ಐ ಆರ್ ಸಿ ಟಿ ಸಿ ಯ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಯಾಣಿಕರಲ್ಲಿ ಗೊಂದಲ ಉಂಟಾಗಬಾರದು ಅನ್ನೋ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ತತ್ಕಾಲ್ ಟಿಕೆಟ್ ಅನ್ನು ನೀವು ಆನ್ ಲೈನ್ ನಲ್ಲೂ ಬುಕ್ ಮಾಡಬಹುದು.

ಎಸಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ನಾನ್ ಎಸಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಶುರುವಾಗುತ್ತದೆ. ನಿಮ್ಮ ಪ್ರಯಾಣದ ಒಂದು ದಿನ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಿ.

ರೈಲು ನಿಗದಿತ ಅವಧಿಗಿಂತ 3 ಗಂಟೆಗೂ ಹೆಚ್ಚು ಕಾಲ ವಿಳಂಬವಾದಲ್ಲಿ ನೀವು ಪಾವತಿಸಿದ ಸಂಪೂರ್ಣ ಹಣವನ್ನು ವಾಪಸ್ ಪಡೆಯಬಹುದು.

ರೈಲಿನ ಮಾರ್ಗದಲ್ಲಿ ಸಂಪೂರ್ಣ ಬದಲಾವಣೆಯಾದಲ್ಲಿ ನೀವು ಪಾವತಿಸಿದ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ.

ಪ್ರಯಾಣಿಕನ ಬೋರ್ಡಿಂಗ್ ಸ್ಟೇಶನ್ ಹಾಗೂ ತಲುಪಬೇಕಾದ ಸ್ಥಳ ಬದಲಾದ ರೈಲು ಮಾರ್ಗದಲ್ಲಿ ಇಲ್ಲದೇ ಇದ್ದಲ್ಲಿ ಸಹ ಟಿಕೆಟ್ ಹಣವನ್ನು ಹಿಂಪಡೆಯಬಹುದು.

ಪ್ರಯಾಣಿಕರ ಇಚ್ಛೆಗೆ ವಿರುದ್ಧವಾಗಿ ಲೋವರ್ ಕ್ಲಾಸ್ ಸೀಟ್ ಅನ್ನು ನೀಡಿದಲ್ಲಿ ಸಹ ಟಿಕೆಟ್ ಮೊತ್ತವನ್ನು ಮರಳಿ ಪಡೆಯಲು ಅವಕಾಶವಿದೆ.