ನಮ್ಮ ದೇಶದಲ್ಲಿ ಇನ್ನೂ ಅನೇಕ ವಿಷ್ಯಗಳು ಲಿಂಗ ಆಧಾರಿತವಾಗಿವೆ. ಪುರುಷರು ಹೊರಗೆ ದುಡಿಯಬೇಕು. ಮಹಿಳೆಯರು ಮನೆ ಕೆಲಸ ಮಾಡಬೇಕು ಹೀಗೆ ಅನೇಕ ಅಲಿಖಿತ ನಿಯಮಗಳು ಸಮಾಜದಲ್ಲಿ ಜಾರಿಯಲ್ಲಿವೆ. ಕಾಲ ಬದಲಾದಂತೆ ಅನೇಕರು ಬದಲಾಗಿದ್ದಾರೆ. ಪುರುಷರು ಕೂಡ ಅಡುಗೆ, ಸ್ವಚ್ಛತೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದ್ರೆ ಅದನ್ನು ಎಲ್ಲರ ಮುಂದೆ ಒಪ್ಪಿಕೊಳ್ಳಲು ನಾಚಿಕೊಳ್ತಾರೆ.

ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಹೆಚ್ಚು ಸಂಪಾದನೆ ಮಾಡಬೇಕೆಂಬ ಅಲಿಖಿತ ನಿಯಮವಿದೆ. ಇತ್ತೀಚಿಗೆ ಮಹಿಳೆಯರೂ ಪುರುಷರ ಸಮಾನವಾಗಿ ದುಡಿಯುತ್ತಿದ್ದಾರೆ. ಪತಿಗಿಂತ ಪತ್ನಿ ಸಂಬಳ ಹೆಚ್ಚಿರುವ ಉದಾಹರಣೆಯಿದೆ. ಆದ್ರೆ ಇದನ್ನು ಬಹುತೇಕ ಪುರುಷರು ಒಪ್ಪಿಕೊಳ್ಳುವುದಿಲ್ಲ. ಯಾರ ಬಳಿಯೂ ನನಗಿಂತ ನನ್ನ ಪತ್ನಿ ಸಂಬಳ ಹೆಚ್ಚಿದೆ ಎಂಬುದನ್ನು ಹೇಳುವುದಿಲ್ಲ.

ಅಡುಗೆ ಮನೆಯನ್ನು ಮಹಿಳೆ ಸಂಭಾಳಿಸಬೇಕು. ಹೀಗಂತ ಯಾವುದೇ ನಿಯಮವಿಲ್ಲ. ಎಲ್ಲ ಮಹಿಳೆಯರಿಗೂ ಅಡುಗೆ ಮಾಡುವುದು ಇಷ್ಟವಾಗುವುದಿಲ್ಲ ಕೂಡ. ಹಾಗೆ ಕೆಲ ಪುರುಷರು ಕಿಚನ್ ಇಷ್ಟಪಡ್ತಾರೆ. ಪತ್ನಿಗೆ ಅಡುಗೆಯಲ್ಲಿ ನೆರವಾಗ್ತಾರೆ. ಆದ್ರೆ ಸಮಾಜದ ಮುಂದೆ ನನಗೆ ಅಡುಗೆ ಮಾಡೋದು ಇಷ್ಟ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.

ಗಂಡು ಮಕ್ಕಳು ಅಳಬಾರದು ಎಂದು ಎಲ್ಲರೂ ಹೇಳ್ತಾರೆ. ಆದ್ರೆ ಇದು ತಪ್ಪು. ಪುರುಷರಿಗೂ ಮನಸ್ಸಿದೆ. ಅವ್ರ ಕಣ್ಣಲ್ಲೂ ನೀರು ಬರುತ್ತೆ. ಅವರಿಗೂ ನೋವಾಗುತ್ತದೆ. ಹೆಣ್ಣು ಮಕ್ಕಳಿಗಿಂತ ಹೆಚ್ಚು ಗಂಡು ಮಕ್ಕಳು ನೋವನುಭವಿಸುತ್ತಾರೆ. ಇದನ್ನು ಎಲ್ಲರ ಮುಂದೆ ಒಪ್ಪಿಕೊಳ್ಳುವುದಿಲ್ಲ.

ಹುಡುಗಿ ಅಥವಾ ಪತ್ನಿ ತನ್ನ ಬಾಯ್ ಫ್ರೆಂಡ್ ಮುಂದೆ ಬೇರೆ ಪುರುಷರನ್ನು ಹೊಗಳಿದ್ರೆ ಇವ್ರ ಹೊಟ್ಟೆ ಉರಿಯುತ್ತದೆ. ನನ್ನನ್ನು ಆತನಿಗೆ ಹೋಲಿಸುತ್ತಿದ್ದಾಳೆಂದು ಅಸೂಯೆಪಟ್ಟುಕೊಳ್ತಾನೆ. ಆದ್ರೆ ಈ ಸಂಗತಿಯನ್ನೂ ಪತ್ನಿ ಮುಂದೆ ಹೇಳುವುದಿಲ್ಲ.

ಎಲ್ಲರ ಮುಂದೆ ಸುಂದರವಾಗಿ ಕಾಣಬೇಕೆಂದು ಪುರುಷರೂ ಬಯಸ್ತಾರೆ. ತಯಾರಾಗುವುದು ಅವ್ರಿಗೂ ಇಷ್ಟ. ಬೇರೆ ಹುಡುಗ್ರ ಸ್ಟೈಲ್ ನೋಡಿ ಇವ್ರು ಅದನ್ನು ಅನುಸರಿಸುತ್ತಾರೆ. ಆದ್ರೆ ಎಲ್ಲರ ಮುಂದೆ ಒಪ್ಪಿಕೊಳ್ಳುವುದಿಲ್ಲ.