ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಆರಂಭವಾಗಿ 1 ವರ್ಷದ ಮೇಲಾಗಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಅಂದ ಹಾಗೇ ‘ಕೆ.ಜಿ.ಎಫ್.’ ಅದ್ಧೂರಿ ತಾರಾಗಣದಲ್ಲಿ, ಹೈ ಬಜೆಟ್ ನಲ್ಲಿ ನಿರ್ಮಾಣವಾಗ್ತಿದೆ. ಕೆ.ಜಿ.ಎಫ್. ಬಳಿ ನಿರ್ಮಿಸಲಾದ ವಿಶೇಷ ಸೆಟ್ ಮಾತ್ರವಲ್ಲದೇ, ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಸೇರಿ 5 ಭಾಷೆಗಳಲ್ಲಿ ‘ಕೆ.ಜಿ.ಎಫ್.’ ನಿರ್ಮಾಣವಾಗ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರ್ ಸಂಗೀತ, ಹೊಂಬಾಳೆ ಫಿಲಂಮ್ಸ್ ನ ವಿಜಯ ಕಿರಂಗದೂರು ನಿರ್ಮಾಣ ಮಾಡಿರುವ ಚಿತ್ರದ ಸಂಗೀತ, ಹಿನ್ನಲೆ ಸಂಗೀತಕ್ಕೆ ಕೂಡ ಹೆಚ್ಚಿನ ಒತ್ತು ನೀಡಲಾಗಿದೆ. ‘ಕೆ.ಜಿ.ಎಫ್.’ ಚಿತ್ರದ ಬ್ಯಾಗ್ರೌಂಡ್ ಸೌಂಡ್ ಎಫೆಕ್ಟ್ ಗಾಗಿ ಹಾಲಿವುಡ್ ಕಂಪನಿಗಳ ಸೇವೆಯನ್ನು ಬಳಸಿಕೊಳ್ಳಲಾಗ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್, ಟೀಸರ್ ಹಲ್ ಚಲ್ ಎಬ್ಬಿಸಿವೆ. ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, 80 ರ ದಶಕದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಆರಂಭಿಸಲು ಚಿತ್ರ ತಂಡ ತಯಾರಿ ನಡೆಸಿದೆ.