ತಾಯಿ-ಮಗುವಿನ ಬಾಂಧವ್ಯ ಅದು ಅನನ್ಯವಾದದ್ದು. ಎಲ್ಲ ಜೀವರಾಶಿಗಳಲ್ಲಿಯೂ ಈ ಬಂಧ ಹೀಗೆಯೇ ಇರುತ್ತದೆ. ಈ ಭಾವನೆಗೆ ಮನುಷ್ಯರು, ಪ್ರಾಣಿ-ಪಕ್ಷಿಗಳೆಂಬ ಬೇಧವಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಸೆರೆಯಾಗಿದೆ ಒಂದು ಫೋಟೋ.

ಹೌದು, ಅಮೆರಿಕದ ಸ್ಮಿಥ್ ಸೋನಿಯಾಸ್ ನ್ಯಾಷನಲ್ ಝೂ ಹಾಗೂ ಕಾನ್ಸರ್ವೇಶನ್ ಬಯಾಲಜಿ ಇನ್ ಸ್ಟಿಟ್ಯೂಟ್ ನಲ್ಲಿ ಆಗತಾನೆ ಹುಟ್ಟಿದ ಮರಿಗೆ ತಾಯಿ ಗೊರಿಲ್ಲಾ ಮುತ್ತನ್ನಿಡುತ್ತಿರುವ ಪೋಟೋ ಸೆರೆಯಾಗಿದೆ.

ಕಾಲಯಾ ಅನ್ನೋ ಗೊರಿಲ್ಲಾದ ಈ ಭಾವನಾತ್ಮಕ ವೀಡಿಯೋವನ್ನು ಪ್ರಾಣಿ ಸಂಗ್ರಹಾಲಯದವರು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಇದನ್ನು 3.4 ಮಿಲಿಯನ್ ಜನರು ನೋಡಿದ್ದಾರೆ.