ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ನಟಿಸುವ ಅವಕಾಶವಿದ್ರೂ ಕೃತಿ ಕರಬಂಧ ನಿರಾಕರಿಸಿದ್ದಾರೆ.

ಬಹುಭಾಷಾ ನಟಿಯಾಗಿರುವ ಕೃತಿ ಕರಬಂಧ ಸಾಲು ಸಾಲು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ದರ್ಶನ್ ಚಿತ್ರದಿಂದ ದೂರ ಉಳಿಯುವಂತಾಗಿದೆ.

ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದ ಕೃತಿ ಕರಬಂಧ, ‘ಮಾಸ್ತಿಗುಡಿ’ ಬಳಿಕ ‘ದಳಪತಿ’ ಚಿತ್ರದಲ್ಲಿ ಅಭಿನಯಿಸಿದ್ದು, ಇದೇ ತಿಂಗಳಲ್ಲಿ ‘ದಳಪತಿ’ ತೆರೆಗೆ ಬರ್ತಿದೆ.

ಬಾಲಿವುಡ್ ನಲ್ಲಿ ‘ಗೆಸ್ಟ್ ಇನ್ ಲಂಡನ್’, ‘ಶಾದಿ ಮೆ ಜರೂರ್ ಆನಾ’ ಸೇರಿದಂತೆ ಹಲವು ಚಿತ್ರಗಳಲ್ಲಿ  ಅವರು ಬ್ಯುಸಿ ಆಗಿದ್ದಾರೆ. ಹಾಗಾಗಿ, ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ‘ಯಜಮಾನ’ದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ನಾಯಕಿಯರಾಗಿದ್ದಾರೆ.