ಉತ್ತರ ಕನ್ನಡ : ಸಿದ್ದಾಪುರದಲ್ಲಿ ಶಾಸಕರಾದ ಕಾಗೇರಿಯವರು ರಸ್ತೆ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಉದ್ಘಾಟಿಸಿದರು. 7.5 ಲಕ್ಷ ರೂಪಾಯಿ ಯೋಜನೆಗಳ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದು, ಸಿದ್ದಾಪುರದ ರವೀಂದ್ರ ನಗರದಲ್ಲಿ ಕಾಮಗಾರಿಗಳ ಉದ್ಘಾಟನೆ ನಡೆಸಿದರು.

ನಂತರ ಸುದ್ದಿಗೋಷ್ಠಿ ನಡೆಸಿದ ಕಾಗೇರಿ,3500 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಂದಿದೆ, ಹಣ ಬರದೇ ಇದ್ದಲ್ಲಿ ಸಂಪೂರ್ಣ ವಿವರಗಳೊಂದಿಗೆ ಶಾಸಕರ ಕಚೇರಿ ಸಂಪರ್ಕ ಮಾಡಿ ಎಂದು ಸಲಹೆ ನೀಡಿದ್ದಾರೆ.

ಸಿದ್ದಾಪುರ ತಾಳಗುಪ್ಪ ರೈಲು ಮಾರ್ಗ ರದ್ದಾಗಿಲ್ಲ,ತಾಂತ್ರಿಕವಾಗಿ ಅನುಮೋದನೆ ಸಿಕ್ಕುವ ಲಕ್ಷಣಗಳಿದ್ದು ಚುನಾವಣೆ ಘೋಷಣೆ ಆಗುವುದರೊಳಗೆ ಭೂಮಿಪೂಜೆ ಮಾಡುತ್ತೇವೆ ಎಂದರು.

ಕುಮಾರಸ್ವಾಮಿಯೊಂದಿಗೆ ಸಂವಾದದಲ್ಲಿ ಭಾಗವಹಿಸಲ್ಲ,ಅದು ಜೆಡಿಎಸ್ ಕಾರ್ಯಕ್ರಮವಾಗಿದ್ದು ಯಾವುದೇ ಆಹ್ವಾನ ಬಂದಿಲ್ಲ ಆಹ್ವಾನ ಬಂದರೂ ಸಂವಾದಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಭವನ ನಿರ್ಮಾಣಕ್ಕೆ ರಾಜಕೀಯವಾಗಿ ಅಡ್ಡಗಾಲು ಹಾಕಲಾಗುತ್ತಿದೆ.ಮುಂದೆ ನಮ್ಮದೇ ಸರ್ಕಾರ ಬರುತ್ತದ ಆಗ ಸ್ವಾತಂತ್ರ್ಯ ಭವನ ನಿರ್ಮಿಸಿಯೇ ಸಿದ್ಧ ಎಂದಿದ್ದಾರೆ.