*ಈ ದಿನ ಮುಂಡಗೋಡ ತಾಲ್ಲೂಕಿನ ಸೇವಾ ನಿರತ ಪದವೀಧರ ಶಿಕ್ಷಕ ಸಂಘದಿಂದ ಮಾನ್ಯ ಕ್ಷೇತ್ರಶಿಕ್ಸಣಾಧಿಕಾರಿಗಳ ಅನುಪಸ್ಥಿತಿಯಲ್ಲಿ, ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಆನಂದ ಕೊರವರ ಸರ್ ರವರಿಗೆ C & R ರೂಲ್ ತಿದ್ದುಪಡಿ ಮತ್ತು ವೃಂದ ವಿಲೀನ ಮತ್ತು ಜೂನ್ ತಿಂಗಳಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದ ಕುರಿತು ಮನವಿ ಅರ್ಪಿಸಲಾಯಿತು. ಪದವೀಧರ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸುಭಾಷ್ ಡೋರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀ ಮಂಜುನಾಥ್ ಮಟ್ಟೇರ,ಮತ್ತು ಪದವೀಧರ ಶಿಕ್ಷಕ ಬಾಂಧವರು ಹಾಜರಿದ್ದರು.