ವಿಶ್ವದಾದ್ಯಂತ ಸಾಕಷ್ಟು ಪ್ರವಾಸಿತಾಣಗಳಿವೆ. ಒಂದೊಂದು ಪ್ರವಾಸಿ ತಾಣ ಒಂದೊಂದು ವಿಶೇಷತೆಗಳನ್ನು ಹೊಂದಿದೆ. ಮೆಕ್ಸಿಕೊದಲ್ಲಿರುವ ಒಂದು ನಗರ ಕೂಡ ತನ್ನದೇ ಸಂಸ್ಕೃತಿಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಭಿನ್ನವಾಗಿ ಪ್ರವಾಸಿಗರನ್ನು ಅಲ್ಲಿ ಸ್ವಾಗತಿಸಲಾಗುತ್ತದೆ.

ಮೆಕ್ಸಿಕೊದ ಲೇಸ್ ಕಾಬೊಸ್ ತನ್ನ ಸೌಂದರ್ಯ ಹಾಗೂ ರುಚಿಕರ ಆಹಾರಕ್ಕೆ ಪ್ರಸಿದ್ಧಿಯಾಗಿದೆ. ಕಾಬೊ ಸಾನಾ ಲುಹಾಸ್ ಹೆಸರಿಂದ ಗುರುತಿಸಿಕೊಂಡಿರುವ ಈ ನಗರ ಮೆಕ್ಸಿಕೊದಲ್ಲಿಯೇ ದೊಡ್ಡ ಪ್ರದೇಶ. ವಾರಾಂತ್ಯ ಕಳೆಯಲು ಇಲ್ಲಿಗೆ ಅನೇಕ ಪ್ರವಾಸಿಗರು ಬರ್ತಾರೆ.

ಪರ್ವತಗಳು ಹಾಗೂ ಸುಂದರ ಸರೋವರಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಸೂರ್ಯಾಸ್ತದ ಸುಂದರ ನೋಟವನ್ನು ಪ್ರವಾಸಗರು ಆನಂದಿಸಬಹುದಾಗಿದೆ. ಇಲ್ಲಿನ ಪ್ರತಿಯೊಂದು ರೆಸ್ಟೋರೆಂಟ್ ನಲ್ಲಿಯೂ ಪ್ರವಾಸಿಗರನ್ನು ರುಚಿ ರುಚಿ ಆಹಾರ ಹಾಗೂ ಹಾಡಿನ ಮೂಲಕ ಸ್ವಾಗತಿಸಲಾಗುತ್ತದೆ. ಅಲ್ಲಿನ ಆಹಾರ ಹಾಗೂ ಸೇವೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.

ಲವರ್ಸ್ ಬೀಚ್ ಇಲ್ಲಿನ ಪ್ರಸಿದ್ಧ ಸ್ಥಳಗಳಲ್ಲಿ ಒಂದು. ಬೋಟಿಂಗ್, ಡೈವಿಂಗ್, ಈಜು ಎಲ್ಲವೂ ಇಲ್ಲಿದೆ. ವಿಶ್ವದ 10 ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಇದೂ ಜಾಗಪಡೆದಿದೆ.