕಟ್ಟಡದಲ್ಲಿ ಭಾತರದ ಪಾಸ್ಪೋರ್ಟ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಬಾಡಿಗೆಗೆ ನೀಡಲಾಗಿದೆ. ಇದರಿಂದ ಕೋಟ್ಯಂತರ ಬಾಡಿಗೆ ಯಂಗ್ ಇಂಡಿಯಾಕ್ಕೆ ಬರುತ್ತಿದ್ದು, ಇದರಲ್ಲಿ ಗಾಂಧಿ ಕುಟುಂಬಕ್ಕೆ ಹಾಗೂ ಮೋಸದಲ್ಲಿ ಕೈ ಜೋಡಿಸಿದ ಆಸ್ಕರ್ ಹಾಗೂ ವೋರಾ ಪಾಲು ಪಡೆಯುತ್ತಿದ್ದಾರೆ. ಈ ಮೂಲಕ 5000 ಕೋಟಿ ರೂ ಆಸ್ತಿ ಸ್ವಾಹಾ ಮಾಡಿದಂತಾಗಿದೆ. ಒಟ್ಟಾರೆ ಪ್ರಕರಣ ಕುತೂಹಲ ಸೃಷ್ಟಿಸಿದ್ದು, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಆದರೆ ಕಾಂಗ್ರೆಸ್‌ ಇದನ್ನೇ ಅನುಕಂಪದ ಅಸ್ತ್ರವಾಗಿ ಬಳಸುತ್ತಿದ್ದು, ಸಂಸತ್‌ ಕಲಾಪಗಳಿಗೆ ಅಡ್ಡಿ ಪಡಿಸುತ್ತಿರುವುದು ವಿಪರ್ಯಾಸ.