jhanvi-1ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿ ಖ್ಯಾತಿ ಗಳಿಸಿದ್ದ ಲೂಧಿಯಾನ ಮೂಲದ 15 ವರ್ಷದ ಬಾಲಕಿ ಝಾನ್ವಿ ಬೆಹಲ್, ಇದೀಗ, ಅಗಸ್ಟ್ 15 ರಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ಘೋಷಿಸಿದ್ದಾಳೆ.
ನಾನು ಅಗಸ್ಟ್ 15 ರಂದು ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದೇನೆ. ಯಾರಿಗಾದರೂ ತಾಕತ್ತಿದ್ರೆ ತಡೆಯಿರಿ ಎಂದು ಬಹಿರಂಗ ಸವಾಲ್ ಒಡ್ಡಿದ್ದಾಳೆ.
ಶ್ರೀನಗರದ ಲಾಲ್‌ಚೌಕ್‌ನಲ್ಲಿ ಕೆಲ ಪ್ರತ್ಯೇಕತಾವಾದಿಗಳು ಮತ್ತು ವಿದ್ಯಾರ್ಥಿಗಳು ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿ ಅಪಮಾನ ಮಾಡಿದ್ದಾರೆ. ಆದ್ದರಿಂದ , ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವುದು ನನ್ನ ಉದ್ದೇಶವಾಗಿದೆ ಎಂದು ಬೆಹಲ್ ತಿಳಿಸಿದ್ದಾಳೆ.
ಭಾರತ ದೇಶದಲ್ಲಿ ಶತ್ರು ದೇಶದ ರಾಷ್ಟ್ರಧ್ವಜವನ್ನು ಹಾರಿಸುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದೇನೆ. ದೇಶವಿರೋಧಿಗಳಿಗೆ ತಾಕತ್ತಿದ್ರೆ ನನ್ನನ್ನು ತಡೆಯಲಿ ಎಂದು ಝಾನ್ವಿ ಬೆಹಲ್ ವಾಗ್ದಾಳಿ ನಡೆಸಿದ್ದಾಳೆ.