ಉತ್ತರಕನ್ನಡ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರಿಗೆ ಅಪರಿಚತ ವ್ಯಕ್ತಿ ಇಂಟರ್ ನೆಟ್ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. +04044 ಈ ನಂಬರಿನಿಂದ ಅನಂತ್ ಕುಮಾರ್ ಹೆಗಡೆಯವರ ಮೊಬೈಲ್ ನಂಬರ್ ಗೆ ಕರೆ ಬಂದಿದೆ. ಆದರೆ ಕರೆ ಸ್ವೀಕರಿಸದೇ ಇದ್ದಾಗ 0040440000 ನಂಬರಿನಿಂದ ಶಿರಸಿಯ ಸಚಿವರ ಮನೆಯ ಲ್ಯಾಂಡ್ ಲೈನ್ ಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಲ್ಯಾಂಡ್ ಲೈನ್ ನಲ್ಲಿ ಮೊದಲು ಅನಂತ್ ಕುಮಾರ್ ಹೆಗಡೆ ಯವರ ಪತ್ನಿ ಮಾತನಾಡಿದ್ದಾರೆ ಆಗ ಕರೆ ಕಟ್ ಮಾಡಿದ್ದಾರೆ. ನಂತರ ಮತ್ತೆ ಕರೆ ಮಾಡಿದಾಗ ಅನಂತಕುಮಾರ್ ಹೆಗಡೆ ಮಾತನಾಡಿದ್ದು ಅವರ ಬಳಿ ನೀನು ದೊಡ್ಡ ಲೀಡರಾ, ನಿನ್ನ ತಲೆ ತೆಗೆಯುತ್ತೇನೆ, ದೇಹವನ್ನ ತುಂಡಾಗಿ ಮಾಡಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504 ಹಾಗೂ 507 ರ ಪ್ರಕಾರ ದೂರು ದಾಖಲಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.