*ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಟೆಯಿಂದ ಸೇವೆ ಸಲ್ಲಿಸಿದ್ದಕ್ಕೆ ಕಣ್ಣಿರಿಡುವಂತಾಗದೆ..*

*ಮೋದಿ ಬಾವುಟ ಕಿತ್ತವರಿಗೆ ಟಿಕೇಟ್ : ನ್ಯಾಯ ಎಲ್ಲಿದೆ ?*

*ಮೂಲ ತತ್ವ ಸಿದ್ದಾಂತದೊಂದಿಗೆ ಚುನಾವಣೆಗೆ ಸ್ಪರ್ದೆ : ಸೂರಜ್ ನಾಯ್ಕ್*

*ನಾಳೆ ರ‍್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ..*

ಸ್ವತಂತ್ರವಾಗಿ ನಾನು ಸ್ಪರ್ದಿಸುವ ಕುರಿತು ಸೂರಜ್ ನಾಯ್ಕ್ ಮಾದ್ಯಮಗೋಷ್ಟಿ ಕರೆದಿದ್ದರು

ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಅಸಂಖ್ಯ ಅಭಿಮಾನಿಗಳು ಹಾಗೂ ಹಿಂದೂ ಕಾರ‍್ಯಕರ್ತರು ಬೆಂಗಾವಲಿಗೆ ನಿಂತಿರುವುದು ಮನೋಸ್ತೈರ್ಯ ಹೆಚ್ಚಿಸಿದೆ.. ಮೂಲ ತತ್ವ ಸಿದ್ದಾಂತದೊಂದಿಗೆ ಈ ಬಾರಿ ಚುನಾವಣಾ ಕಣಕ್ಕಿಳಿಯ ಬೇಕಿದೆ.. ಸರ್ವೆಯಲ್ಲಿ ಮೊದಲ ಸ್ಥಾನ ಹೊಂದಿದ್ದರೂ ಟಿಕೇಟ್ ವಲಸೆ ಬಂದ ಮೋದಿ ಬಾವುಟ ಕಿತ್ತವರಿಗೆ ನೀಡಿರುವುದು ಅಸಂಖ್ಯ ಅಭಿಮಾನಿಗಳ ನೋವಿಗೆ ಕಾರಣವಾಗಿದೆ.. ಪಕ್ಷ ಭರವಸೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.. ಹಾಗಾಗಿ ಸ್ವತಂತ್ರವಾಗಿ ನಾನು ಸ್ಪರ್ದಿಸುವ ನಿರ್ದಾರ ಮಾಡಿದ್ದೇನೆ ಎಂದರು..