🙏😍ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು😍🙏

ಉಡುಪಿ ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು ಅತೀ ಪುರಾತನ ಇತಿಹಾಸ ಪ್ರಸಿದ್ಧ ದೇವಸ್ಥಾನ…

ಹಚ್ಚ ಹಸುರಿನ ಪ್ರಕೃತಿ ಸಿರಿಯ ನಡುವೆ ಈ ದೇವಸ್ಥಾನವಿದೆ ಸಕಲ ಇಷ್ಟಾರ್ಥವನ್ನು ಕರುಣಿಸುವ ಗಣೇಶನು ಉದ್ಭವ ಮೂರ್ತಿಯಾಗಿ ಗುಹೆಯಲ್ಲಿ ನೆಲೆಸಿದ್ದಾನೆ. ಪೂರ್ವಾಭಿಮುಖವಾಗಿ ಕಾಲು ಮಡಚಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹ ಜಲಾದಿವಾಸಿಯಾಗಿ ನೆಲೆಸಿದ್ದಾನೆ.ಸದಾಕಾಲ ನೀರಿನಲ್ಲಿ ಗಣಪನು ನೆಲೆಸಿರುತ್ತಾನೆ.ಇಲ್ಲಿನ ರುದ್ರಾಭಿಷೇಕ ಕ್ಕೆ ವಿಶೇಷ ಶಕ್ತಿ.. ವಿಘ್ನ ನಿವಾರಕ ವಿನಾಯಕನ ಶಕ್ತಿ ಅಪಾರ.

ಪ್ರಕ್ರತಿಕವಾಗಿ ಧಾರ್ಮಿಕವಾಗಿ ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದ ಪುರಾಣ ವಿಶೇಷವಾಗಿದೆ.ತ್ರಿಪುರಾಸುರನ ಸಂಹಾರದ ಕಾಲದಲ್ಲಿ ಈಶ್ವರನು ಮೊದಲಪೂಜಿತ ಗಣಪನ್ನ ಸ್ಮರಿಸದೆ ಯುದ್ಧಕ್ಕೆ ಹೋಗುತ್ತಾನೆ ಯುದ್ಧದಲ್ಲಿ ಹಿನ್ನಡೆಯಾಗುತ್ತದೆ…ಕೋಪದಿಂದ ಈಶ್ವರನು ಅಸ್ತ್ರವನ್ನು ಗಣಪತಿಯ ಮೇಲೆ ಪ್ರಯೋಗಿಸುತ್ತಾನೆ ಅಸ್ತ್ರವು ಗಣಪತಿಯನ್ನು ಎತ್ತಿಕೊಂಡು ಹೋಗಿ ಮಧುಸಾಗರದಲ್ಲಿ ಎಸೆಯುತ್ತದೆ.ಮಧು ಅರ್ಥ ಜೇನು ತನಗೆ ಪ್ರಿಯವಾದ ಮಧು ಆದ್ದರಿಂದ ಅತಿಯಾಗಿ ಮಧುಪಾನವನ್ನು ಮಾಡುತ್ತಾನೆ…ಹಾಗೆ ತನಗೆ ಇಲ್ಲಿ ತಂದು ಹಾಕಿದವರ ಕಾರ್ಯ ನೆರವೇರಲಿ ಎಂದು ವರಪ್ರಸಾದ ನೀಡುತ್ತಾನೆ ..
ಶಿವನು ತ್ರಿಪುರಾಸುರನ ವದೆ ಮಾಡುತ್ತಾನೆ ಹಾಗೆ ಗಣಪತಿ ಅತಿಯಾಗಿ ಮಧುವನ್ನ ಸೇವಿಸಿದ್ದ ಕಾರಣ ಉಷ್ಣ ಹೆಚ್ಚಾಗಿ ಒದ್ದಾಡುತ್ತಿರುತ್ತಾನೆ.. ಇದನ್ನು ಗಮನಿಸಿದ ಶಿವನು ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸವಾಗಿರು ಎಂದು ಗಣಪತಿಗೆ ಅನುಗ್ರಹಿಸುತ್ತಾನೆ.ಅದರಂತೆಯೇ ಇಲ್ಲಿ ಹರಿಯುತ್ತಿರುವ ವರಾಹಿನದಿಯ ಉಪನದಿ ನರಸಿಂಹ ತೀರ್ಥ ದಲ್ಲಿರುವ ಬಂಡೆ ಕಲ್ಲುಗಳ ನಡುವಿನಲ್ಲಿ ಜಲಾದಿವಾಸಿಯಾಗಿ ನೆಲೆಸುತ್ತಾನೆ .

ಮುಂದೆ ಕ್ಷೇತ್ರವು ಒಂದು ವಿಶೇಷ ಶಕ್ತಿ ಕ್ಷೇತ್ರವಾಗಿ ರೂಪುಗೊಂಡಿದೆ ಬೇಡಿ ಬಂದ ಭಕ್ತರನ್ನು ಅನುಗ್ರಹಿಸಿ ಕಾಪಾಡುತ್ತಿದ್ದಾನೆ….. ವಿನಾಯಕನು ಸಂಕಷ್ಟ ನಿವಾರಿಸಿ ಕಣ್ಣೀರು ಒರೆಸಿ ಆಶೀರ್ವದಿಸಿ ಎಂದೆಂದಿಗೂ ಹರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ.

ಈ ದೇವಸ್ಥಾನ ಕುಂದಾಪುರದಿಂದ ೨೦ ಕಿಲೋ ಮೀಟರ್ ದೂರದಲ್ಲಿದೆ….. ಉಮಾಮಹೇಶ್ವರ ಕೂಡ ಗಣಪತಿಯೊಂದಿಗೆ ನೆಲೆ ನಿಂತಿದ್ದಾರೆ ಈ ಕ್ಷೇತ್ರದಲ್ಲಿ ಗಣಪತಿಯು ಸದಾಕಾಲ ನೀರಿನಲ್ಲಿ ನೆಲೆಸಿರುವುದು ವಿಶೇಷ …. ಸುಂದರ ದೇವಾಲಯವನ್ನು ನೋಡಲು ೨ ಕಣ್ಣುಗಳು ಸಾಲದು ಅಂತಹ ರಮಣೀಯ ನಿಸರ್ಗ ಸೌಂದರ್ಯದ ನಡುವೆ ಇರುವ ಅದ್ಭುತವಾದ ದೇವಸ್ಥಾನ …

ಪ್ರತಿಯೊಬ್ಬರ ಪಾಲಿನ ಕಷ್ಟ ನಿವಾರಕ ಇಷ್ಟ ಪ್ರದಾಯಕ ಈ ವಿನಾಯಕ