ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಟಗರು’ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ‘ಟಗರು’ ಚಿತ್ರ ತಂಡದೊಂದಿಗೆ ಸಿನಿಮಾ ನೋಡಿದ ವರ್ಮಾ, ಇದೊಂದು ಅದ್ಭುತ ಕತೆ ಹೊಂದಿದ ಚಿತ್ರವಾಗಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ಸೂರಿ, ನಟಿ ಮಾನ್ವಿತಾ ಹರೀಶ್, ಡಾಲಿ ಪಾತ್ರಧಾರಿ ಧನಂಜಯ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ವರ್ಮಾ, ತಮ್ಮ ಮುಂದಿನ ಚಿತ್ರದಲ್ಲಿ ಮಾನ್ವಿತಾ ಅವರಿಗೆ ಅವಕಾಶ ನೀಡಲಿದ್ದಾರೆ. ಸೂರಿ ಅವರಿಗೂ ತಮ್ಮ ಬ್ಯಾನರ್ ನಲ್ಲಿ ಚಿತ್ರ ನಿರ್ದೇಶಿಸುವಂತೆ ಹೇಳಿದ್ದಾರೆ.

ಮಾನ್ವಿತಾ ಉತ್ತಮವಾಗಿ ನಟಿಸಿದ್ದು, ನನ್ನ ಮುಂದಿನ ಚಿತ್ರದಲ್ಲಿ ಅವರಿಗೆ ಅವಕಾಶ ನೀಡಲಿದ್ದೇನೆ. ಅವರು ಕೇಳುವ ಸಂಭಾವನೆಯ ಮೇಲೆ 10 ಲಕ್ಷ ರೂ. ಜಾಸ್ತಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ‘ಕೆಂಡಸಂಪಿಗೆ’ ಮಾನ್ವಿತಾ, ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.