ಚೀನಾದಲ್ಲಿ ಪ್ರಯಾಣಿಕನೊಬ್ಬ ಪೆನ್ ಅನ್ನೇ ಅಸ್ತ್ರವನ್ನಾಗಿಸಿಕೊಂಡು ವಿಮಾನ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ನಂತರ ಬೀಜಿಂಗ್ ಗೆ ತೆರಳಬೇಕಿದ್ದ ವಿಮಾನವನ್ನು ಸೆಂಟ್ರಲ್ ಚೀನಾ ಕಡೆಗೆ ಡೈವರ್ಟ್ ಮಾಡಲು ಕೂಡ ಯಶಸ್ವಿಯಾಗಿದ್ದಾನೆ.

ಏರ್ ಚೀನಾದ 1350 ವಿಮಾನದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8.40ಕ್ಕೆ ಈ ವಿಮಾನ ಚಾಂಗ್ಷಾದಿಂದ ಟೇಕಾಫ್ ಆಗಿತ್ತು. 11 ಗಂಟೆಗೆ ಬೀಜಿಂಗ್ ತಲುಪಬೇಕಿತ್ತು. ಆದ್ರೆ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯನ್ನೇ ಒತ್ತೆಯಾಳಾಗಿರಿಸಿಕೊಂಡು ಪ್ಲೇನ್ ಹೈಜಾಕ್ ಮಾಡಿದ್ದಾನೆ.

ತಾನು ಹೇಳಿದ ಸ್ಥಳಕ್ಕೆ ವಿಮಾನವನ್ನು ಕೊಂಡೊಯ್ಯದೇ ಇದ್ರೆ ಸಿಬ್ಬಂದಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ಪೈಲಟ್ ಅನಿವಾರ್ಯವಾಗಿ ಬೀಜಿಂಗ್ ಬದಲು ಸೆಂಟ್ರಲ್ ಚೀನಾದ ಕಡೆಗೆ ವಿಮಾನವನ್ನು ಡೈವರ್ಟ್ ಮಾಡಿದ.

10 ಗಂಟೆಗೆ ವಿಮಾನವನ್ನು ಜೆಂಗ್ಝೌ ನಗರದಲ್ಲಿ ಲ್ಯಾಂಡ್ ಮಾಡಲಾಯ್ತು. ಈ ವಿವಾದ ಬಗೆಹರಿದ ಬಳಿಕ ಅಲ್ಲಿಂದ ವಿಮಾನ ಬೀಜಿಂಗ್ ನತ್ತ ಹಾರಿದೆ. ಮಧ್ಯಾಹ್ನ 1.17ಕ್ಕೆ ವಿಮಾನ ಸುರಕ್ಷಿತವಾಗಿ ಬೀಜಿಂಗ್ ತಲುಪಿದೆ.