ಮಥುರಾದಲ್ಲಿ ಮಾಂತ್ರಿಕನ ಮಾತು ನಂಬಿ ನಾಲ್ವರು, 19 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾರೆ. ಏಪ್ರಿಲ್ 2 ರಂದು ಈ ಕೃತ್ಯ ನಡೆದಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಿಕ್ಷಾ ಚಾಲಕನಾಗಿದ್ದ ಸಚಿನ್ ಏಪ್ರಿಲ್ 2ರಂದು ನಾಪತ್ತೆಯಾಗಿದ್ದ. ಪೊಲೀಸ್ ತನಿಖೆ ವೇಳೆ ಆತನನ್ನು ಬರ್ಬರವಾಗಿ ಹತ್ಯೆ ಮಾಡಿರೋದು ಬೆಳಕಿಗೆ ಬಂದಿದೆ. ಸಚಿನ್ ಕಾಣೆಯಾಗುವುದಕ್ಕೂ ಮುನ್ನ ಇಬ್ಬರು ವ್ಯಕ್ತಿಗಳ ಜೊತೆಗಿದ್ದ, ಆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ವಿನೋದ್ ಸೈನಿ ಹಾಗೂ ರಾಜೇಂದ್ರ ಯಾದವ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ರು.

ಮನುಷ್ಯನನ್ನು ಬಲಿ ಕೊಟ್ಟರೆ ಕೋಟ್ಯಾಧೀಶರಾಗುತ್ತೀರಾ ಎಂದು ತಾಂತ್ರಿಕ ಬಂಟಿ ಸೈನಿ ಎಂಬಾತ ಇವರನ್ನು ನಂಬಿಸಿದ್ದ. ನಂತರ ಲಕ್ಷಣ್ ಹಾಗೂ ಸೋನು ಜೊತೆ ಸೇರಿಕೊಂಡು ಸಚಿನ್ ನನ್ನು ಅಪಹರಿಸಿ, ಹತ್ಯೆ ಮಾಡಲಾಗಿತ್ತು. ಮಹಾದೇವ್ ಘಾಟ್ ಬಳಿ ಕೇಬಲ್ ನಿಂದ ಉಸಿರುಗಟ್ಟಿಸಿ, ಸಚಿನ್ ನನ್ನು ಕೊಲ್ಲಲಾಗಿತ್ತು.