ದೆಹಲಿ-ಎನ್ಸಿಆರ್ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚಾಗಲಿದೆ. ಕಾರ್ ಬಾಡಿಗೆ ನೀಡುವ ಜೂಮ್ ಕಾರ್, ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರು ಒದಗಿಸುವ ತಯಾರಿಯಲ್ಲಿದೆ. ಜೂಮ್ ಕಾರ್ ಇದಕ್ಕಾಗಿ ಮಹೀಂದ್ರಾ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಮಹೀಂದ್ರಾ ಎಲೆಕ್ಟ್ರಿಕ್ ದೆಹಲಿಯಲ್ಲಿ 100 ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸಲಿದೆ. ಇದು ಇ20 ಪ್ಲಸ್ ಕಾರ್ ಆಗಿರಲಿದೆ. ಶೀಘ್ರದಲ್ಲಿಯೇ ಈ ಕಾರು ಗ್ರಾಹಕರಿಗೆ ಸಿಗಲಿದೆ ಎಂದು ಜೂಮ್ ಕಾರ್ ಹೇಳಿದೆ. ಮೈಸೂರು, ಹೈದರಾಬಾದ್ ಮತ್ತು ಜೈಪುರದ ನಂತ್ರ ಸೇವೆಯನ್ನು ದೆಹಲಿ-ಎನ್ಸಿಆರ್ ನಲ್ಲಿ ವಿಸ್ತರಿಸಲು ಎರಡೂ ಕಂಪನಿಗಳು ಮುಂದಾಗಿವೆ.

ಆರಂಭದಲ್ಲಿ ಪ್ರತಿ ಗಂಟೆಗೆ ಒಂದು ರೂಪಾಯಿಯಂತೆ ಈ ಕಾರನ್ನು ಬಾಡಿಗೆ ನೀಡಲು ಜೂಮ್ ಕಾರ್ ಮುಂದಾಗಿದೆ. ಜೂಮ್ ಕಾರ್ ಎಲೆಕ್ಟ್ರಿಕ್ ಕಾರನ್ನು ಫುಲ್ ಚಾರ್ಜ್ ಮಾಡಿ ನಿಮಗೆ ನೀಡಲಿದೆ. ನಾಲ್ಕೈದು ದಿನ ಮನೆಯಲ್ಲಿಯೇ ಕಾರನ್ನು ಇಟ್ಟುಕೊಳ್ಳಲು ಬಯಸಿದ್ರೆ ಮನೆಯಲ್ಲಿಯೇ ಕಾರ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.