ಮಹಿಳೆಗೆ ಕಾಡಿಸುತ್ತಿದ್ದ ಕಾಮುಕನಿಗೆ ಹಿಗ್ಗಾಮುಗ್ಗಾ ಗೂಸವನ್ನ ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯ ಸಂಭಂದಿಗಳು ನೀಡಿದ್ದಾರೆ‌. ತಾಲೂಕಿನ ಖಾತೂರು ಗ್ರಾಮದ ಪ್ರಕಾಶ್ ಅಜ್ಜನನವರ್ ಹೊಡೆತ ತಿಂದವನು. ಜಾತಿ ಸರ್ಟಿಫಿಕೇಟ್ ಮಾಡಿಸಿಕೊಡುವುದಾಗಿ ಪರಿಚಯವಾದ ಕಾಮುಕ ಫೋನ್ ನಂಬರ್ ಮಹಿಳೆಯಿಂದ ಪಡೆದು ಫೋನ್ ಮೂಲಕ ಪ್ರತಿದಿನ ಕಾಟ ಕೊಡಲು ಪ್ರಾರಂಭಿಸಿದ್ದ.‌ ತನ್ಮೊಂದಿಗೆ ಲಾಡ್ಜ್ ನಲ್ಲಿ ತಂಗುವಂತೆ ಹುಬ್ಬಳ್ಳಿಗೆ ಬರಲು ಕಾಮುಕ‌ ಮಹಿಳೆಗೆ ಕರೆದಿದ್ದ. ವಿಷಯವನ್ನ ಮಹಿಳೆ ತನ್ನ ಸಂಭಂದಿಗಳಿಗೆ ತಿಳಿಸಿದ್ದು ಬಸ್ ನಿಲ್ದಾಣದಲ್ಲಿ ಮಹಿಳೆಗೆ ಕಾಯುತ್ತಿದ್ದ ಕಾಮುಕನಿಗೆ ಮಹಿಳೆಯ ಸಂಭಂದಿಗಳು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆಯ ದೂರಿನ ಮೇಲೆ ಆರೋಪಿ ವಿರುದ್ದ ಪ್ರಕರಣ ದಾಖಲಾಗಿದೆ.