ಚಿಕ್ಕ ಕಾರುಗಳು ಹಾಗೂ ಸೆಡಾನ್ ಗಳೇ ಭಾರತದ ಗ್ರಾಹಕರ ಫೇವರಿಟ್ ಎಂದುಕೊಂಡ್ರೆ ನಿಮ್ಮ ಲೆಕ್ಕಾಚಾರ ತಪ್ಪು. ಯಾಕಂದ್ರೆ 2017-18 ರಲ್ಲಿ ಇತರ ಕಾರುಗಳಿಗಿಂತ್ಲೂ SUV ಮಾರಾಟ ವೇಗ 7 ಪಟ್ಟು ಹೆಚ್ಚಾಗಿದೆ.

ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಹೊಸ ಹೊಸ ಮಾದರಿಯ SUV ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದೇ ಇದಕ್ಕೆ ಕಾರಣ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಸಣ್ಣ ಕಾರುಗಳು ಮತ್ತು ಸೆಡಾನ್ ಗಳ ಮಾರಾಟದಲ್ಲೂ ಶೇ.3 ರಷ್ಟು ಹೆಚ್ಚಳವಾಗಿದೆ.

ಸ್ಕೂಟರ್ ಗಳ ಮಾರಾಟದಲ್ಲಿ ಶೇ.20 ರಷ್ಟು ಹಾಗೂ ಮೋಟಾರ್ ಸೈಕಲ್ ಗಳ ಮಾರಾಟದಲ್ಲಿ ಶೇ.14 ರಷ್ಟು ಏರಿಕೆಯಾಗಿದೆ. 2017-18 ರಲ್ಲಿ SUVಯ ಒಟ್ಟಾರೆ ವಾಹನಗಳ ಮಾರಾಟದಲ್ಲಿ ಶೇ.30 ರಷ್ಟು ಹೆಚ್ಚಳವಾಗಿದೆ.

ಕಳೆದ ಬಾರಿ 7.6 ಲಕ್ಷ SUV ಗಳು ಮಾರಾಟವಾಗಿದ್ದವು. 2017-18 ರಲ್ಲಿ ಒಟ್ಟು 9.2 ಲಕ್ಷ SUV ಗಳು ಮಾರಾಟವಾಗಿವೆ. ಮೊದಲು SUVಗಳು ಅತ್ಯಂತ ದುಬಾರಿಯಾಗಿದ್ದವು. ಆದ್ರೀಗ ಮಧ್ಯಮ ವರ್ಗದವರೂ ಖರೀದಿಸಬಹುದಾದ ಬೆಲೆಗೆ ಲಭ್ಯವಿವೆ.