ಸೋಮೇಶ್ವರ ಬೀಚ್ ಉಡುಪಿ ಜಿಲ್ಲೆ ಬೈಂದೂರಿನಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿದೆ. ಒತ್ತಿನೆಣೆ ಗುಡ್ಡದ ಪಶ್ಚಿಮಕ್ಕೆ ಆಕರ್ಷಕ ಸೌಂದರ್ಯದಿಂದ ಕಂಗೊಳಿಸುವ ವಿಶಾಲವಾದ ಕಡಲ ತೀರವೇ ಸೋಮೇಶ್ವರ ಬೀಚ್.

ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯುವ ಸೋಮೇಶ್ವರ ಬೀಚ್ ಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಸೋಮೇಶ್ವರ ದೇವಾಲಯ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಇಲ್ಲಿನ ನಾಗತೀರ್ಥದಲ್ಲಿ ವರ್ಷಕ್ಕೊಮ್ಮೆ ವಿಶೇಷ ದಿನದಂದು ತೀರ್ಥ ಸಿಂಚನವಾಗುತ್ತದೆ ಎನ್ನುವ ಪ್ರತೀತಿ ಇದೆ. ಸೋಮೇಶ್ವರ ಕಡಲ ತೀರ ಧಾರ್ಮಿಕವಾಗಿ, ಪ್ರಾಕೃತಿಕವಾಗಿ ಪ್ರಮುಖ ತಾಣವಾಗಿದೆ.

ಇಲ್ಲಿನ ಕಡಲ ತೀರದ ಸೊಬಗು, ನದಿಯ ಅಳಿವೆಯ ಪ್ರದೇಶದ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಇಂತಹ ಸ್ಥಳವನ್ನು ಕಣ್ತುಂಬಿಕೊಳ್ಳುವುದು ಮನಸಿಗೆ ಮುದ ನೀಡುತ್ತದೆ. ಇಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆಸಲಾಗಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮ ಸ್ಥಳ ಇದಾಗಿದೆ. ಇನ್ನು ಸುತ್ತಮುತ್ತ ಅನೇಕ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.