ಬಾಹ್ಯಾಕಾಶದ ಬಗ್ಗೆ ಹತ್ತಾರು ಬಗೆಯ ಕುತೂಹಲಗಳಿರುವುದು ಸಹಜ. ಕೆಲವರಿಗೆ ಬಾಹ್ಯಾಕಾಶದ ಬಗ್ಗೆ ಇನ್ನೊಂದಷ್ಟು ಮತ್ತೊಂದಷ್ಟು ತಿಳಿದುಕೊಳ್ಳುವ ಆಸಕ್ತಿ. ನಕ್ಷತ್ರಗಳು, ಗ್ರಹಗಳು, ಬ್ರಹ್ಮಾಂಡದ ಬಗೆಗಿನ ಹೊಸ ಹೊಸ ಸಂಗತಿಗಳು ಖುಷಿ ಕೊಡುತ್ತವೆ.

ಜಾನ್ಸ್ ಹೋಪ್ಕಿನ್ಸ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರೋ ಸಾರಾ ಹೋರ್ಸ್ಟ್ ಗೆ ಮಂಗಳ ಹಾಗೂ ಚಂದ್ರನ ಅಂಗಳದಿಂದ ತಂದ ಎರಡು ತುಣುಕುಗಳನ್ನು ಸ್ಪರ್ಷಿಸುವ ಸೌಭಾಗ್ಯ ಸಿಕ್ಕಿದೆ. ಆಕೆಯ ಈ ಫೋಟೋಗಳು ಜಾಲತಾಣಗಳಲ್ಲೂ ವೈರಲ್ ಆಗಿವೆ.

ಚಂದ್ರ ಹಾಗೂ ಮಂಗಳನಲ್ಲಿಗೇ ಹೋಗಿ ಬಂದಷ್ಟು ಖುಷಿ, ಆನಂದ, ಮತ್ತು ತೃಪ್ತಿ ಪ್ರಾಧ್ಯಾಪಕಿಯ ಮುಖದಲ್ಲಿತ್ತು. ಅದನ್ನು ಜಾಲತಾಣ ಬಳಕೆದಾರರು ಕೂಡ ಮೆಚ್ಚಿಕೊಂಡಿದ್ದಾರೆ. ನಿಜಕ್ಕೂ ಸಾರಾ ಅದೃಷ್ಟವಂತೆ ಅಂತಾ ಕೊಂಡಾಡಿದ್ದಾರೆ.