ಬಾಲಿವುಡ್ ನಟಿ ದಿಶಾ ಪಟಾನಿ ಸದ್ಯ ‘ಭಾಗಿ 2’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾಳೆ. ಕಳೆದ ಮೂರು ವರ್ಷಗಳಿಂದ ಬಿಟೌನ್ ನಲ್ಲಿರೋ ದಿಶಾ ಇದುವರೆಗೆ ಮಾಡಿರೋದು ಕೇವಲ ಮೂರು ಸಿನೆಮಾಗಳಷ್ಟೆ.

ಯಾಕಂದ್ರೆ ಅಳೆದು ತೂಗಿ ಚಿತ್ರಗಳನ್ನು ದಿಶಾ ಆಯ್ಕೆ ಮಾಡಿಕೊಳ್ತಾಳಂತೆ. ತಾನು ಸಿನೆಮಾ ಹಿನ್ನೆಲೆಯುಳ್ಳವಳಲ್ಲ, ಹಾಗಾಗಿ ಅಭಿನಯದ ಮೂಲಕವೇ ಜನರ ಮನಸ್ಸನ್ನು ಗೆಲ್ಲಬೇಕು ಅನ್ನೋದು ಅವಳ ಆಸೆ.

ಹಾಗಾಗಿ ಒಳ್ಳೆ ಚಿತ್ರಗಳಿಗೆ ಮಾತ್ರ ಸಹಿ ಹಾಕ್ತಾಳೆ. ನಟನೆಯ ಹುಚ್ಚಿಗೆ ಬಿದ್ದ ದಿಶಾ ಕಾಲೇಜು ಬಿಟ್ಟು ಮುಂಬೈಗೆ ಬಂದಿದ್ಲು. ಆಗ ಮನೆಯ ಬಾಡಿಗೆ ಕಟ್ಟಲು ಅವಳ ಬಳಿ ಹಣವಿರಲಿಲ್ಲ, ಚಾನ್ಸ್ ಅರಸಿಕೊಂಡು ಆಡಿಶನ್ ಗೆ ಹೋಗುತ್ತಿದ್ಲು.

ಕೇವಲ 500 ರೂಪಾಯಿ ಇಟ್ಟುಕೊಂಡು ದಿಶಾ ಮುಂಬೈಗೆ ಬಂದಿದ್ದಳಂತೆ. ಅದಾದ್ಮೇಲೆ ಮನೆಯವರಿಂದ ನಯಾಪೈಸೆ ಪಡೆದಿರಲಿಲ್ಲ, ಸಣ್ಣಪುಟ್ಟ ಜಾಹೀರಾತುಗಳಲ್ಲೂ ನಟಿಸುತ್ತಿದ್ಲು. ಮನೆ, ಕೆಲಸ, ನಿದ್ದೆ ಇಷ್ಟೇ ಅವಳ ಪ್ರಪಂಚವಾಗಿತ್ತು.

ದಿಶಾಗೆ ಬ್ರೇಕ್ ಸಿಕ್ಕಿದ್ದು 2016ರಲ್ಲಿ. ಎಂ.ಎಸ್.ಧೋನಿ ಚಿತ್ರದ ಮೂಲಕ ದಿಶಾ ಬಾಲಿವುಡ್ ನಲ್ಲಿ ಗುರುತಿಸಿಕೊಂಡ್ಲು. ಅದಾದ್ಮೇಲೆ ಕುಂಗ್ ಫು ಯೋಗ ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾಳೆ. ಇದೀಗ ಟೈಗರ್ ಶ್ರಾಫ್ ಗೆ ಜೋಡಿಯಾಗಿ ನಟಿಸಿರುವ ಭಾಗಿ-2 ಚಿತ್ರ ಭರ್ಜರಿ ಓಪನಿಂಗ್ ಪಡೆದಿದೆ.