ಬೆಂಗಳೂರು, ಆಗಸ್ಟ್ 19: ಮೋಸ ಮಾಡಿದ ಹುಡುಗನ ಮೇಲೆ ಪೊಲೀಸ್ ಕೇಸ್ ಹಾಕುವುದು, ಇಲ್ಲವೇ ರೌಡಿಗಳನ್ನು ಬಿಟ್ಟು ಥಳಿಸುವುದು… ಅದು ಆಗಲಿಲ್ಲ ಎಂದರೆ ಆತನ ಮಾನ-ಮರ್ಯಾದೆ ಹರಾಜು ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಅದನ್ನೆಲ್ಲವನ್ನು ಮೀರಿ ಮುಂದಕ್ಕೆ ಹೋಗಿದ್ದಾಳೆ. ತನಗೆ ಮೋಸ ಮಾಡಿದ ಹುಡುಗನ ಪುರುಷತ್ವಕ್ಕೆ ಬೆಂಕಿ ಇಟ್ಟಿದ್ದಾಳೆ. ಅಂತರ್ಜಾಲಕ್ಕೆ ಅಪ್ ಲೋಡ್ ಆಗಿರುವ ವಿಡಿಯೋ ವೈರಲ್ ಆಗಿದ್ದು ಮೋಸ ಮಾಡಿದರೆ ಹುಷಾರ್ ಎಂದು ಕೂಗಿ ಹೇಳಿದಂತಿದೆ.
ವರದಿಗಳು ಹೇಳುವಂತೆ ಈತ ತನ್ನ ಸಹೋದ್ಯೋಗಿಗಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಇದು ತಿಳಿದ ಮೇಲೆ ಸುಮ್ಮನಿದ್ದ ಆತನ ಗೆಳತಿ ಅಥವಾ ಹೆಂಡತಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದಳು. ಆತ ಮಲಗಿದ್ದ ವೇಳೆ ನೇಲ್ ಪಾಲಿಶನ್ನು ಅವನ ಖಾಸಗಿ ಜಾಗದ ಮೇಲೆ ಸುರಿದು ನಂತರ ಬೆಂಕಿ ಹಚ್ಚಿದ್ದಾಳೆ. ಸುಖವಾಗಿ ನಿದ್ರಿಸುತ್ತಿದ್ದವ ಬೆಂಕಿಯ ಉರಿಗೆ ಒಮ್ಮೆಲೆ ಎದ್ದು ನಿಂತಿದ್ದಾನೆ. ಈ ಎಲ್ಲ ಘಟನಾವಳಿಗಳನ್ನು ವಿಡಿಯೋ ಮಾಡಿ ಅಪ್ ಲೋಡ್ ಮಾಡಿರುವ “ಆಕೆ” ತನಗೆ ಮೋಸ ಮಾಡಿದವನ ಮೇಲಿನ ಸೇಡನ್ನು ಸಖತ್ತಾಗೇ ತೀರಿಸಿಕೊಂಡು ಸಂಭ್ರಮ ಅನುಭವಿಸಿದ್ದಾಳೆ