*ಸೋಲರಿಯದ ಸರದಾರನಿಗೆ ಸುಲಭವಾಗಬಹುದೇ ಕುಮಟಾ ಕ್ಷೇತ್ರ :*
ತನ್ನ ಕಾಲೇಜು ಜೀವನದಿಂದಲೇ ಯುವ ನಾಯಕನಾಗಿ, ಕ್ರೀಡಾಪಟುವಾಗಿ ಸಾಮಾಜಿಕ ಕಾಳಜಿಯ ಮುಂದಾಳುವಾಗಿ ಗುರುತಿಸಿಕೊಂಡ ಕೃಷ್ಣಗೌಡರಿಗೆ ರಾಜಕೀಯಕ್ಕೆ ಕಾಲಿಟ್ಟಾಗ ಯಾವ ನಾಯಯಕನೂ ನೆರವಿಗೆ ಬರಲಿಲ್ಲ. ನಾಯಕರನ್ನು ನಂಬಿಕುಳಿತರೆ ಭವಿಷ್ಯವಿಲ್ಲಾ. ಜನ ನನ್ನಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ ಜನರಿಗೆ ಇನ್ನೂ ಹೆಚ್ಚಿನ ನೆರವು ನೀಡಬೇಕಾದರೆ ರಾಜಕೀಯದಲ್ಲಿ ತನ್ನದೇ ಆದ ಸ್ಥಾನ ಮಾನ ದೊರೆತರೆ ಅದರಿಂದ ನೊಂದವರಿಗೆ, ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನೆರವಾಗಲು ಸಾಧ್ಯ ಎನ್ನುವುದನ್ನು ಅರಿತ ಇವರು 2005 ರಲ್ಲಿ ಕಾಂಗ್ರೆಸ್ ನಿಂದ ಹೊನ್ನಾವರ ತಾಲೂಕಾ ಪಂಚಾಯತ ಟಿಕೇಟು ಬಯಸಿ ಅರ್ಜಿ ಸಲ್ಲಿಸಿದರೆ, ಪಕ್ಷ ಕೃಷ್ಣ ಗೌಡರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೇಟು ನೀಡಿತ್ತು. ಪಕ್ಷವನ್ನೇ ಅವಲಂಭಿಸಿಕೊಂಡಿದ್ದರೆ ಸಾಧ್ಯವಿಲ್ಲವೆಂದು ಪಕ್ಷೇತರ ಅಭ್ಯರ್ಥಿಯಾಗಿ ಚೊಚ್ಚಲ ಚುನಾವಣಾ ಕಣಕ್ಕೆ ಧುಮುಕಿಯೇ ಬಿಟ್ಟರು. ನಂತರ ನಡೆದಿದೆಲ್ಲವೂ ಇತಿಹಾಸವಾಗಿಬಿಟ್ಟಿತು. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತಾಲೂಕಾ ಪಂಚಾಯತ ಪ್ರವೇಶಿಸಿದಾಗ ಸಂಪೂರ್ಣ ಬಹುಮತ ಪಡೆಯದೇ ಇರುವ ಕಾಂಗ್ರೆಸ್ ಗೆ ಮತ್ತೆ ಕೃಷ್ಣ ಗೌಡರೇ ಅನೀವಾರ್ಯವಾಗಿಬಿಟ್ಟರು. ಕೃಷ್ಣ ಗೌಡರ ಬೆಂಬಲದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ 2008 ರಲ್ಲಿ ಒಂದು ಅವಧಿಗೆ ಕೃಷ್ಣ ಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿತು. ನಂತರ ಪಕ್ಷದ ಸಂಘಟನೆಗಾಗಿ ತಾಲೂಕಿನಾದ್ಯಂತ ಸಂಚರಿಸಿ ಉತ್ತಮ ನಾಯಕನಾಗಿ ಹೊರ ಹೊಮ್ಮಿದರು.
2010 ರಲ್ಲಿ ಮಾವಿನಕುರ್ವಾ ಕ್ಷೇತ್ರದಿಂದ ಜಿಲ್ಲಾ ಪಂಚಾಯತ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಎಲ್ಲಾ ಸಮಾಜದವರ ಬೆಂಬಲವನ್ನು ಪಡೆದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂತರದ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿ ಮತ್ತೊಂದು ದಾಖಲೆಯ ಜಯದೊಂದಿಗೆ ಜಿಲ್ಲಾ ಪಂಚಾಯತ ಪ್ರವೇಶಿಸಿ, ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜನಪರ ಆಡಳಿತನ್ನು ನೀಡುವ ಜೊತೆಗೆ ಜಿಲ್ಲೆಯಲ್ಲಿ ಎಲ್ಲಾ ಸಮಾಜದವರಿಗೂ ಚಿರ ಪರಿಚಿತರಾಗಿ ಅದರಲ್ಲೂ ಒಕ್ಕಲಿಗ ಸಾಮಾಜದ ಪ್ರತಿನಿಧಿಯಾಗಿ ಹೊರ ಹೊಮ್ಮಿದರು. ಅತಿ ಹೆಚ್ಚು ಒಕ್ಕಲಿಗ ಸಮಾಜದ ಮತಗಳಿರುವ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಹಾಲಕ್ಕಿ ಮತ್ತು ಗ್ರಾಮ ಒಕ್ಕಲಿಗರನ್ನು ವಿಶ್ವಾಸಕ್ಕೆಪಡೆದು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ, ಜಿಲ್ಲೆಯಲ್ಲಿರುವ ಒಕ್ಕಲಿಗರು ಮತ್ತು ರಾಜ್ಯ ಒಕ್ಕಲಿಗರ ಬಾಂಧವ್ಯವ ವೃದ್ಧಿಗೆ ಹಗಲಿರುಳು ಶೃಮಿಸಿದ್ದಾರೆ. ರಾಜ್ಯ ಒಕ್ಕಲಿಗ ಸಂಘದಲ್ಲಿ ಜಿಲ್ಲೆಯ 1500ಕ್ಕೂ ಅಧಿಕ ಜನರಿಗೆ ಸದಸ್ಯತ್ವವನ್ನು ಕೊಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿರುತ್ತಾರೆ. ಶ್ರೀ ಆದಿಚುಂಚನಗಿರಿ ಶಾಖಾಮಠದ ಭಕ್ತರಾಗಿ ಗುರುವರೇಣ್ಯರ ಸಂಪೂರ್ಣ ಆಶೀರ್ವಾದವನ್ನು ಪಡೆದು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿರುತ್ತಾರೆ. ಕುಮಟಾ, ಗೋಕರ್ಣ, ಹೊನ್ನಾವರದಲ್ಲಿ ಸ್ವಾಮೀಜಿಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಾಯವನ್ನು ನೀಡಿ ಅದರ ಉಸ್ತುವಾರಿಯನ್ನು ವಹಿಸಿಕೊಳ್ಳುವ ಮೂಲಕ ಜಿಲ್ಲೆಯ ಎಲ್ಲಾ ಒಕ್ಕಲಿಗ ಸಮಾಜದ ಮನೆ ಮಗನಾಗಿ ಬೆಳಗತೊಡಗಿದರು. ಕೇವಲ ಸಮಾಜ ಬಾಂದವರಿಗಷ್ಟೇ ಅಲ್ಲದೇ ಇತರೆಲ್ಲಾ ಸಮಾಜದ ಕಾರ್ಯಕ್ರಮ ಮತ್ತು ಕ್ರೀಡಾಕೂಟಗಳಿಗೆ ಸಹಾಯ ಹಸ್ತವನ್ನು ಚಾಚುವುದರೊಂದಿಗೆ ಎಲ್ಲರ ಪ್ರೀತಿಯ ಕೃಷ್ಣಣ್ಣನಾಗಿ ಬೆಳೆದರು.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದಾಗ ಶ್ರೀ ಮೊಹನ ಶೆಟ್ಟಿಯವರು ದಿವಂಗತರಾಗಿರುವುದರಿಂದ ಅವರ ಪತ್ನಿಗೆ ಟಿಕೇಟು ನೀಡಬೇಕೆಂದು ಪಕ್ಷ ನಿರ್ಧರಿಸಿದಾಗ ಸ್ಪರ್ಧೆಯಿಂದ ಹಿಂದೆ ಸರಿದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. 2015ರಲ್ಲಿ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಮೀಸಲಾತಿ ಬದಲಾದ ಕಾರಣ ತನ್ನ ಪತ್ನಿಯನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲುವ ಸಾಧಿಸುವ ಮೂಲಕ ತನ್ನ ಗೆಲುವಿನ ಚೈತ್ರ ಯಾತ್ರೆಯನ್ನು ಮುಂದುವರೆಸಿದರು. ಪಕ್ಷ ಸಂಘಟನೆ ಮತ್ತು ನೊಂದವರಿಗೆ ಸಹಾಯ-ಸಹಕಾರವನ್ನು ಮಾಡುತ್ತಾ ಕ್ಷೇತ್ರದಲ್ಲಿ ತನ್ನದೇ ಆದ ಬಳಗವನ್ನು ಕಟ್ಟಿಕೊಂಡು 2018 ವಿಧಾನಸಭೆಗೆ ಸ್ಪರ್ಧಿಸಲು ಹೊರಟಿರುವ ಕೃಷ್ಣಗೌಡರು, ಪಕ್ಷದ ಟಿಕೇಟಗಾಗಿ ಇಗಾಗಲೇ ಅರ್ಜಿಯನ್ನು ಸಲ್ಲಿಸಿ ತನ್ನ ನೆಚ್ಚಿನ ನಾಯಕರುಗಳ ಬೆಂಬಲವನ್ನು ಪಡೆದು ಟಿಕೇಟು ಗಿಟ್ಟಿಸಿಕೊಳ್ಳುವ ಆಶಾಭಾವನೆಯೊಂದಿಗೆ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಮಾಜ ಬಾಂಧವರೂ ತುಂಬಾ ಹುಮ್ಮಸ್ಸಿನೊಂದಿಗೆ ಗೌಡರೊಂದಿಗೆ ಹೆಜ್ಜೆಹಾಕುತ್ತಿರುವುದನ್ನು ನೋಡಿದರೆ ಮತ್ತೊಮ್ಮೆ ಕ್ಷೇತ್ರದಲ್ಲಿ ಇತಿಹಾಸ ಮರುಕಳಿಸುವ ಲಕ್ಷಣಗಳು ಎಲ್ಲಡೆಯಲ್ಲಿಯೂ ಗೋಚರಿಸುತ್ತಿದೆ. ಇತರೆ ಸಮಾಜದವರೂ ಕೃಷ್ಣಗೌಡರ ಬೆಂಬಲಕ್ಕೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಜೊತೆಯಾಗುತ್ತಿರುವುದನ್ನು ನೋಡಿದರೆ ಈ ಭಾರಿ ಹೊಸಬರಿಗೆ ಕ್ಷೇತ್ರ ಮಣೆ ಹಾಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಚುನಾವಣೆಗೆ ತಯಾರಿನಡೆಸಿಕೊಂಡು ಹೊರಟಿರುವ ಇವರಿಗೆ ಜೊತೆಯಾದವರೆಲ್ಲರೂ ಟಿಕೇಟು ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯು ಒತ್ತಾಯವನ್ನು ಮಾಡುತ್ತಿದ್ದು, ಒತ್ತಾಯಕ್ಕೆ ಮಣಿದು ಪಕ್ಷೇತರನಾಗಿ ಕಣಕ್ಕಿಳಿದರೆ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗ ಸಮಾಜದ ಹೆಚ್ಚಿನ ಬೆಂಬಲದೊಂದಿಗೆ ಇತರೆಲ್ಲಾ ಸಮಾಜದವರ ಬೆಂಬಲ ಪಡೆದು ಮತ್ತೊಂದು ಗೆಲುವು ಪಡೆದು ಸೋಲರಿಯದ ಸರದಾರನಾಗಿ ಸಾಮಾನ್ಯ ಜನರ ನೇತಾರನಾಗಿ ಹೊರಹೊಮ್ಮುವರೇ ? ಕಾದು ನೋಡಬೇಕು…