ತಮಿಳುನಾಡಿನಲ್ಲಿ 77 ವರ್ಷದ ವೃದ್ಧ ವಿಧವೆಗೆ ವಿಧವಾ ವೇತನ ನೀಡಲು ಅಧಿಕಾರಿಯೊಬ್ಬ ನಿರಾಕರಿಸಿದ್ದಾನೆ. ವಿಧವೆ ಬಿಂದಿ ಹಚ್ಚಿಕೊಂಡಿದ್ದಾಳೆ ಎಂಬ ಕಾರಣ ಹೇಳಿ ಪಿಂಚಣಿ ನಿರಾಕರಿಸಿದ್ದಾನೆ. ಮೇಲಿನ ಅಧಿಕಾರಿಗಳು ಕೂಡ ಮಹಿಳೆ ಕುಟುಂಬದವರನ್ನು ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

77 ವರ್ಷದ ವೃದ್ಧ ವಿಧವೆ ಪತಿ ಎಲೆಕ್ಟ್ರಿಕಲ್ ಹಾಗೂ ಮೆಕಾನಿಕಲ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ. ಅಲ್ಲಿಂದ ವಿಧವೆಗೆ ವಿಧವಾ ವೇತನ ನೀಡಲಾಗ್ತಾಯಿತ್ತು. ಫಾರ್ಮ್ ನೀಡಲು ಹೋದಾಗ ಅಧಿಕಾರಿ ಮಲಗಿದ್ದನಂತೆ. ನಂತ್ರ ಹಣ ನೀಡಲು ನಿರಾಕರಿಸಿದ್ದಾನೆ.

ವೃದ್ಧೆ ಬಿಂದಿ ಹಚ್ಚಿಕೊಂಡಿದ್ದಾಳೆ. ಈ ಕಾರಣಕ್ಕೆ ಹಣ ನೀಡಲು ಸಾಧ್ಯವಿಲ್ಲವೆಂದ ಅಧಿಕಾರಿ ಪತಿಯ ಚಿತಾಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುವಂತೆ ಹೇಳಿದ್ದಾನಂತೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ರೆ ಅವ್ರು ಕೂಡ ಅಧಿಕಾರಿಯ ಪರ ಮಾತನಾಡಿದ್ದಾರಂತೆ.