ಏಮ್ಸ್ ವೈದ್ಯನೆಂದು ಸುಳ್ಳು ಹೇಳಿದ್ದ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಐಡೆಂಟಿಟಿ ಕಾರ್ಡ್ ಹೊಂದಿದ್ದ ಅದ್ನಾನ್ ಖುರ್ರಂ ಎಂಬಾತ, ಕಳೆದ 5 ತಿಂಗಳಿಂದ ತಾನೊಬ್ಬ ವೈದ್ಯನೆಂದು ಎಲ್ಲರನ್ನು ನಂಬಿಸಿದ್ದ.

ಏಮ್ಸ್ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದ್ದ. ವೈದ್ಯರ ಪ್ರತಿಭಟನೆ, ಮ್ಯಾರಥಾನ್ ಹೀಗೆ ಎಲ್ಲಾ ಈವೆಂಟ್ ಗಳನ್ನೂ ಪಾಲ್ಗೊಂಡಿದ್ದ. ಪೊಲೀಸರು ಶನಿವಾರ ಅದ್ನಾನ್ ನನ್ನು ಬಂಧಿಸಿದ್ದಾರೆ.

ಆದ್ರೆ ಅವನಿಗಿರುವ ವೈದ್ಯಕೀಯ ಕ್ಷೇತ್ರದ ಜ್ಞಾನ ನೋಡಿ ದಂಗಾಗಿ ಹೋಗಿದ್ದಾರೆ. ಆದ್ರೆ ಪದೇ ಪದೇ ಆತ ತನ್ನ ಹೇಳಿಕೆ ಬದಲಾಯಿಸುತ್ತಿರುವುದರಿಂದ ಪೊಲೀಸರೇ ಗೊಂದಲಕ್ಕೀಡಾಗಿದ್ದಾರೆ. ಕುಟುಂಬ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಉಚಿತ ಚಿಕಿತ್ಸೆ ದೊರಕಿಸಲು ಸುಳ್ಳು ಹೇಳಿದ್ದೆ ಎನ್ನುತ್ತಾನೆ ಅದ್ನಾನ್.

ಮತ್ತೊಮ್ಮೆ ತಾನು ಸಹ ಎಂಬಿಬಿಎಸ್ ಮಾಡಬೇಕು, ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಲು ವೈದ್ಯನಂತೆ ನಾಟಕವಾಡಿದೆ ಎನ್ನುತ್ತಾನೆ. ತಾನೊಬ್ಬ ಜೂನಿಯರ್ ಡಾಕ್ಟರ್ ಎನ್ನುತ್ತಿದ್ದ ಆತ, ಬಿಳಿ ಕೋಟ್ ಹಾಗೂ ಸ್ಟೆತಾಸ್ಕೋಪ್ ಧರಿಸಿ ಓಡಾಡುತ್ತಿದ್ದ.