ಅಮೆರಿಕದ ಪ್ರೈಮೇಟ್ ರೀಸರ್ಚ್ ಫೆಸಿಲಿಟಿ ಲ್ಯಾಬ್ ನಿಂದ 4 ದೊಡ್ಡ ಮಂಗಗಳು ತಪ್ಪಿಸಿಕೊಂಡಿದ್ದು, ಸಿಬ್ಬಂದಿಗಳು ಹರಸಾಹಸ ಪಟ್ಟು ಮಂಗಗಳನ್ನು ಹಿಡಿದಿದ್ದಾರೆ.

ಶನಿವಾರ ಸಾಯಂಕಾಲ ಈ ಲ್ಯಾಬ್ ನಲ್ಲಿದ್ದ 1,100 ಹೆಗ್ಗೋತಿಗಳಲ್ಲಿ ನಾಲ್ಕು ಮಂಗಗಳು ತಪ್ಪಿಸಿಕೊಂಡಿವೆ. ಈ ಮಂಗಗಳನ್ನು ಹಿಡಿಯಲು ಲ್ಯಾಬ್ ನ ಸಿಬ್ಬಂದಿ ಸುಮಾರು ಅರ್ಧಗಂಟೆಗಳ ಕಾಲ ಬೆನ್ನಟ್ಟಿ ಮೂರು ಮಂಗಗಳನ್ನು ಹಿಡಿದು ವಾಪಸ್ ತಂದಿದ್ದಾರೆ. ತಪ್ಪಿಸಿಕೊಂಡು ಹೋಗಿದ್ದ ಮತ್ತೊಂದು ಮಂಗ ತಾನಾಗಿಯೇ ವಾಪಸ್ ಬಂದಿದೆ.

ಲ್ಯಾಬ್ ನ ಸಿಬ್ಬಂದಿ ಮಂಗಗಳನ್ನು ಹಿಡಿಯಲು ಓಡುತ್ತಿರುವ ವಿಡಿಯೋವನ್ನು ದೋರಿಯನ್ ರೇಯ್ನಾ ಎಂಬುವವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಇದು 5 ಸಾವಿರ ಬಾರಿ ವೀಕ್ಷಿಸಲ್ಪಟ್ಟಿದೆ.