*ಯಕ್ಷಗಾನದ ವೇಷಭೂಷಣಗಳ ಒಂದಿಷ್ಟು ವಿವರಗಳು*
೧ #ತುರಾಯಿ* ಮುಂಡಾಸು,ಕೇದಗೆ ಮುಂದಲೆ ತುದಿಯಲ್ಲಿ ಸಿಕ್ಕಿಸುವ ದಿಪಶಿಖಾಕೃತಿಯ ರಚನೆ
೨ #ತಾವರೆ*
ಕಮಲ,ಹೂವು,ಕುಚ್ಚು
ಮುಂಡಾಸು ಕೇದಗೆ ಮುಂದಲೆಗಳ ಮಧ್ಯದಲ್ಲಿ ಹಾಕುತ್ತಾರೆ
೩ #ಕೆಂಚು*
ಮುಂಡಾಸು, ಕೇದಗೆ ಮಂದಲೆ ಅಂಚುಗಳ ಮಧ್ಯಕ್ಕೆ ತಾವರೆಯ ನೇರಕ್ಕೆ ಸಿಕ್ಕಿಸುವ ಹೂವು ಅಥವಾ ಬೆಂಡಿನ ಎರಡು ಉರುಟು ಆಕೃತಿಗಳು
೪ #ಹೂವಿನ ಚೆಂಡು*
ಸುತ್ತು ಬೆಂಡಿನದಂಡ ಬಟ್ಟೆಯ ಸುತ್ತು
೫ #ಜರಿಲಾಡಿ*
ಜರಿ , ಪಗಡಿ , ಮುಂಡಾಸು ,ಹಿಂದೆ ಜರಿಯಲಾಡಿ ಸಿದ್ದವಾದುದು ಬಳಕೆಯಿರಲಿಲ್ಲ . ಬಾಳೆಯ ಹಗ್ಗದ ಲಾಡಿಗಳಿಗೆ ಜರಿಪುಡಿ ಅಂಟಿಸಿ ತಯಾರಿಸುತ್ತಿದ್ದರು . ಒಣ ಬಾಳೆ ಸೀಳಿಗೆ ಎಣ್ಣೆ ಸವರಿ ಸುತ್ತುವುದು ಇತ್ತು . ಈಗ ರೆಡಿಮೀಡ್ ಬಂದಿದೆ
೬ #ಕೇದಗೆ*
ಕೀರಿಟ ಮುಂಡಾಸುಗಳ ಮುಂಭಾಗದಲ್ಲಿ ಕಿವಿಯಿಂದ ಕಿವಿಯವರೆಗೆ ಕಟ್ಟುವ ಪಟ್ಟಕೆಯಂತಹ ಆಭರಣ. ಮರದ ಚಿಕ್ಕ ಪಟ್ಟಿಗಳಿಗೆ ,ಕನ್ನಡಿ ಹರಳು ಕೂಡಿಸಿ , ಜೋಡಿಸಿ ತಯಾರಿಸುವರು. ಹಿಂದೆ ಕೇದಗೆ ಸೀಳುಗಳಿಂದ ತಮಾಯರಿಸುತ್ತಿದ್ದುದರಿಂದ ಕೇದಗೆ ಎಂಬ ಹೆಸರು ಬಂದಿರಬಹುದು.
ಇದರ ಮೇಲಬದಿಯಲ್ಲಿ ಮಣಿ ಅಥವಾ ಮುತ್ತಿಗಳನ್ನು ಜೋಡಿಸಿರುತ್ತಾರೆ. ಈ ಆಭರಣವು ಭೂತವೇಷಗಳ ತಲೆಪಟ್ಟಿ , ತಲೆ ಎಂಬ ಆಭರಣಗಳನ್ನು ಹೋಲುತ್ತದೆ
೭ #ಕರ್ಣಪಾತ್ರ* ಕರ್ಣಪತ್ರ
ವೇಷಗಳ ಕಿವಿಯ ಮುಂದಿನಿಂದ ಕಟ್ಟುವ ಆಭರಣ
ಅತಿಕರಿಸಿದ ಕಿವಿ .
ಇದು ಸಾಮಾನ್ಯವಾಗಿ S , B, ಮತ್ತು E ಆಕಾರಗಳಲ್ಲಿರುತ್ತದೆ. ಇದಕ್ಕೆ ಕಪ್ಪು ಬಣ್ಣದ ದಾರ ಅಥವಾ ಉಣ್ಣೆಯ ಅಂಚು ಅಥವಾ ಗೊಂಡೆ ಇರುತ್ತದೆ. ಬಣ್ಣದ ವೇಷಗಳ ಕರ್ಣಪಾತ್ರ ( ಇದಕ್ಕೆ ಪತ್ರ ಅಥವಾ ಓಲೆ ಎಂದು ಹೆಸರು ) ಉರುಟಾಗಿದ್ದು ದೊಡ್ಡ ಗಾತ್ರದ್ದಾಗಿರುತ್ತದೆ. ಇದರ ಹಗ್ಗವು ಗಡ್ಡದ ಅಡಿಯಲ್ಲಿ, ಕುತ್ತಿಗೆಯ ಮೇಲ್ಭಾಗದಲ್ಲೊ , ಗಂಟು ನೆತ್ತಿಯ ಮೇಲೆಯೊ ನಿಲ್ಲುತ್ತದೆ .
೮ #ಅಡ್ಡಿಗೆ (ತೆ)*
ಗಂಡು, ಹೆಣ್ಣು ವೇಷಗಳ ಕೊರಳಿನ ಆಭರಣ ಸರಗಳಿಗಿಂತ ಗಿಡ್ಡ, ಮತ್ತು ಘನವಾಗಿದ್ದು , ಕಟ್ಟಿದಾಗ ಕೊರಳಿಗೆ ತಾಗಿ ನಿಲ್ಲುತ್ತದೆ. ಗುಡ್ಡಡ್ಡಿಗೆ , ಗೆಜ್ಜೆಅಡ್ಡಿಗೆ ,ಹಲ್ಲೆಅಡ್ಡಿಗೆ ,ಸಂಕಲೆ ಅಡ್ಡಿಗೆ ಇವು ಅಡ್ಡಿಗೆಯ ಪ್ರಭೇದಗಳು.
೯ #ತೋಳುಕಟ್ಟು*
ತೋಳಿಗೆ ಕಟ್ಟುವ ಆಭರಣ. ಮಣ ಗಂಟಿನಿಂದ ಮೇಲೆ , ಭುಜಕೀತಿಗಿಂತ ಕೆಳಗೆ ಕಟ್ಟುವ ಅಲಂಕೃತ ಪಟ್ಟಿ
೧೦ #ಎದೆಕಟ್ಟು*
ಎದೆಗೆ ಕಟ್ಟುವ ಆಭರಣ
ಎದೆಪದಕ, ಎದೆಹಾರ, ಎದೆಕವಚ, ಕುರಲಾರ, ಕೊರಳಹಾರ ,
೧೧ #ಕೈಕಟ್ಟು*
ಕೈಗೆ , ಮಣಿಗಂಟಿನ ಮೇಲಿಂದ ಕಟ್ಟುವ ಆಭರಣ ಪಟ್ಟಿಕೆ . ಇದು ಆಯತ ಅಥವಾ ಅರ್ಧವಜ್ರಾಕೃತಿಯಲ್ಲಿರಿತ್ತದೆ. ಮರದ ಕಡ್ಡಿ, ಹಲ್ಲೆಗಳನ್ನು ಜೋಡಿಸಿ ಅಥವಾ ಬಟ್ಟೆಯ ಮೆತ್ತೆಗೆ ಮಣಿ, ಹವಳಾದಿಗಳನ್ನು ಕೂರಿಸಿ ತಯಾರಿಸುವರು . ಇದನ್ನು ಕೈಗೆ ಸಿಕ್ಕಿಸಿ ಹಗ್ಗವನ್ನು ಎಳೆದಾಗ ಇದರ ಎರಡು ಬದಿಗಳು ಸೇರುವವು .
೧೨ #ಭುಜಕೀರ್ತಿ*
ಭುಜ ಕಿರೀಟ, ಭುಜಕಟ್ಟು
ಬೇಗಡೆ ಹಚ್ಚಿದ ಮರದ ಮುಳ್ಳುಗಳನ್ನು ವಸ್ತ್ರದ ಮೆತ್ತಗೆ ಹೊಲಿದು ತಯಾರಿಸುವ ತ್ರಿಕೋನಾಕೃತಿಯ ( ಒಡವೆಯಂತಹ ) ತೊಡುಗೆ
ಪಾತ್ರಾನುಗುಣವಾಗಿ ಆಕಾರ ವ್ಯತ್ಯಾಸವಿದೆ .
೧೩ #ಒಡ್ಯಾಣ*
ವೇಷದ ಸೊಂಟದ ಆಭರಣ. ನಡು ಪಟ್ಟಿಯ ಒಂದು ವಿಧ . ಇದಕ್ಕೆ ಜಾಲರಿಗಳು ಇರುತ್ತದೆ
೧೪ #ಶಲ್ಯೆ*
ಶಾಲು ಹೆಗಲವಲ್ಲಿ
ಕಿರೀಟ ಮುಂಡಾಸು ಕೇದಗೆ ಮುಂದಲೆಗಳಿಗೆ ತೆಲೆಯ ಮುಡಿಯಿಂದ ಸೊಂಟದ ವರೆಗೆ ಕಟ್ಟುವ ಶಲ್ಲೆ . ಇದನ್ನು ಮುಡಿಗೆ ಸಿಕ್ಕಿಸಿ ಎರಡು ಬದಿಗಳನ್ನು ಸೊಂಟಕ್ಕೆ ಸಿಕ್ಕಿಸಿದಾಗ ಸುಮಾರಾಗಿ ತ್ರಿಕೋನಾಕೃತಿಯಾಗುವುದು
೧೫ #ವೀರಗಸೆ*
ಸೊಂಟಕ್ಕೆ ಕಟ್ಟುವ ಒಂದು ಆಭರಣ
ಸೊಂಟದಿಂದ ಮುಂಗಾಲಿನವರೆಗೆ ಬರುತ್ತೆ
೧೬ #ಮಾರುಮಾಲೆ*
ವಿರಕಸೆಯ ಬದಿಗಳಲ್ಲಿ ನೇತು ನಿಲ್ಲುವ ಸರದಂತಹ ಆಭರಣ .
ಸಂಪಿಗೆ ಮೊಗ್ಗುಗಳಂತಹ ಮಣಿಗಳ ಸರ
೧೭ #ಕಸೆಸೀರೆ*
ವೇಷಗಳು ಕಚ್ಚೆ ಹಾಕಲು ಬಳಸುವ ಸೀರೆ ಬಟ್ಟೆ
ಇದು ಕಪ್ಪು,ಕೆಂಪು, ಚೌಕುಳಿ ಇರುವ ಹಳದಿ ಸೀರೆ
೧೮ #ಗೆಜ್ಜೆ*
ವೇಷಗಳು ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆ ಸರ.
ಕಂಚು,ಬೆಳ್ಳಿ ಮಿಶ್ರಣದ ತಯಾರಿಕೆ.
೧೯ #ಕಡಗ*
ಪರುಷವೇಷಗಳಿಗೆ ಕಟ್ಟುವ ಕಾಲಿನ ಕಕಡಗ

#ಪ್ರಶಾಂತಮಲ್ಯಾಡಿ*
( ಸಂಗ್ರಹ ಮಾಹಿತಿ)