ಛತ್ತೀಸ್ ಗಢದ ಕೊರಿಯಾ ಎಂಬಲ್ಲಿ ಸಕಾಲಕ್ಕೆ ವೈದ್ಯರು ದೊರೆಯದೇ ಇದ್ದಿದ್ರಿಂದ ಮಹಿಳೆಯೊಬ್ಬಳಿಗೆ ಆಟೋರಿಕ್ಷಾದಲ್ಲೇ ಹೆರಿಗೆಯಾಗಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಟೋದಲ್ಲೇ ಕೊರಿಯಾದ ಕಮ್ಯೂನಿಟಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಯ್ತು.

ಆದ್ರೆ ಅಲ್ಲಿ ವೈದ್ಯರೇ ಇರಲಿಲ್ಲ. ಬೇರೆ ಆಸ್ಪತ್ರೆ ಕೂಡ ಸಮೀಪದಲ್ಲಿ ಇರಲಿಲ್ಲ. ಹಾಗಾಗಿ ಮಹಿಳೆಯ ಸಂಬಂಧಿಕರೆಲ್ಲ ಸೇರಿ ಆಟೋದಲ್ಲೇ ಹೆರಿಗೆ ಮಾಡಿಸಿದ್ದಾರೆ. ಛತ್ತೀಸ್ ಗಢದಂತಹ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯವೇ ಸಿಗುತ್ತಿಲ್ಲ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ.

ಆಸ್ಪತ್ರೆಗಳು ಹಾಗೂ ವೈದ್ಯರ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ ಹೆರಿಗೆ ವೇಳೆ ಐವರು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷ 45,000 ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ.