supreme_court_ಭಾರತದಲ್ಲಿ ಸೈಬರ್‌ ಕ್ರೈಂ ಹೆಚ್ಚಳಕ್ಕೆ ಸಾಫ್ಟ್‌ವೇರ್‌ ದೈತ್ಯ ಕಂಪನಿಗಳಾದ ಗೂಗಲ್‌ ಇಂಡಿಯಾ, ಯಾಹೂ, ಮೈಕ್ರೋಸಾಫ್ಟ್‌, ಫೇಸ್‌ಬುಕ್ ಕಂಪನಿಗಳು ಕಾರಣ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯ ಸೋಮವಾರ ನೋಟೀಸ್‌ ಜಾರಿಮಾಡಿದೆ.
ಭಾರತದಲ್ಲಿ ಸೈಬರ್‌ ಅಪರಾದಗಳು ಹೆಚ್ಚಳಕ್ಕೆ ಈ ದೈತ್ಯ ಕಂಪನಿಗಳೇ ಕಾರಣವಾಗಿದ್ದು, ಈ ಬಗ್ಗೆ ಕಂಪನಿಗಳು ಯಾವ ಕ್ರಮ ಕೈಕೊಂಡಿದೆ ಎಂದು ಸುಪ್ರಿಂ ಕೋರ್ಟ್‌ ಪ್ರಶ್ನಿಸಿದೆ. ಹೈದರಾಬಾದ್‌ ಮೂಲಕ ಪ್ರಜ್ವಾಲಾ ಎನ್ನುವ ಎನ್‌ಜಿಓ ಒಂದು ಭಾರತದಲ್ಲಿ ಸೈಬರ್‌ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಈ ಸಾಫ್ಟ್‌ವೇರ್‌ ಕಂಪನಿಗಳೇ ನೇರ ಹೊಣೆ ಎಂದು ಸುಪ್ರಿಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿಸಾಸಕ್ತಿ ಅರ್ಜಿಸಲ್ಲಿಸಿತ್ತು. ಇದಕ್ಕೆ ೯ ಅತ್ಯಾಚಾರ ವಿಡಿಯೋಗಳು ವಾಟ್ಸ್‌ಆಪ್‌ ಮೂಲಕ ವೈರಲ್‌ ಆಗಿದ್ದನ್ನು ಪತ್ತೆ ಹಚ್ಚಿ ಅರ್ಜಿ ಸಲ್ಲಿಸಲಾಗಿತ್ತು.
ಐಟಿ ಕಾಯಿದೆಯ ಮಾಹಿತಿಯಂತೆ ೨೦೧೧ ರಿಂದ ೨೦೧೪ರ ವರೆಗೆ ಶೇ. ೩೦೦ ರಷ್ಟು ಸೈಬರ್‌ ಅಪರಾದಗಳು ಹೆಚ್ಚುತ್ತಿವೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಎಡವಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಸೈಬರ್ ಅಪರಾದವನ್ನು ಹಾಗೂ ರಾಷ್ಟ್ರೀಯ ಭದ್ರತೆಗಳಿಗೆ ಸಂಬಂಧಿಸಿದಂತೆ ಉಳಿದ ಭದ್ರತಾ ಇಲಾಖೆಗಳ ಸಹಯೋಗದೊಂದಿಗೆ National Cyber Crime Coordination Centre (NCCC) ನೋಡಿಕೊಳ್ಳುತ್ತಿದೆ. ಆದರೂ ಸೈಬರ್‌ ಅಪರಾಧಕ್ಕೆ ಕಂಪನಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ನೋಟೀಸ್‌ ಜಾರಿಗೊಳಿಸಲಾಗಿದೆ.