sexಲೈಂಗಿಕ ಶಕ್ತಿ ವೃದ್ಧಿಸಲು ನಾವು ಮಾತ್ರೆ, ತೈಲ ಇತ್ಯಾದಿಗಳಿಗೆ ಹಣ ವ್ಯಯಿಸುತ್ತೇವೆ. ಆದರೆ, ನಾವು ದಿನ ನಿತ್ಯ ಉಪಯೋಗಿಸಬಹುದಾದ ಕೆಲ ಆಹಾರಗಳಲ್ಲಿ ಲೈಂಗಿಕ ಶಕ್ತಿ ವರ್ಧಿಸುವ ಗುಣಗಳಿರುತ್ತವೆ. ಅಂಥ ಆಹಾರವನ್ನು ನಮ್ಮ ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ಲೈಂಗಿಕ ಜೀವನ ಸುಖಕರವಾಗುವುದರಲ್ಲಿ ಅನುಮಾನವೇ ಇಲ್ಲ.
ಇಂಥ ಕೆಲ ಆಹಾರಗಳು ಇಲ್ಲಿವೆ… ಸ್ಟ್ರಾಬೆರಿ: ತಿನ್ನಲು ಬಹಳ ರುಚಿಯಾಗಿರುವ ಸ್ಟ್ರಾಬೆರ್ರಿ ಹಣ್ಣು ಲೈಂಗಿಕ ಆಸಕ್ತಿಯನ್ನು ಕೆರಳಿಸುತ್ತದೆ. ಹೆಣ್ಣು ಮತ್ತು ಗಂಡು ಇಬ್ಬರಿಗೂ ಇದು ಪರಿಣಾಮಕಾರಿ. 2) ಬೆಳ್ಳುಳ್ಳಿ: ಹಲವು ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಲೈಂಗಿಕ ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ. ಲೈಂಗಿಕ ಅಂಗಗಳಿಗೆ ರಕ್ತ ಪರಿಚಲನೆ ಸುಗಮವಾಗುವಂತೆ ಮಾಡುವ ಮೂಲಕ ಲೈಂಗಿಕ ಸಾಮರ್ಥ್ಯ ವೃದ್ಧಿಸುತ್ತದೆ. 3) ಪಾಲಕ್ ಸೊಪ್ಪು: ಪಾಲಾಕ್ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಜೊತೆಗೆ, ಲೈಂಗಿಕ ಶಕ್ತಿ ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಕಾಮಾಸಕ್ತಿಯನ್ನು ವೃದ್ಧಿಸುತ್ತದೆ. 4) ಚಾಕೊಲೇಟ್: ಚಾಕೊಲೇಟ್ ಹೆಚ್ಚು ತಿನ್ನಬೇಡಿ ಎಂದು ಹೇಳುವುದನ್ನು ಚಿಕ್ಕಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ, ಚಾಕೊಲೇಟ್ ಸೆಕ್ಸ್ ಜೀವನಕ್ಕೆ ಬಹಳ ಉಪಯುಕ್ತವೆನಿಸಿದೆ. ಅದರಲ್ಲೂ ಮಹಿಳೆಯರ ಮೇಲೆ ಇದರ ಪರಿಣಾಮ ಇನ್ನೂ ಹೆಚ್ಚಿರುತ್ತದೆ. ಚಾಕೊಲೇಟ್ ತಿಂದಾಗ ಮಹಿಳೆಯರ ದೇಹದಲ್ಲಿ ಎಂಡಾರ್ಫಿನ್ ಉತ್ಪತ್ತಿಯಾಗುತ್ತದೆ. ಈ ಎಂಡಾರ್ಫಿನ್ ಹೆಚ್ಚು ಇದ್ದಷ್ಟು ಮಹಿಳೆಯರು ಪೂರ್ವಬಾವಿ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಾಳೆ. 5) ಕಿವಿ ಹಣ್ಣು: ಈ ರುಚಿಕರ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದರಿಂದ ಲೈಂಗಿಕ ಶಕ್ತಿ, ಕಾಮಾಸಕ್ತಿ ಮತ್ತು ಫಲವತ್ತತೆ ಹೆಚ್ಚಾಗುತ್ತದೆ. 6) ಕಲ್ಲಂಗಡಿ ಹಣ್ಣು: ದೇಹದ ದಾಹ ತಣಿಸುವ ಕಲ್ಲಂಗಡಿ ಹಣ್ಣು ಕಾಮದ ದಾಹವನ್ನೂ ತಣಿಸುತ್ತದೆ. ಕಲ್ಲಂಗಡಿಯನ್ನು ನೈಸರ್ಗಿಕ ವಯಾಗ್ರ ಎಂದೂ ಕೆಲವರು ಕರೆಯುತ್ತಾರೆ. ಈ ಹಣ್ಣಿನಲ್ಲಿ ಸಿಟ್ರುಲೈನ್ ಎಂಬ ಅಂಶವಿದ್ದು, ಇದು ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಚಲನೆಯನ್ನು ಸುಲಭ ಮಾಡುತ್ತದೆ.