Sinchana TV

ಹಿಂದೊಂದು ಕಾಲವಿತ್ತಂತೆ ನಂಬಿಕೆಯೆ ಜೀವನವಾಗಿತ್ತಂತೆ ಅದರೆ ಇಂದು ಕಾಲ ಬದಲಾಗಿದೆ ನಂಬಿಕೆಗೆ ಬೆಲೆಯೇ ಇಲ್ಲದಂತಾಗಿದೆ.ದಿನದಿಂದ ದಿನಕ್ಕೆ ನಮ್ಮಿಂದ ದೂರವಾಗುತ್ತಿರುವ ಸಂಗತಿ ಎಂದರೆ ನಂಬಿಕೆ .ಯಾರ ಮೇಲು ನಂಬಿಕೆ ಇಲ್ಲಾ. ಯಾವ ವಿಷಯದಲ್ಲೂ ನಂಬಿಕೆ ಇಲ್ಲಾ .ಯಾವ ವಸ್ತುವಿನ ಮೇಲೂ ನಂಬಿಕೆ ಇಲ್ಲಾ .ಯಾರು ಹೇಳಿದರು ನಂಬಿಕೆ ಇಲ್ಲಾ. ಯಾರ ಕೇಳಿದರು ನಂಬಿಕೆ ಇಲ್ಲ.ಇದು ಇಂದು ನಾವು ಅನುಭವಿಸುತ್ತಿರುವ ಪರೀಸ್ಥಿತಿ .ಅದರೂ ಇವೆಲ್ಲದರ ಮದ್ಯೆ ಇವತ್ತೂ ನಂಬಿಕೆಗೆ ಸ್ಥಾನವಿದೆ ಎಂದು ತೋರಿಸಿ ಕೊಟ್ಟವರು ಶ್ರೀ ಯಶೋದರ ನಾಯ್ಕ ಹಾಗೂ ಅವರ ಟ್ರಸ್ಟಿನವರು.

ಉತ್ತರ ಕನ್ನಡದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಸುಮಾರು ೪೦ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ.ಎರಡುವರೆ ಸಾವಿರಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಸಂಘವನ್ನು ರಚಿಸಿ ಯಶಸ್ವಿ ಕಂಡ ಯಶೋದರ ನಾಯ್ಕ ಟ್ರಸ್ಟನ ಕೇದ್ರಬಿಂದು ಯಶೋದರ ನಾಯ್ಕ ಅವರನ್ನ ಕೇಂದ್ರ ಸರಕಾರದ ಕೌಶಲ್ಯಾಬಿವೃದ್ದಿ ಸಚೀವಾಲಯದ ಸ್ಕಿಲ್ ಇಂಡಯಾ ವತಿಯಿಂದ ಬೆಂಗಳೂರಿನ ಲಲಿತ ಅಶೋಕ್ ಹೋಟೆಲ್ ನಲ್ಲಿ ನಡೆದ ಸಮಾರಂಬದಲ್ಲಿ * ಜರ್ನಿ ಒಫ್ ರೂರಲ್ ಯುವತ್ * ಅವಾರ್ಡ ನೀಡಿ ಗೌರವಿಸಲಾಯಿತು.
ಇದೂ ಇಂದಿನ ದಿನದಲ್ಲಿಯೂ ನಂಬಿಕೆಗೆ ಬೆಲೆ ಇದೆ ಎಂದು ಸಾರಿ ಸಾರಿ ಹೆಳಿದ ಸಮಾರಂಬವಾಗಿ ಪರಿಣಮಿಸಿತು. ಅಂದರೆ ಯಶೊದರ ನಾಯ್ಕ ಅವರು ತನ್ನ ಟ್ಟಸ್ಟನ ಸದಸ್ಯರ ಮೇಲೆ ಸಿಬ್ಬಂದಿಗಳಮೇಲೆ ತಾನು ಹಾಗು ತನ್ನ ಕುಟುಂಬದ ಸದಸ್ಯರ ಬೆವರಿನ ಕೋಟ್ಯಾಂತರ ರೂಪಾಯಿ ಹಣ ನೀಡುವಾಗ ಇಟ್ಟ * ನಂಬಿಕೆ * ಪಿಯರಲೆಸ್ ನಂತ ಸಂಸ್ಥೆ ಕಳೆದು ಹೋದರೂ. ಅಗ್ರಿಗೋಲ್ಡನಂತ ಸಂಸ್ಥೆ ಮುಳುಗಿ ಹೋದರು ಹಲವಾರು ಹಣಕಾಸು ಸಂಸ್ಥೆಗಳಿಂದ ಇಂದಿನ ದಿನಗಳಲ್ಲಿ ಮೋಸವಾಗುತ್ತಿದ್ದರೂ. ಯಶೋದರ ನಾಯ್ಕ ಟ್ರಸ್ಟನ ೪೦ ಸಾವಿರಕ್ಕೂ ಹೆಚ್ಚು ಮಹಿಳೆಯರು ಶ್ರೀ ಯಶೊದರ ನಾಯ್ಕ ಅವರ ಮೇಲೆ ಇಟ್ಟ *ನಂಬಿಕೆ * .
ಇಂದೂ ನಂಬಿಕೆಗೆ ಬೆಲೆ ಇದೆ ಎನ್ನುವುದನ್ನ ಸಾಬೀತು ಪಡಿಸಿ ಮೂಲತ ಹೊನ್ನಾವರ ತಾಲೂಕಿನ ಚಿಕ್ಕ ಹಳ್ಳಿ ಮುಳ್ಕೊಡಿನ ಯಶೋದರ ನಾಯ್ಕ ಬಾಲ್ಯದಲ್ಲಿ ಬಡತನದ ಎಲ್ಲಾ ಮೇರೆಯನ್ನ ಮೀರಿ ಬದುಕಿಗಾಗಿ ಪಟ್ಟಣ ಸೇರಿದವರು.ತನ್ನ ಸ್ವಂತ ಪರಿಶ್ರಮದಿಂದ ಇಂದು ಬೃಹತ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ನ್ನ ಹಾಗೂ ತನ್ನ ಕುಟುಂಬದ ಸದಸ್ಯರ ಸಂಸ್ಥೆಯ ಲಾಭದ ಕೆಲವು ಬಾಗದ ಹಣವನ್ನ ೪೦ ಸಾವಿರಕ್ಕೂ ಹೆಚ್ಚು ಮಹಿಳಾ ಸಹೋದರಿಯರಿಗೆ ನೀಡಿ ಅವರ ಬಾಳಿಗೆ ದೀಪವಾಗಿ ಬೆಳಗಿದ್ದಾರೆ.ಇವರ ಈ ಸಾದನೆಯನ್ನ ಗುರುತಿಸಿ ಕೇಂದ್ರಸರಕಾರವು ನೀಡಿದ ಗೌರವ ದೇಶಮಟ್ಟದಲ್ಲಿ ಉತ್ತರಕನ್ನಡವನ್ನ ಅದರಲ್ಲಯೂ ಕುಮಟಾ- ಹೊನ್ನಾವರವನ್ನ ಗುರುತಿಸುವಂತೆ ಮಾಡಿದ್ದಂತೂ ಸತ್ಯ. ಈ ಸಂಬ್ರಮದಲ್ಲಿ ಬಾಗವಹಿಸಿ ಯಶೋದರ ನಾಯ್ಕ ಅವರನ್ನ ಸನ್ಮಾನಿಸಿ ಸಂತೋಷಪಟ್ಟವರು ಕೇಂದ್ರ ಕೌಶಲ್ಯಾಬಿವೃದ್ದಿ ಸಚೀವ ಅನಂತ ಕುಮಾರ ಹೆಗಡೆ.ಪಾಲ್ಗೊಂಡವರು ಎನ್ ಎಸ್ ಡಿ ಸಿ ಸಂಸ್ಥೆಯ ಸಿ.ಇ.ಒ.& ಮೇನೆಜಿಂಗ್ ಡೈರೆಕ್ಟರ್ ಮನೀಷ್ ಕುಮಾರ್ ಮತ್ತು ಸ್ಕಿಲ್ ಡೆವಲಪಮೆಂಟ್ ಸಂಸ್ಥೆಯ ಟಿ ಆರ್ ಕುಲಕರ್ಣಿ