1200 ವರ್ಷಕ್ಕಿಂತಲೂ ಪ್ರಾಚೀನವಾದ ಶಿವಲಿಂಗ ಪತ್ತೆ..
ಮಂಗಳೂರು ಬಂಟ್ವಾಳ ಹೆದ್ದಾರಿಯಲ್ಲಿ ಬರುವ ತುಂಬೆ ಎಂಬ ಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ಪ್ರಾಚೀನವಾದ ಶಿವಲಿಂಗ ಪತ್ತೆ ಯಾಗಿದ್ದು ಇದು ಸಾಧಾರಣ 1200 ವರ್ಷ ಪ್ರಾಚೀನವಾಗಿದ್ದು ಎಂಬುದಾಗಿ ಚಿಂತಕರು ಅಭಿಪ್ರಾಯ ಪಟ್ಟಿರುತ್ತಾರೆ ,ಕಳೆದ ಜೂನ್ ತಿಂಗಳಿನಲ್ಲಿ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿಷಿ ವಿಷ್ಣು ಹೆಬ್ಬಾರ್ ಪೂಚಕ್ಕಾಡ್, ಪ್ರಶ್ನೆಕರ್ತರಾದ ಪೊಳಲಿ ಉಪಾದ್ಯಾಯ ಮತ್ತು ಗಣೇಶ್ ಐತಾಳ್ ಇವರ ನೇತೃತ್ವದಲ್ಲಿ ಉಚ್ಚಿಲಂ ಪದ್ಮನಾಭ ತಂತ್ರಿ ಅವರ ಉಪಸ್ತಿತಿಯಲ್ಲಿ ಚಿಂತನೆಯಲ್ಲಿ ಈ ವಿಚಾರ ವ್ಯಕ್ತವಾಗಿತ್ತು, ಇದರ ಮೂಲ ಅತ್ಯಂತ ಪ್ರಸಿದ್ಧ ಮತ್ತು ಚೈತನ್ಯಯುಕ್ತವಾಗಿದ್ದು ಶಿವ ದೇವಸ್ಥಾನ ಇಲ್ಲಿಂದ ಆಗ್ನೇಯ ಭಾಗದಲ್ಲಿ ನದೀ ಸಮೀಪದಲ್ಲಿ ನಾಶವಾಗಿದೆ ಅಂತ ಕಂಡು ಬಂತು, ಅದನ್ನು ಕಂಡು ಹುಡುಕಿ ತೆಗೆದು ಅದನ್ನೇ ಪ್ರತಿಷ್ಠೆ ಮಾಡಬೇಕು, ಇದರಿಂದ ಪ್ರದೇಶದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬುದಾಗಿ ಜೋತಿಷಿಗಳು ಅಭಿಪ್ರಾಯ ಪಟ್ಟರು, ಪ್ರಶ್ನೆ ಚಿಂತೆಯ ಆಧಾರದ ಮೇಲೆ ಈಗಿರುವ ದೇವಸ್ಥಾನದ ಆಗ್ನೇಯ ಭಾಗದಲ್ಲಿ ನದಿಯಲ್ಲಿ ಕಳೆದ ವಾರ ಊರಿನವರ ಮತ್ತು ಸಮಿತಿಯವರ ಜವಾಬ್ದಾರಿಯಲ್ಲಿ ಹುಡುಕಾಟ ಪ್ರಾರಂಭವಾಯಿತು, ಮೊದಲು ದೇವಾಲಯದ ಕೆಲವು ಪಳೆಯುಳಿಕೆಗಳು ದೊರೆತವು ಸುದೀರ್ಘ ಹುಡುಕಾಟದ ಕೊನೆಯಲ್ಲಿ ನದೀ ಬದಿಯಲ್ಲಿ ಮರಳಿನ ಅಡಿಯಲ್ಲಿ ಅತ್ಯಂತ ಸುಂದರವಾಗಿರುವ ಶಿವಲಿಂಗ ಪತ್ತೆಯಾಯಿತು, ಶಿವ ಪಂಚಾಕ್ಷರೀ ಘೋಷಣೆಯೊಂದಿಗೆ ಶಿವಲಿಂಗವನ್ನು ಕ್ರೇನ್ ಮೂಲಕ ಮೇಲೆತ್ತುವಾಗ ಅದರ ಗಾತ್ರ ನೋಡಿ ಸಮಸ್ತ ಭಕ್ತರೀಗೂ ಭಯ ಭಕ್ತಿ ಆಶ್ಚರ್ಯವೂ ಆಯಿತು. 5-1/4 ಫೀಟ್ ಎತ್ತರವಿರುವ ವಿಗ್ರಹ ದರ್ಶನದಿಂದ ನೆರೆದ ಭಕ್ತರ ಒಕ್ಕೊರಳಿನ ಓಂ ನಮಃಶಿವಾಯ ಘೋಷಣೆ ಮುಗಿಲು ಮುಟ್ಟಿತು, ವಿಗ್ರಹಕ್ಕೆ ಯಾವುದೇ ಒಡಕುಗಳಿಲ್ಲ ವಿಗ್ರಹ ಸಿಕ್ಕಿದ ಕೂಡಲೇ ಮೊಕ್ತೇಸರರು ಭಕ್ತ ವೃಂದ ಎಲ್ಲರೂ ಸೇರಿ ಜ್ಯೋತಿಷಿ ವಿಷ್ಣು ಹೆಬ್ಬಾರ್ ಪೂಚಕ್ಕಾಡ್, ಪ್ರಶ್ನೆಕರ್ತರಾದ ಪೊಳಲಿ ಉಪಾದ್ಯಾಯ ಮತ್ತು ಗಣೇಶ್ ಐತಾಳ್ ಇವರ ನೇತೃತ್ವದಲ್ಲಿ ಉಚ್ಚಿಲಂ ಪದ್ಮನಾಭ ತಂತ್ರಿ ಅವರ ನಿರ್ದೇಶನದಲ್ಲಿ ಪುನರ್ ಚಿಂತನೆ ಮಾಡಿ ಮುಂದಿನ ಕಾರ್ಯದ ಬಗ್ಗೆ ವಿಮರ್ಶೆ ಮಾಡಲಾಯಿತು ಪ್ರಕೃತ ನದಿಯಲ್ಲಿ ಜಲಾದಿವಾಸದಲ್ಲಿರುವ ವಿಗ್ರಹವನ್ನು ದಿನಾಂಕ 09.04.2016 ಶನಿವಾರ ಮೆರವಣಿಗೆಯೊಂದಿಗೆ ತಂದು ಬಾಲಾಲಯದಲ್ಲಿ ಸ್ಥಾಪನೆ ಮಾಡಿ ಮುಂದೆ ಶಾಶ್ತ್ರಸಮ್ಮತವಾಗಿ ಜೀರ್ಣೋದ್ಧಾರ ಪುನಃಪ್ರತಿಷ್ಥಾ ಸಮಾರಂಭ ಜರಗಿಸಲು ಊರ ಮಹನೀಯರು ಉದ್ಯುಕ್ತರಾಗಿರುತ್ತಾರೆ, ಆ ಬಗ್ಗೆ ಸಮಿತಿಯನ್ನು ರೂಪೀಕರಣ ಮಾಡಲಾಗಿದೆ…