ಕಾರ್ ಚಲಾಯಿಸುತ್ತಿದ್ದಾಗ ಪ್ರಜ್ಞೆ ತಪ್ಪಿದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಜೀವಾಪಾಯದಿಂದ ಪಾರು ಮಾಡಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಉತ್ತರ ಪ್ರದೇಶ ನಂಬರ್ ಪ್ಲೇಟ್ ಇರುವ ಕಾರ್ ಅನ್ನು 40 ವರ್ಷದ ವ್ಯಕ್ತಿಯೋರ್ವ ಡ್ರೈವ್ ಮಾಡಿಕೊಂಡು ಬರುತ್ತಿದ್ದ. ಆತ ಮಹಿಪಲ್ ಪುರದಿಂದ ಮನೆಗೆ ತೆರಳುತ್ತಿದ್ದನೆನ್ನಲಾಗಿದೆ. ಆದರೆ ಡ್ರೈವಿಂಗ್ ಮಾಡುತ್ತಿರುವಾಗಲೇ ಆತನಿಗೆ ಪ್ರಜ್ಞೆ ತಪ್ಪಿದೆ. ಆದರೆ ದೆಹಲಿಯ ಕೊನ್ನೊ ಎಂಬಲ್ಲಿನ ಹನುಮಾನ್ ಮಂದಿರ ಬಳಿ ಪೊಲೀಸರು ವಾಹನಗಳನ್ನು ಗಮನಿಸುತ್ತಿದ್ದಾಗ ಈ ವ್ಯಕ್ತಿ ಪ್ರಜ್ಞೆ ತಪ್ಪಿರುವ ಬಗ್ಗೆ ಅನುಮಾನ ಬಂದಿದೆ.

ಪೊಲೀಸರು ಹೇಗೋ ಆತನ ಕಾರ್ ಅನ್ನು ನಿಲ್ಲಿಸಿ, ಲಾಕ್ ಆಗಿದ್ದ ಕಾರ್ ನಿಂದ ಆತನನ್ನು ಹೊರಗೆಳೆದು ಬಚಾವ್ ಮಾಡಿದ್ದಾರೆ. ಆ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.