ಥೈಲ್ಯಾಂಡ್ ನ ಚಿಯಾಂಗ್ ಮಾಯ್ ನಲ್ಲಿರುವ ಮಂದಿರವೊಂದಕ್ಕೆ ಜನರು ದೇವರನ್ನು ನೋಡಲು ಬರೋದಿಲ್ಲ. ಬದಲಾಗಿ ಸಾವಿನ ನಂತ್ರದ ಬದುಕು ಹೇಗಿರುತ್ತೆ ಎಂಬುದನ್ನು ನೋಡಲು ಬರ್ತಾರೆ. ಇಲ್ಲಿ ಬರುವ ಪ್ರವಾಸಿಗರಿಗೆ ನರಕದ ದರ್ಶನವಾಗುತ್ತದೆ.

ನರಕದಲ್ಲಿ ಯಾವ ಯಾವ ಶಿಕ್ಷೆಗಳನ್ನು ನೀಡಲಾಗುತ್ತದೆ ಎಂಬುದನ್ನು ವಿಗ್ರಹದ ಮೂಲಕ ತೋರಿಸಲಾಗಿದೆ. ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ 700 ಕಿಲೋಮೀಟರ್ ದೂರದಲ್ಲಿರುವ ಚಿಯಾಂಗ್ ಮಾಯ್ ವಿಶ್ವದ ಮೊಟ್ಟಮೊದಲ ಹಾಗೂ ಏಕೈಕ ನರಕ ಮಂದಿರವಾಗಿದೆ.

ಈ ಮಂದಿರ ಸನಾತನ ಧರ್ಮ ಹಾಗೂ ಬೌದ್ಧ ಧರ್ಮದ ಆಧಾರದ ಮೇಲೆ ನಿರ್ಮಾಣವಾಗಿದೆ. ಬೌದ್ಧ ಸನ್ಯಾಸಿಯೊಬ್ಬರು ಇದನ್ನು ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಪಾಪ ಮಾಡಿದವರಿಗೆ ನರಕದಲ್ಲಿ ಯಾವ ಶಿಕ್ಷೆಯಾಗುತ್ತದೆ ಎಂಬುದನ್ನು ತೋರಿಸಲು ಈ ಮಂದಿರ ನಿರ್ಮಾಣ ಮಾಡಲಾಗಿದೆ.