ಬೇಕಾಗುವ ಪದಾರ್ಥಗಳು:

೨-೩ ಬೇಯಿಸಿದ ಮಾವಿನಕಾಯಿ
ಸಂಡಿಗೆ ಮೆಣಸು ೪-೫
ಅರ್ದ ಕಪ್ ಬೆಲ್ಲ
ಇಂಗು
ಕರಿಬೇವು
ನೀರು ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಮೊದಲು ಮಾವಿನಕಾಯಿಯನ್ನು ನೀರಿನಲ್ಲಿ ಮೆದುವಾಗುವ ತನಕ ಬೇಯಿಸಿ , ನಂತರ ತಣಿಯಲು ಬಿಡಿ.
ನಂತರ ಅದನ್ನು ಚೆನ್ನಾಗಿ ಅದುಮಿರಿ . ನಂತರ ಬಾಣಲೆಯಲ್ಲಿ ಸ್ವಲ್ಪ ತುಪ್ಪ ,ಸಾಸಿವೆ, ಇಂಗು, ಕರಿಬೀವು ಮತ್ತು ಸಂಡಿಗೆ ಮೆಣಸನ್ನು ಹಾಕಿ ಸಣ್ಣ ಬೆಂಕಿಯಲ್ಲಿ ಹುರಿಯಿರಿ.
ನಂತರ ಅದುಮಿದ ಮಾವಿನಕಾಯಿಯನ್ನು ಹಾಕಿ ಅದಕ್ಕೆ ಬೆಲ್ಲ ಮತ್ತು ಉಪ್ಪನು ರುಚಿಗೆ ತಕ್ಕಂತೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
ಈಗ ಭೂತ್ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ದ

ಕೃಪೆ : ನೀಲಾವತಿ ,
ಹಕ್ಕಿಗದ್ದೆ.