ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನೆಚ್ಚಿನ ನಟರ ಡೈಲಾಗ್ ಗಳಿಗೆ ಅಭಿಮಾನಿಗಳ ಸಂಭ್ರಮ ಇಮ್ಮಡಿಸುತ್ತದೆ.

ಚಿತ್ರಗಳಲ್ಲಿ ಕತೆ, ಮೇಕಿಂಗ್, ಫೈಟ್, ಸಾಂಗ್ ಜೊತೆಗೆ ಡೈಲಾಗ್ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ತಮ್ಮ ಹಿಂದಿನ ಚಿತ್ರಗಳಲ್ಲಿ ಜನಪ್ರಿಯ ಡೈಲಾಗ್ ಮೂಲಕ ಗಮನ ಸೆಳೆದಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಚಿತ್ರದ ಡೈಲಾಗ್ ಕೂಡ ಹವಾ ಸೃಷ್ಠಿಸಿದೆ.

ಬಹುನಿರೀಕ್ಷೆಯ ‘ಕೆ.ಜಿ.ಎಫ್.’ ಚಿತ್ರದಲ್ಲಿ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಬಿರುಗಾಳಿ ಡೈಲಾಗ್ ಗಳು ಕೂಡ ಗಮನ ಸೆಳೆಯುವಂತಿವೆ.

ಇತ್ತೀಚೆಗೆ ಕರಾವಳಿಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ಭೇಟಿ ನೀಡಿದ್ದ ಯಶ್, ಕಾರ್ಯಕ್ರಮದಲ್ಲಿ ಅಭಿಮಾನಿಗಳ ಒತ್ತಾಸೆ ಮೇರೆಗೆ ‘ಕೆ.ಜಿ.ಎಫ್.’ ಚಿತ್ರದ ಡೈಲಾಗ್ ಹೇಳಿದ್ದಾರೆ.

‘ರಕ್ತದ ವಾಸನೆಗೆ ನೂರಾರು ಮೀನು ಒಟ್ಟಿಗೆ ಬರ್ತಾವೆ. ಆದ್ರೆ, ಅವಕ್ಕೇನು ಗೊತ್ತು ಆ ರಕ್ತ ತಮ್ಮನ್ನು ಬೇಟೆಯಾಡಲು ಬಂದಿರೋ ತಿಮಿಂಗಿಲದ್ದು ಅಂತ’ ಹೀಗೆಂದು ಯಶ್ ಹೇಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಕೆಲ ದಿನಗಳ ಹಿಂದೆ ‘ಇನ್ನು ಮುಂದೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೆ ಭಾವ, ನಿಮ್ಮಕ್ಕನನ್ನು ಚೆನ್ನಾಗಿ ನೋಡ್ಕೊಳ್ರೋ’ ಎಂದು ಕೆ.ಜಿ.ಎಫ್. ಚಿತ್ರದ ಡೈಲಾಗ್ ಹೇಳಿದ್ದರು. ಈಗ ಮತ್ತೊಂದು ಡೈಲಾಗ್ ಹೇಳಿದ್ದಾರೆ. ಚಿತ್ರದಲ್ಲಿ ಅಭಿಮಾನಿಗಳ ಸಂಭ್ರಮವನ್ನೆಚ್ಚಿಸುವ ಡೈಲಾಗ್ ಗಳಿವೆ ಎನ್ನುವುದು ಖಾತ್ರಿಯಾಗಿದ್ದು, ಚಿತ್ರದ ಕುರಿತಾದ ಕುತೂಹಲ ಇನ್ನಷ್ಟು ಹೆಚ್ಚಾಗ್ತಿದೆ.