salvider singh-ನಾಗರಾಜ ಹೆಗಡೆ
ಅಂದು ಜನೆವರಿ 2. ದೇಶದ ಜನರೆಲ್ಲರೂ ಹೊಸ ವರ್ಷದ ಆಚರಣೆಯ ಗುಂಗಿನಿಂದ ಆಗಷ್ಟೇ ಹೊರಬಂದಿದ್ದರು. ಆದರೆ ಇದೇ ಸಂದರ್ಭದಲ್ಲಿ ಇಡೀ ದೇಶವೇ ಬೆಚ್ಚಿ ಬೇಳುವ ಘಟನೆಯೊಂದು ನಡೆದುಹೋಗುತ್ತದೆ. ಮತ್ತೊಮ್ಮೆ ಗುಂಡಿನ ಸದ್ದು. ಇದೇ ಪಾಕ್‌ ಪ್ರಚೋದಿತ ಉಗ್ರರ ದಾಳಿ. ಅದುವೇ ಪಠಾಣಕೋಟ್‌ನಲ್ಲಿ ನಡೆದ ಉಗ್ರರ ಸಂಚು. ಇದಕ್ಕೆ ನಮ್ಮವರಿಂದಲೇ ಸಿಕ್ಕಿದೆ ಸಪೋರ್ಟ್.
ಹೌದು,,,,ಅಂದು ಡಿಸೆಂಬರ್‌ 31. ಉಗ್ರರು ಪಂಜಾಬ್‌ ಗಡಿ ದಾಟಿ ಭಾರತ ಪ್ರವೇಶಿಸುತ್ತಾರೆ. ಅಲ್ಲಿಂದ ಮುಂದೆ ಬಂದ ಟೆರರಿಸ್ಟ್‌, ಇನೋವಾ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಆ ಕಾರ್‌ ಕೂಡ ಪಾಕಿಸ್ಥಾನದಿಂದಲೇ ಬುಕ್‌ ಮಾಡಲಾಗಿತ್ತು. ಸ್ಪಲ್ಪ ದೂರ ಹೋದ ನಂತರ ಕಾರಿನ ಡ್ರೈವರ್‌ನ ಕುತ್ತಿಗೆ ಕೊಯ್ದು ಹೊರಗೆ ಎಸೆಯುತ್ತಾರೆ. ಹಾಗೇಯೇ ಮುಂದೆ ಸುಮಾರು 20 ಕಿ.ಮಿ ಸಾಗಿದ ನಂತರ ಇನೋವಾ ಕಾರಿನ ಟೈರ್‌ ಪಂಚರ್‌ ಆಗುತ್ತದೆ. ಆಗ ಅಲ್ಲಿಗೆ ಗುರುದಾಸ್‌ಪುರ ಎಸ್‌ಪಿ ಸುಲ್ವಿಂದರ್‌ ಸಿಂಗ್‌ ಮತ್ತು ಅವರ ಸಹಚರರು ಬರುತ್ತಾರೆ. ಅವರ ಅವರ ಕಾರನ್ನು ತಡೆದು ನಿಲ್ಲಿಸಿದ ಉಗ್ರರು, ಅವರನ್ನು ಥಳಿಸಿ ಕೈಕಾಲು ಕಟ್ಟಿ, ಮೊಬೈಲ್‌ ಕಸಿದುಕೊಳ್ಳುತ್ತಾರೆ. ನಂತರ ಸ್ಪಲ್ಪದೂರ ಸಾಗಿ ಎಸ್‌ಪಿ ಸಲ್ವಿದರ್‌ ಸಿಂಗ್‌ ಹಾಗೂ ಇನ್ನೊಬ್ಬನ್ನು ಮರಕ್ಕೆ ಕಟ್ಟಿಹಾಕಲಾಗುತ್ತದೆ. ಜೊತೆಯಲ್ಲಿದ್ದ ಇನ್ನೊಬ್ಬನ್ನು ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಾದ ನಂತರ 2 ಚೆಕ್‌ಪೋಸ್ಟ್‌ ಗಳನ್ನು ದಾಟಿದ ನಂತರ ಎಸ್‌ಪಿ ಅವರಿಂದ ಕಸಿದುಕೊಂಡ ಮೊಬೈಲ್‌ನಿಂದ ಯಾರೊಂದಿಗೋ ಮಾತನಾಡುತ್ತಾರೆ. ಕರೆದೊಯ್ದವನ ಕುತ್ತಿಗೆಗೆ ಗಾಯ ಮಾಡಿ ಗಾಡಿಯಿಂದ ಹೊರಹಾಕುತ್ತಾರೆ. ನಂತರ ಸಲ್ವಿಂದರ್‌ ಸಿಂಗ್‌ ಮಾಹಿತಿಯಂತೆ ಕಾರ್ಯಾಚರಣೆ ಶುರುವಾಗುತ್ತದೆ. ಇದು ಗುರುದಾಸ್‌ಪುರ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಹೇಳಿದ ಕಹಾನಿ.
ಆದರೆ ಈ ಕಹಾನಿಯ ನಂತರವೇ ಉಗ್ರರ ನಿಜವಾದ ಸಂಚು ಹೊರಬೀಳುವುದು..! ಪಠಾಣಕೋಟ್‌ ವಾಯುನೆಲೆಯ 500 ಮಿ. ದೂರಲ್ಲಿ ಗಾಡಿ ನಿಲ್ಲಿಸಿದ ಉಗ್ರರು ದಾಳಿಗೆ ಮುಂದಾಗಿದ್ದು, ಜನೆವರಿ 2 ರ ಬೆಳಗಿನ ಜಾವ 3.30ಕ್ಕೆ. ವಾಯುನೆಲೆಯಲ್ಲಿ ಗುಂಡಿನ ಸದ್ದು ಮೊಳಗಿದ ಹಿಂದೆ ಸ್ವಿಂದರ್‌ ಹೇಳಿದ ಕಹಾನಿ ಅನುಮಾನ ಹುಟ್ಟುಹಾಕಿದೆ. ಜೊತೆಗೆ ಅವರ ಜೊತೆಗಿದ್ದವರ ಹೇಳಿದ ಸ್ಟೋರಿ ಕೂಡ ಸಾಕಷ್ಟು ಗೊಂದಲಕ್ಕಂತೂ ಕಾರಣವಾಗಿದ್ದು ಸತ್ಯ. ಡಿ.31 ರ ರಾತ್ರಿ 10 ಗಂಟೆ ಸುಮಾರಿಗೆ ಗುರುದಾಸಪುರದ ಎಸ್‌ಪಿ ಯಾವುದೂ ಭದ್ರತಾ ಸಿಬ್ಬಂದಿ ಇಲ್ಲದೇ ಎಲ್ಲಿಗೆ ಹೋಗಿದ್ದರು.? ಅವರೇ ಹೇಳುವವಂತೆ ಗೆಳೆಯ ಚಿನ್ನದ ವ್ಯಾಪಾರಿ ರಾಜೇಶ ವರ್ಮ ಮತ್ತು ಅವರ ಮನೆಯ ಅಡಿಗೆಯವನಾದ ಮದನಗೋಪಾಲ ಗಡಿ ಭಾಗದ ನಿರ್ಜನ ಪ್ರದೇಶದಲ್ಲಿರುವ ಪಂಜ್‌ಫಿರ್‌ ದರ್ಗಾಕ್ಕೆ ಹೋಗಿದ್ದರಂತೆ. ಜೊತೆಗೆ ಪಂಜ್‌ಫಿರ್‌ ದರ್ಗಾಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ ಎಂದೂ ಹೇಳಿಕೆ ನೀಡಿದ್ದಾರೆ. ಆದರೆ ದರ್ಗಾದ ನಿರ್ವಾಹಕನ ಹೇಳಿಕೆ ಎಸ್‌ಪಿ ಹೇಳಿಕೆಗೆ ವಿರುದ್ಧವಾಗಿದೆ, ಈ ಪ್ರಕಾರ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಅಲ್ಲಿಗೆ ಬಂದಿದ್ದು, ಇದೇ ಮೊದಲು. ಸುಮಾರು 8.30 ರ ಸುಮಾರಿಗೆ ದೂರವಾಣಿ ಮೂಲಕ ದರ್ಗಾಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ದರ್ಗಾರ ಬಾಗಿಲು ಮುಚ್ಚದಂತೆಯೂ ಸೂಚನೆ ನೀಡಿದ್ದರು. ಹೀಗೆ ದರ್ಗಾಕ್ಕೆ ಭೇಟಿ ನೀಡುವಾಗಲೇ ಈ ಘಟನೆ ನಡೆದಿದೆ ಎಂದು ಸಲ್ವಿಂದರ್‌ ಸಿಂಗ್‌ ಹೇಳಿದ್ದಾರೆ. ಆದರೆ ಸಲ್ವಿಂದರ್‌ ಜೊತೆಗಿದ್ದ ಮೂವರೂ ಒಂದೊಂದು ಹೊಸ ಕಹಾನಿ ಬಿಟ್ಟಿದ್ದಾರೆ ಇದು ಒಂದಕ್ಕೊಂದು ಸಂಬಂಧವಿಲ್ಲದೇ ಗೊಂದಲಮೂಢಿಸಿದೆ.
ತಾವು ಕಾರಿನಲ್ಲಿ ಕುಳಿತು ಬಂಧಿಯಾಗಿದ್ದೆವು. ಸುಮಾರು 4-5 ಜರಿರುವ ಉಗ್ರರು, ಉರ್ದು ಅರೆಬಿಕ್‌ ಹಾಗೂ ಪಂಜಾಬಿ ಮಾತನಾಡುತ್ತಿದ್ದರು. ಆದರೆ ಏನು ಮಾತನಾಡುತ್ತಿದ್ದರು ಎಂದು ತಿಳಿಯುತ್ತಿರಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲಿ ಸಾಕಷ್ಟು ಗೊಂದಲ ಹಾಗೂ ಅನುಮಾನಗಳು ಸೃಷ್ಟಿಯಾಗಿದೆ. ಪಂಜಾಬ್‌ನವರಾದ ಸಲ್ವಿಂದರ್‌ ಸಿಂಗ್‌, ಪಂಜಾಬಿ ಹಾಗೂ ಉರ್ದು ತಿಳಿಯಬಲ್ಲರು. ಹೀಗಾಗಿ ಅವರ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಉಗ್ರರ ದಾಳಿಯ ಮುನ್ಸೂಚನೆ ಇದ್ದರೂ ಯಾವುದೇ ಭದ್ರತೆ ಇಲ್ಲದೇ ದರ್ಗಾಕ್ಕೆ ಭೇಟಿ ನೀಡಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸರಿ, ಎಸ್‌ಪಿ ಗುರುವಿನ ಭಕ್ತರು ಅಲ್ಲಿಗೆ ಹೋದರು ಎಂದೇ ಇಟ್ಟುಕೊಳ್ಳೋಣ. ಕಿಡ್ನಾಪ್‌ ಆದ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಹಾಗೂ ಅವರ ಅಡಿಗೆಯವನ ಮದನಗೋಪಾಲ್‌ನನ್ನು ಮರಕ್ಕೆ ಕಟ್ಟಿಹಾಕಿ ಅವರ ಗೆಳೆಯ ರಾಜೇಶ ವರ್ಮಾ ಅವರನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋದರು. ಅದೇ ಸಮಯದಲ್ಲಿ ಕಷ್ಟಪಟ್ಟು ಬಿಸಿಕೊಂಡ ಎಸ್‌ಪಿ ಸುಮಾರು ರಾತ್ರಿ 9.30 ರ ಸುಮಾರಿಗೆ ತಮ್ಮ ಬಳಿ ಇದ್ದ ಇನ್ನೊಂದು ಮೊಬೈಲ್‌ನಿಂದ ಮೇಲಿನ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ ಅದನ್ನು ತಿಳಿದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಕೈಗೊಂಡಿದ್ದು ಮಾತ್ರ ಮರುದಿನ ಮಧ್ಯಾಹ್ನ ಸುಮಾರು 4.30ಕ್ಕೆ. ನಂತರ ಅಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗುತ್ತದೆ. ಉಗ್ರರನ್ನು ಹುಡುಕುವ ಕೆಲಸವೂ ನಡೆಯುತ್ತದೆ. ಆದರೆ ಅಂದು ಉಗ್ರರ ಸುಳಿವು ಇರುವವುದಿಲ್ಲ. ನಂತರ ಉಗ್ರರು ದಾಳಿ ಆರಂಭಿಸಿದ್ದು, ಮರುದಿನ ಬೆಳಗಿನ ಜಾವ ಸುಮಾರು 3.30ಕ್ಕೆ. ಅಂದರೆ ಎಸ್‌ಪಿ ಇಲಾಖೆಗೆ ಉಗ್ರರ ಬಗ್ಗೆ ವಿಷಯ ತಿಳಿಸಿದ ಸುಮಾರು 24 ಗಂಟೆಗಳ ನಂತರ. ಅಲ್ಲಿಯ ತನಕ ಉಗ್ರರು ವಾಯುನೆಲೆಯಲ್ಲಿ ಯಾವ ಮೂಲೆಯಲ್ಲಿ ಅಡಗಿ ಕುಳಿತಿದ್ದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಅಂದರೆ ವಾಯು ನೆಲೆಯಲ್ಲಿಯೇ ಇನ್ಯಾರದ್ದಾದರೂ ಸಹಾಯ ಪಡೆದಿದ್ದರಾ..? ಎನ್ನುವ ಅನುಮಾನಕ್ಕೂ ಪುಷ್ಠಿ ನೀಡಿದೆ. ಆದರೆ ತನಿಖಾ ಸಂಸ್ಥೆಯ ಪ್ರಕಾರ ವಿಷಯ ತಿಳಿದ ತಕ್ಷಣವೇ ಕಾರ್ಯಾಚರಣೆ ಆರಂಭವಾಗಿದೆ. ಹೀಗಾಗಿ ಇದರಲ್ಲಿ ಎಸ್‌ಪಿ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಉಗ್ರರಿಗೆ ಸಹಾಯ ಮಾಡಿದ್ದರೆ..? ಎನ್ನುವ ಪ್ರಶ್ನೆ ಮತ್ತೆ ಬಲವಾಗಿ ಮೂಢ ತೊಡಗಿದೆ. ಈ ಬಗ್ಗೆ ತನಿಖಾ ಸಂಸ್ಥೆ ಕೂಡ ಅನುಮಾನ ವ್ಯಕ್ತಪಡಿಸಿದ್ದು, ನಮ್ಮ ದೇಶದವರಿಂದಲೇ ಸಹಾಯ ಸಿಗುತ್ತಿದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಉಗ್ರರು ವಾಯುನೆಲೆ ಪ್ರದೇಶದ ಇಂಚು ಇಂಚು ತಿಳಿದಿದ್ದರು ಎನ್ನುವ ವಾದಕ್ಕೆ ಇದು ಪುಷ್ಠಿ ನೀಡಿದಂತಾಗಿದೆ.
ನಮ್ಮ ದೇಶ ಪ್ರಮುಖ ವಾಯುನೆಲೆಯಾದ ಪಠಾಣಕೋಟ್‌ನಲ್ಲಿ ಬಿಗಿ ಭದ್ರತೆಗೇನೂ ಕೊರತೆ ಇರಲಿಲ್ಲ. ಆದರೂ ಉಗ್ರರು ಸಲೀಸಾಗಿ ಒಳನುಸುಳಿದ್ದಾರೆ.ಇದಕ್ಕೆ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತಿದೆ. ಆದರೆ ಓರ್ವ ಎಸ್‌ಪಿ ಜವಾಬ್ದಾರಿಯುವ ಹುದ್ದೆಯಲ್ಲಿದ್ದವ ಹೇಗೆ ಉಗ್ರರಿಗೆ ಸಹಾಯ ಮಾಡಲು ಸಾಧ್ಯ. ಅದೂ ದೇಶದ ಅತ್ಯುನ್ನತ ಮಾಹಿತಿಗಳನ್ನು ನೀಡಿ ಅವರು ಒಳ ನುಸುಳುವವರೆಗೂ ಸಹಕರಿಸಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಈ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಟ್ರಾಕ್‌ ರೆಕಾರ್ಡ ನೋಡಿದರೆ ಎಲ್ಲವೂ ತಿಳಿದು ಹೋಗಿ ಬಿಡುತ್ತದೆ. ಏಕೆಂದರೆ ಈ ಮೊದಲು ಇದೇ ಎಸ್‌ಪಿ ಸಲ್ವಿಂದರ್‌ ಸಿಂಗ್‌, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದರು. ಸೆಕ್ಸ್‌ ಗೆ ಸಂಬಂಧಿಸಿದ ಕೆಲವು ಆರೋಪ ಇವರ ಮೇಲಿದೆ. ಹೀಗಾಗಿ ಪಾಕ್‌ ಈಗಾಗಲೇ ಭಾರತೀಯ ಸೇನೆಯ ಕೆಲವರನ್ನು ಹನಿಟ್ರಾಪ್‌ಗೆ ಬೀಳಿಸಿದಂತೆಯೇ ಸಲ್ವಿಂದರ್‌ ಸಿಂಗ್‌ನನ್ನು ಬೀಳಿಸಿತೇ ಎನ್ನುವ ಅನುಮಾನ ದಟ್ಟವಾಗಿದೆ. ಈ ಹಿಂದೆ ಸೇನೆಯ ಓರ್ವ ಯೋಧ ಹನಿಟ್ರಾಪ್‌ಗೆ ಬಿದ್ದು, ದೇಶದ ಅತೀ ಅಮೂಲ್ಯ ಮಾಹಿತಿಗಳನ್ನು ಪಾಕಿಸ್ಥಾನಕ್ಕೆ ರವಾನಿಸುತ್ತಿದ್ದ ಎನ್ನನುವ ಬಗ್ಗೆ ತನಿಖಾ ಸಂಸ್ಥೆ ಬೆಳಕಿಗೆ ತಂದಿದೆ. ಆತ ಇದೇ ವಾಯುನೆಲೆಯ ಮಾಹಿತಿ ನೀಡವವನಿದ್ದ ಎನ್ನುವ ಆಘಾತಕಾರಿ ಮಾಹಿತಿಯೂ ಬೆಳಕಿಗೆ ಬಂದಿತ್ತು. ಈ ಘಟನೆಯಿಂದ ಸಲ್ವಿಂದರ್‌ ಸಿಂಗ್‌ ಕೂಡ ಇದೇ ಹನಿ ಟ್ರಾಪ್‌ಗೆ ಒಳಗಾಗಿದ್ದರೆ ಎನ್ನುವ ಅನುಮಾನವೂ ವ್ಯಕ್ತವಾಗಿದೆ,
ಸಲ್ವಿಂದರ್‌ ಸಿಂಗ್‌ ಭೇಟಿ ನೀಡಬೇಕಿದ್ದ ದರ್ಗಾದ ಸುತ್ತ ಮುತ್ತ ಪಾಕ್‌ ಉಗ್ರರು ಧರಿಸಿದ್ದ ಶೂಗಳ ಹೆಜ್ಜೆ ಗುರುತು ಕಂಡುಬಂದಿದೆ. ಅಲ್ಲಿ ಕಂಡುಬಂದಿದಿದ್ದ ಹೆಜ್ಜೆಗುರುತು ಪಾಕಿಸ್ಥಾನದ ಎಫ್‌ಕಾಟ್ ಭ್ರಾಂಡ್‌ನ ಶೂಗಳದ್ದಾಗಿತ್ತು. ಇದು ಪಠಾಣ್‌ಕೋಟ್‌ ವಾಯುನೆಲೆಗೆ ದಾಳಿಯಿಟ್ಟ ಪಾಕ್‌ ಉಗ್ರರು ಧರಿಸಿದ್ದ ಶೂ ಕೂಡ ಒಂದೇ ಆಗಿತ್ತು. ಹೀಗಾಗಿ ಎಸ್‌ಪಿ ದರ್ಗಾದಲ್ಲಲಿಯೇ ಉಗ್ರರನ್ನು ಭೇಟಿಮಾಡುವ ಪ್ರಯತ್ನವಿತ್ತೇ.? ನಂತರ ಈ ಪ್ಲಾನ್‌ ಬದಲಾವಣೆ ಮಾಡಲಾಯಿತೇ.? ಎಸ್‌ಪಿ ಮೊಬೈಲ್‌ನಿಂದ ಉಗ್ರರು ದೂರವಾಣಿ ಕರೆ ಮಾಡಿದ್ದು ಪಾಕಿಸ್ಥಾನಕ್ಕೆ ಎಂದು ಈಗಾಗಲೇ ತಿಳಿದುಬಂದಿದೆ. ಉಗ್ರರು ತಂದಿದ್ದ ಗನ್‌ ಕೂಡ ಪಾಕಿಸ್ಥಾನಿ ಮೇಡ್‌. ಹೀಗಾಗಿ ಪಾಕ್‌ ಭಾರತದ ಮೇಲೆ ಸಂಚು ರೂಪಿಸಿದ್ದರು ಇಲ್ಲಿ ಸ್ಪಷ್ಟವಾಗಿದೆ. ಆದರೆ ಇಲ್ಲಿ ನಮ್ಮವರೇ ನಮಗೆ ಶತ್ರುವಾಗುವ ಮೂಲಕ ದೇಶದ ಐಕ್ಯತೆ ದಕ್ಕೆ ತರುತ್ತಿದ್ದಾರೆ. ಆದರೆ ಉಗ್ರರಿಗೆ ಸಹಾಯ ಮಾಡುತ್ತಿದ್ದ ನಮ್ಮವರೆನಿಸಿಕೊಂಡವರು ಯಾರು ಎನ್ನುವುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.