madhuparkaಇಕ್ವಾಕು ವಂಶದ ರಾಜ ಯವನಾಶ್ವ ಮಕ್ಕಳಿಲ್ಲದ ಚಿಂತೆಯಲ್ಲಿ ಕುಳಿತಿರುವ ಸಂಧರ್ಭ ಆರಮನೆಗೆ ಶಿಷ್ಯರೊಂದಿಗೆ ಭ್ರುಗು ಮುನಿಯ ಆಗಮನವಾಗುತ್ತದೆ.. ರಾಜನ ಚಿಂತೆಯ ಕಾರಣವನ್ನರಿತ ಮುನಿಗಳು ರಾಜನಿಗೆ ಪುತ್ರಕಾಮೇಷ್ಠಿ ಯಾಗವನ್ನ ಮಾಡಲು ಸೂಚಿಸುತ್ತಾರೆ. ಯವನಾಶ್ವ ಭ್ರುಗುಮುನಿಯ ಪೌರೋಹಿತ್ಯದಲ್ಲಿ ಯಾಗವನ್ನ ನೆರವೇರಿಸುತ್ತಾನೆ. ಯಾಗ ಸಂಮಾಪ್ತಿಯಾದಾಗ ಪ್ರಸಾದ ರೂಪದಲ್ಲಿ ತಿರ್ಥಜಲವು ಸಿಗುವುದು. ಮುನಿಗಳು ತಮ್ಮ ಶಿಷ್ಯನಲ್ಲಿ ತಿರ್ಥ ಜಲವನ್ನ ರಾಜನ ಮಡದಿಗೆ ನೀಡಲು ಕಳುಹಿಸುತ್ತಾರೆ ಆದರೆ ಶಿಷ್ಯ ರಾತ್ರಿಯಾದ್ದರಿಂದ ನಾಳೆ ಬೆಳಿಗ್ಗೆ ಕೊಡುವೆನೆಂದು ತಿರ್ಥಜಲವನ್ನ ಹೋಮಕುಂಡದ ಬಳಿ ಇರಿಸಿ ನಿದ್ದೆ ಮಾಡುತ್ತಾನೆ…

ಯಜ್ಞದೀಕ್ಷೆಯಿಂದ ಬಸವಳಿದ ಯವನಾಶ್ವ ರಾತ್ರಿಯ ಕಾಲ ನೀರನ್ನರಸುತ್ತಾ ಸಾಗುತ್ತಿರೆ ಯಾಗ ಶಾಲೆಯ ಬಳಿ ಶಿಷ್ಯನಿಟ್ಟ ತಿರ್ಥ ಜಲವನ್ನ ನೀರೆಂದು ಭಾವಿಸಿ ಅದನ್ನ ಕುಡಿದು ಬಿಟ್ಟ. ಬೆಳಿಗ್ಗೆ ಶಿಷ್ಯ ಎದ್ದು ನೋಡಿದಾಗ ತಿರ್ಥಜಲವು ಕಾಣದಾಗಲು ಮುನಿಗೆ ರಾಜನಿಂದ ನಡೆದ ಅಚಾತುರ್ಯವು ತಿಳಿಯಲು, ಯಾಗ ಪ್ರಸಾದವನ್ನ ಸೇವಿಸಿರುವುದರಿಂದ ಯವನಾಶ್ವನೆ ಮುಂದಕ್ಕೆ ಗರ್ಭದರಿಸಿ ಪುತ್ರ ಸಂತಾನವನ್ನ ಪಡೆಯಬೇಕೆಂದು ಸೂಚಿಸಿ ಹೊರಟು ಹೋಗುತ್ತಾರೆ, ಕಾಲಕ್ರಮೇಣ ಯವನಾಶ್ವ ಒಂದು ಗಂಡು ಮಗುವಿಗೆ ಜನ್ಮ ನೀಡಿದ, ಆ ಮುಗುವೇ ರಾಜ ಮಾಂದಾತ…

ಇತ್ತ ಆರಮನೆಯಲ್ಲಿ ಮಗು ಬೆಳೆಯುತ್ತಿರಲು ವನಚಾರಕರು ಕಾಡ ಕಿರಾತರಿಂದ ಉಪಟಲ ತಡೆಯಲಾಗದು ಎಂಬ ದೂರನ್ನು ಯವನಾಶ್ವನ ಬಳಿ ನೀಡಲು ಯವನಾಶ್ವ ಕಾಡ ಕಿರಾತರ ಸದೆ ಬಡಿಯಲು ಹೊರಡಲನುವಾಗುವ ಸಂದರ್ಭ ಮುಂದೆ ಬಂದ ಕುವರ ಮಾಂದಾತ ತಾನೆ ತಂದೆಯನ್ನ ಒಪ್ಪಿಸಿ ಕಿರಾತ ಪಡೆಯನ್ನ ಎದಿರಿಸಲು ಹೊರಡುತ್ತಾನೆ….

ಯದುವಂಶದ ರಾಜನಾದ ಸಶ ಬಿಂದುವಿನ ಮಕ್ಕಳಾದ ಇಂದು ಮತಿ ಹಾಗೂ ಬಿಂದು ಮತಿ ವನ ವಿಹಾರಕ್ಕಾಗಿ ಕಾಡಿಗೆ ಬಂದರು ಅಲ್ಲಿ ಕಿರಾತನೊರ್ವ ಈ ಕುವರಿಯರನ್ನ ಬಲತ್ಕರಿಸಲು ಮುಂದಾದಾಗ ಕುವರ ಮಾಂದಾತ ಅವರನ್ನ ತಡೆದು ಕುವರಿಯರನ್ನ ರಕ್ಷಿಸುತ್ತಾನೆ. ಅವರ ಸೌಂದರ್ಯಕ್ಕೆ ಮನ ಸೋತು ಅವರನ್ನ ಮದುವೆಯಾಗಲು ಮನ ಮಾಡುತ್ತಾನೆ, ರಾಜಕುವರನ ಮನದಾಸೆ ತಿಳಿದ ರಾಜಕುವರಿಯರಿರ್ವರು ಮಾಂದಾತನ ಕೈ ಹಿಡಿಯುವ ಒಪ್ಪಿಗೆ ಸೂಚಿಸಿ ಮದುವೆಯಾಗುತ್ತಾರೆ…

ಇತ್ತ ಸ್ವರ್ಣ ಲಂಕೆಯಲ್ಲಿ ರಾವಣ ಪ್ರಬಲನಾಗಿ ಮೆರೆಯುತ್ತಿರಲು ಕುಬೇರನಲ್ಲಿರುವ ಪುಷ್ಪಕ ವಿಮಾನವನ್ನ ತನಗೆ ನೀಡುವಂತೆ ಕೇಳಲು ದೂತನೊರ್ವನನ್ನ ಕಳುಹಿಸಿದ, ಕುಬೇರ ಕೊಡಲೊಪ್ಪದಿದ್ದಾಗ ರಾವಣ ತಾನೇ ಕುಬೇರನಲ್ಲಿ ದಾಳಿಮಾಡಿ ಪುಷ್ಫಕ ವಿಮಾನವನ್ನ ಅಪಹರಿಸುತ್ತಾನೆ..

ಲೋಲಪುರದರಸ ಮದುರಕ್ಕಸನೆಂಬ ದಾನವ ಲಂಕಾದೀಶ ರಾವಣನ ಪ್ರಾಬಲ್ಯವನ್ನರಿತು ಆತನೊಂದಿಗೆ ಸಖ್ಯವನ್ನ ಬೆಳೆಸಲು ಸ್ವರ್ಣಲಂಕೆಯತ್ತ ಬರುವನು. ಲಂಕೆಯಲ್ಲಿ ರಾವಣ ದಿಗ್ವೀಜಯಕ್ಕೆ ಹೋಗಿರಲು ಆತನ ತಂಗಿಯಾದ ಕುಂಬಿನಾಷಿನಿ(ರಾವಣನ ಚಿಕ್ಕಮ್ಮನ ಮಗಳು) ಮಧುರಕ್ಕಸನನ್ನ ಕಂಡು ಪ್ರೇಮಾಂಕುರವಾಗಲು ಮಧುರಕ್ಕಸ ಕುಂಬಿನಾಷಿನಿ ಮದುವೆಯಾದರು, ವಿಷಯ ತಿಳಿದ ರಾವಣ ಮಧುರಕ್ಕಸನೊಂದಿಗೆ ಕಾದಡಲು ಮಧುರಕ್ಕಸನಿಗೆ ಸೋಲಾಯಿತು, ಅಪಮಾನಿತನಾದ ಮಧು ರಕ್ಕಸ ಕಾಡಿಗೆ ಹೋಗಿ ತಪಸನ್ನಾಚರಿಸಿ ಸೇಡು ತೀರಿಸುವುದಾಗಿ ಶಪಥಗೈದು ಕುಂಬಿನಾಷಿನಿಯ ಜೊತೆ ಲೋಲ ಪುರಕ್ಕೆ ಹೊರಟನು..

ಮಧುರಕ್ಕಸನ ಮಗನಾದ ಲವಣಾಸುರ ತಂದೆಯಂತೆ ಸಾತ್ವಿಕ ರಕ್ಕಸನಾಗದೆ ದೌಷ್ಟ್ಯದಿಂದ ಬೆಳೆಯಲಾರಂಬಿಸಿದ, ಗೋಹತ್ಯೆ ಸ್ತ್ರಿಹತ್ಯೆ ಶಿಶುಹತ್ಯೆ ಮೊದಲಾದ ಪಂಚಮಹಾ ಪಾಪಗನ್ನೆ ಮಾಡಲಾರಂಬಿಸಿದ, ಬೆಸರಗೊಂಡ ಮಧುರಕ್ಕಸ ಲವಣಾಸುರನಿಗೆ ಪಟ್ಟಕಟ್ಟಿ ತಾನು ಕಾಡಿಗೆ ಹೊರಟ…

ಇತ್ತ ದರ್ಮಿಷ್ಟನಾದ ಮಾಂದಾತ ತನ್ನ ಸಾಮರ್ಥ್ಯವನ್ನ ತಿಳಿಸಬೇಕೆಂದು ಸ್ವರ್ಗಕ್ಕೆ ದಾಳಿಮಾಡಿ ಸುಮನಸರನ್ನ ಸೋಲಿಸಿ ತಾನೆ ಮೂರು ಲೋಕದಲ್ಲಿ ಪ್ರಬಲ ಎಂದು ಗರ್ವಿಸಲು ನಿನಗಿಂತ ದೀರ ಭೂಲೋಕದಲ್ಲೆ ಲವಣಾಸುರನಂಬುವನಿರುವನು ಎಂದು ದೇವೆಂದ್ರ ತಿಳಿಸಲು ಮಾಂದಾತ ಲವಣಾಸುರನ ಲೋಲಪುರಕ್ಕೆ ದಾಳಿಮಾಡಲು ಲವಣಾಸುರ ಮಾಂದಾತನ ಕೊಲ್ಲುವನು…

ಮುಂದಕ್ಕೆ ಶತ್ರುಹರ ಲವಣಾಸುರನ್ನ ಕೊಲ್ಲುವನು…