‘ದುನಿಯಾ’ ವಿಜಯ್ ಅಭಿನಯದ ‘ಜಾನಿ ಮೇರಾ ನಾಮ್’ ಭರ್ಜರಿ ಯಶಸ್ಸು ಕಂಡಿತ್ತು. ‘ಜಾನಿ ಜಾನಿ ಎಸ್ ಪಾಪಾ’ ಇದೇ ವಾರ ತೆರೆಗೆ ಬರ್ತಿದೆ. ವಿಜಯ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಚಿತ್ರ ಸಿನಿ ರಸಿಕರನ್ನು ಸೆಳೆದಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಂಪೂರ್ಣ ಕಾಮಿಡಿ ಚಿತ್ರ ಇದಾಗಿದ್ದು, ಹಿಂದಿನ ಚಿತ್ರಕ್ಕಿಂತ ಹೊಸತನ ಹೊಂದಿದೆ. ರಿಲ್ಯಾಕ್ಸ್ ಪಡೆಯಲು ಚಿತ್ರ ಮಂದಿರಕ್ಕೆ ಬರುವವರು ನಕ್ಕು ನಲಿಯಬಹುದಾಗಿದೆ.

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ವಿಶೇಷವಾದ ಸೆಟ್ ನಲ್ಲಿ ಮಾತ್ರವಲ್ಲದೇ ಗೋವಾದ ಸುಂದರ ತಾಣಗಳಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ. ವಿಜಯ್ ಚಿತ್ರಗಳಲ್ಲಿ ಸಾಹಸ ಇದ್ದೇ ಇರುತ್ತದೆ. ಇದು ಅವರ ಎಂದಿನ ಸಿನಿಮಾಗಳಿಗಿಂತ ಭಿನ್ನವಾಗಿದ್ದು, ಅಭಿಮಾನಿಗಳು, ಸಿನಿರಸಿಕರನ್ನು ಸೆಳೆಯಲಿದೆ. ರಚಿತಾರಾಮ್ ಚಿತ್ರದ ನಾಯಕಿಯಾಗಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಗಡ್ಡಪ್ಪ, ಅಚ್ಯುತ್ ಕುಮಾರ್ ಮೊದಲಾದವರು ಅಭಿನಯಿಸಿದ್ದಾರೆ.