ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಫೋಟೋವೊಂದನ್ನು ವೈರಲ್ ಮಾಡಿದ್ದಾರೆ. ಫೋಟೋದಲ್ಲಿ ಅನುಷ್ಕಾ ತುಂಬಾ ಸುಂದರವಾಗಿ ಕಾಣ್ತಿದ್ದಾರೆ. ಅನುಷ್ಕಾ ಗುಲಾಬಿ ಬಣ್ಣದ ಮ್ಯಾಕ್ಸಿ ಡ್ರೆಸ್ ತೊಟ್ಟಿದ್ದಾರೆ. ಅನುಷ್ಕಾ ಫೋಟೋಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಇನ್ಟ್ರಾಗ್ರಾಮ್ ಗೆ ಫೋಟೊ ಹಾಕಿ 4 ಗಂಟೆಯಲ್ಲಿ 1,031,647 ಮಂದಿ ಲೈಕ್ ಮಾಡಿದ್ದಾರೆ. ಗಾರ್ಜಿಯಸ್ ಮತ್ತು ಬ್ಯುಟಿಫುಲ್ ಎಂದು ಕಮೆಂಟ್ ಮಾಡಿದ್ದಾರೆ. ಕೊಹ್ಲಿ ಅಭಿಮಾನಿಗಳು ಕೂಡ ಅನುಷ್ಕಾ ಫೋಟೋಕ್ಕೆ ಕಮೆಂಟ್ ಮಾಡಿದ್ದಾರೆ. ಲವ್ಲಿ ಬಾಬಿಜಿ ಎಂದಿದ್ದಾರೆ. ಆದ್ರೆ ಕುಂಕುಮ ಯಾಕೆ ಇಟ್ಟುಕೊಂಡಿಲ್ಲ ಎಂದು ಕೆಲವರು ಪ್ರಶ್ನೆ ಕೂಡ ಹಾಕಿದ್ದಾರೆ.

ಸದ್ಯ ಅನುಷ್ಕಾ ಸೂಯಿ ಧಾಗ್ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಎರಡು ದಿನಗಳ ಕಾಲ ಶೂಟಿಂಗ್ ಗೆ ಬ್ರೇಕ್ ನೀಡಿದ್ದ ಅನುಷ್ಕಾ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.