ಹೊನ್ನಾವರ:- ಹೊನ್ನಾವರ ತಾಲೂಕಿನ ಹಳದೀಪುರ ಪಂಚಾಯತದ ಹೊರಬಾಗ ಮೀನುಗಾರಿಕಾ ಕೋಂಡಿ ರಸ್ತೆಯ ಆಯ್ದ ಭಾಗಳಲ್ಲಿನ ರಸ್ತೆ ಕಾಂಕ್ರೇಟಿಕರಣ ಕಾಮಗಾರಿಗೆ ಕುಮಟಾ & ಹೊನ್ನಾವರ ಕ್ಷೇತ್ರದ ಶಾಸಕರು ಹಾಗು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಭೂಮಿ ಪೂಜೆ ನೇರವೆರಿಸುವುದರ ಮೂಲಕ ಚಾಲನೆ ನೀಡಿದರು ಈ ಸಂದರ್ಬದಲ್ಲಿ ಮಾತನಾಡಿದ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು ಶ್ರೀ ದಾಮೋದರ ನಾಯ್ಕ ಮಾತನಾಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ರಸ್ತೆ ದುರಸ್ಥಿ ಕಾಮಗಾರಿಗೆ ಹೆಚ್ಚಿನ ಅನುದಾನ 40 ಲಕ್ಷ ನೀಡಿ ರಸ್ತೆಗಳನ್ನು ಕಾಂಕ್ರೇಟಿಕರಣಗೊಳಿಸದಕ್ಕಾಗಿ ಸಾರ್ವಜನಿಕರ ಪರವಾಗಿ ಶಾಸಕರನ್ನು ಅಭಿನಂದಿಸಿದರು ಈ ಸಂದರ್ಬದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷರು ಶ್ರೀ ಉಲ್ಲಾಸ ನಾಯ್ಕ ಹಳದೀಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಗುಣಮಾಲಾ ಜೈನ ಸದಸ್ಯರಾದ ಶ್ರೀ ವಿನಾಯಕ ಶೇಟ ಶ್ರೀ ಗಣಪತಿ ಹರಿಕಂತ್ರ ಶ್ರೀ ರವಿ ಮೋಗೆರ ಶ್ರೀ ಇಸ್ಮಾಯಿಲ್ ಸಾಬ್ ಶ್ರೀಮತಿ ಸುರೇಕಾ ನಾಯ್ಕ ಶ್ರೀಮತಿ ನಳಿನಿ ಹರಿಕಂತ್ರ ಶ್ರೀ ಮಂಜುಳಾ ನಾಯ್ಕ ಮುತಾಂದವರು ಉಪಸ್ಥಿತರಿದ್ದರು