-ಪಿಎಸ್ಕೆ

ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಅನಿರೀಕ್ಷಿತ ಎಂಬಂತೆ ಹೊಸ ಹೊಸ ಬೆಳವಣಿಗೆಗಳು ಕೂಡ ನಡೆಯಲಾರಂಭಿಸವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಕುಮಟಾ ವಿಧಾಸಭಾ ಕ್ಷೇತ್ರ ಭಾರೀ ಸದ್ದು ಮಾಡಿದ್ದು, 6 ಪ್ರಭಲ ಅಭ್ಯರ್ಥಿಗಳ ನಡುವೆ ತೀವೃ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ 3 ಪ್ರಭಲ ಪಕ್ಷೇತರ ಅಭ್ಯರ್ಥಿಗಳಿಂದ ಪೈಪೋಟಿ ಎದುರಾಗಿದೆ. ಆದರೆ ಗೆಲುವಿನ ಮನೆ ಯಾರಿಗೆ ಎನ್ನುವ ಗಣಿತ ಈಗಾಗಲೇ ಆರಂಭವಾಗಿದ್ದು, ಎಲ್ಲ ಅಭ್ಯರ್ಥಿಗಳೂ ಗೆಲುವು ತಮ್ಮದೇ ಎನ್ನುವ ಆತ್ಮ ವಿಶ್ವಾಸದಿಂದ ತುರುಸಿನ ಪ್ರಚಾರ ಕೈಗೊಂಡಿದ್ದಾರೆ.
ಸುಲಭವಲ್ಲದ ಗಣಿತ
ಆದರೆ ಕುಮಟಾ ಕ್ಷೇತ್ರದ ಇತಿಹಾಸ ನೋಡಿದರೆ ಇಲ್ಲಿನ ರಾಜಕೀಯ ಗಣಿತ ಅಷ್ಟು ಸುಲಭವಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಈ ಬಾರಿಯೂ ಗೆಲುವಿನ ಗಣಿತ ಈ ಹಿಂದಿನ ಇತಿಹಾಸಕ್ಕಿಂತ ಇನ್ನೂ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಆದರೆ ಕೊನೆಯ ಕ್ಷಣದಲ್ಲಿ ಈ ಹಿಂದೆ ಯಾರಿಗೆ ಗೆಲುವು ಒಲಿದಿದೆ ಎನ್ನುವ ಲೆಕ್ಕ ಕೂಡ ಈಗ ಸಿಗಲಿದೆ. ಈ ಲೆಕ್ಕವನ್ನೊಮ್ಮೆ ನೋಡಿದಾಗ ಉಳಿದ 6 ಅಭ್ಯರ್ಥಿಗಳಿಗಿಂತ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಹೆಚ್ಚು ಸೇಫರ್ ಝೊನ್ ನಲ್ಲಿ ಇದ್ದಾರೆ ಎನ್ನುವ ಅಭಿಪ್ರಾಯವಿದೆ. ಅದಕ್ಕೆ ಅನೇಕ ಕಾರಣಗಳೂ ಇದೆ. ಶಾರದಾ ಶೆಟ್ಟಿಗೆ ಹಾಲಿ ಶಾಸಕಿಯಾಗಿದ್ದು ಪ್ಲಸ್ ಪಾಯಿಂಟ್ ಜೊತೆಗೆ ಕ್ಷೇತ್ರದ ಮತದಾರ ಒಡಲಾಳದ ಅರಿವಿದೆ. ಇವುಗಳ ಜೊತೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಶಾರದಾ ಶೆಟ್ಟಿ ಕುಮಟಾ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಈಗ ಸ್ವಲ್ಪಮಟ್ಟಿನ ವರದಾನ ಆಗಬಹುದು. ಆದರೂ ದಿನಕರ ಶೆಟ್ಟಿ ರಾಜಕೀಯದಲ್ಲಿ ನುರಿತ ರಾಜಕಾರಣಿಯಾಗಿದ್ದರಿಂದ ಜಿದ್ದಾಜಿದ್ದಿನ ಫೈಟ್ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಂಡಾಯದ ಬಿಸಿ ಹಾಗೂ ಲಾಭದ ಲೆಕ್ಕಾಚಾರ
ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಎರಡು ಬಂಡಾಯ ಬಿಜೆಪಿಯಿಂದ ಇಬ್ಬರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ನಿಂದ ಕೃಷ್ಣ ಗೌಡ ಹಾಗೂ ಸುಮನ್ ಹೆಗಡೆ ಬಂಡಾಯ ಅಭ್ಯರ್ಥಿಯಾದರೆ, ಬಿಜೆಪಿಯಲ್ಲಿ ಇಬ್ಬರೂ ಘಟಾನುಘಟಿಗಳು. ಸೂರಜ್ ನಾಯ್ಕ ಹಿಂದೂ ಫೈಟ್ ಬ್ರಾಂಡ್ ಎನ್ನುವ ಹಣೆಪಟ್ಟಿಯೊಂದಿಗೆ ಕಣದಲ್ಲಿದ್ದರೆ, ಇನ್ನೊಬ್ಬರು ತನ್ನದೇ ಕಾರ್ಯತಂತ್ರದೊಂದಿಗೆ ಸ್ವಸಹಾಯ ಸಂಘ ರಚಿಸಿ ಕಳೆದ 5 ವರ್ಷದಿಂದ ಮತ ಬ್ಯಾಂಕ್ ಗಟ್ಟಿ ಮಾಡಿಕೊಂಡಿದ್ದಾರೆ. ಇನ್ನು ಜೆಡಿಎಸ್‌ ನ ಪ್ರದೀಪ್ ನಾಯಕ ಕುಮಟಾದಲ್ಲಿ ಪ್ರಭಾವ ಹೊಂದಿದ್ದು ಹೊನ್ನಾವರ ಇನ್ನೂ ಹೆಚ್ಚಿನ ಗ್ರಿಪ್ ಪಡೆಯಬೇಕಿದೆ. ಆದರೂ ಕೊನೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ವರ್ಧೆ ಎನ್ನುವ ಅಭಿಪ್ರಾಯವಿದೆ.
ಪ್ಲಸ್ ಮೈನಸ್ ಪಾಯಿಂಟ್:
ಇನ್ನು ಶಾರದಾ ಶೆಟ್ಟಿ ತಮಗೆ ಲಭ್ಯವಿದ್ದ ಅನುದಾನ ಸದುಪಯೋಗ ಮಾಡಿಕೊಂಡು ಮತಬ್ಯಾಂಕ್ ಗಟ್ಟಿಕೊಳಿಸಿಕೊಂಡಿದ್ದಂತು ಸತ್ಯ. ಪರೇಶ್ ಮೇಸ್ತಾ ಪ್ರಕರಣವನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಭಾರೀ ಮುನ್ನಡೆಯಲ್ಲಿಯೇ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಒಳ ಭಿನ್ನಾಭಿಪ್ರಾಯ ಇದ್ದರೂ ಸಹ ಸಧ್ಯದ ಮಟ್ಟಿಗೆ ಬಿಜೆಪಿಯಷ್ಟು ಭಿನ್ನಮತವಿಲ್ಲ. ಬಿಜೆಪಿಯಲ್ಲಿ ಬೇರೆ ಪಕ್ಷಗಳಿಂದ ಬಂದವರೆಲ್ಲರೂ ಮುಖಂಡರಾಗಿದ್ದು ತನ್ನದೇ ಆದ ಗುಂಪು ಹೊಂದಿದ್ದಾರೆ. ಅಂಥ ಮುಖಂಡರ ಗುಂಪು ಕಾಂಗ್ರೆಸ್ ಗಿಂತ ಹೆಚ್ಚಿದೆ. ಈ ಜೊತೆಗೆ ದಿನಕರ್ ಶೆಟ್ಟಿ ಹಿಂದೆ ಜೆಡಿಎಸ್ ನಿಂದ ಬಂದವರಾಗಿದ್ದು, ಮೂಲ ಬಿಜೆಪಿಗರೊಂದಿಗೆ ಭಿನ್ನಾಭಿಪ್ರಾಯವಿದೆ. ಈ ಜೊತೆಗೆ ಬಂಡಾಯ ಅಭ್ಯರ್ಥಿಗಳು ಪ್ರಭಲವಾಗಿದ್ದರಿಂದ ಬಿಜೆಪಿಯ ಮತ ಒಡೆದುಹೋಗುವ ಸಾಧ್ಯತೆ ಹೆಚ್ಚಿದ್ದು, ಕಾಂಗ್ರೆಸ್ ನ ಶಾರದಾ ಶೆಟ್ಟಿಯವರಿಗೆ ವರದಾನವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಜಾತಿ ಸಮೀಕರರಣ:
ಇನ್ನು ಜಾತಿ ಸಮೀಕರಣ ಕೂಡ ಈ ಬಾರಿ ಶಾರದಾ ಶೆಟ್ಟಿಯವರಿಗೆ ಹೆಚ್ಚಿನ ಬಲ ನೀಡಿದೆ. ಕುಮಟಾ ಕೇತ್ರದಲ್ಲಿ ಒಕ್ಕಲಿಗರು 36000 ಮತಗಳಿವೆ. ನಾಮಧಾರಿ 37 ಸಾವಿರ, ಗ್ರಾಮ ಒಕ್ಕಲಿಗರು 19000, ಭ್ರಾಹ್ಮಣ 30000, ಮೀನುಗಾರರು, 12000, ಅಲ್ಪ ಸಂಖ್ಯಾತರು 25000, ಎಸ್ ಸಿ ಎಸ್ ಎಸ್ಟಿ- 10000, ಇತರೆ 13500 ಮತದಾರರಿದ್ದಾರೆ. ಇದರಲ್ಲಿ ಬಿಜೆಪಿಗೆ ಬೀಳಬೇಕಿದ್ದ ನಾಮಧಾರಿ ಮತಗಳನ್ನು ಸೂರಜ್ ನಾಯ್ಕ ಒಡೆಯುವುದರಲ್ಲಿ ಸಂಶಯವೇ ಇಲ್ಲ. ಇದೇ ರೀತಿ ಯಶೋಧರ ನಾಯ್ಕ ಕೂಡ ತನ್ನದೇ ಮತ ಬ್ಯಾಂಕ್ ಹೊಂದಿದ್ದು, ಬಿಜೆಪಿಯ ಮತಗಳೂ ಸೇರಿ ಜೆಡಿಎಸ್ ಕಾಂಗ್ರೆಸ್ ನ ಕೆಲವು ಮತಗಳನ್ನು ಒಡೆಯಬಹುದು. ಆದರೂ ಕೂಡ ಕಾಂಗ್ರೆಸ್ ಗೆ ಲಾಭ ಹೆಚ್ಚು. ಏಕೆಂದರೆ ಬಿಜೆಪಿಯ ಎರಡು ಪ್ರಭಾವಿ ನಾಯಕರು ಬಂಡಾಯ ಅಭ್ಯರ್ಥಿಗಳು. ಬಿಜೆಪಿಯ ಅತಿ ಹೆಚ್ಚಿನ ಮತ ಕಳೆದುಕೊಳ್ಳಬೇಕಾಗುತ್ತದೆ. ಈ ಜೊತೆಗೆ ಬಿಜೆಪಿ ಅಭ್ಯರ್ಥಿ ಬೇರೆ ಪಕ್ಷದಿಂದ ಬಂದವರಾಗಿದ್ದು, ಇಲ್ಲಿನ ಮೂಲ ಬಿಜೆಪಿಗರ ಅಸಹನೆ ಬಿಜೆಪಿಗೆ ಮೈನಸ್ ಪಾಂಯಿಂಟ್ ಆಗಲಿದೆ. ಆಗ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಪಕ್ಕಾ ಆಗಲಿದ್ದು ಗೆಲುವು ಸಿಗುವ ಎಲ್ಲಾ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ನ ಕೃಷ್ಣ ಗೌಡ ಜೆಡಿಎಸ್ ಪಕ್ಷದ ಮತಗಳನ್ನೇ ಹೆಚ್ಚು ಕಸಿಯಲಿದ್ದು, ಇದು ಕಾಂಗ್ರೆಸ್ ಗೆ ಹೆಚ್ಚಿನ ಹಾನಿಯಾಗದು ಎನ್ನುವ ಲೆಕ್ಕಾಚಾರ ರಾಜಕೀಯ ಮಂಡಿತರದ್ದು.
ಇವುಗಳ ಜತೆಗೆ ಶಾರದಾ ಶೆಟ್ಟಿ ನಿಟ ಪೂರ್ವ ಶಾಸಕಿ ಯಾಗಿದ್ದರಿಂದ ಉಳಿದವರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಹಿಡಿತ ಹೊಂದಿದ್ದಾರೆ. ಏಕೆಂದರೆ ತಮ್ಮ ಅಭಿವೃದ್ಧಿ ಕಾರ್ಯದಲ್ಲಿ ತಮ್ಮ ಕಾರ್ಯಧಕ್ಷತೆಯನ್ನು ಮೆರೆದಿದ್ದು, ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಶಾರದಾ ಶೆಟ್ಟಿಯವರ ಅಭಿವೃದ್ಧಿಯಿಂದ ಈ ಹಿಂದೆ ಬಿಜೆಪಿಗೆ ಬೀಳ ಬೇಕಿದ್ದ ಭ್ರಾಹ್ಮಣ ಮತಗಳೂ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಕಂಡುಬಂದಿದೆ. ಏನೇ ಆದರೂ ಕೊನೆಗಳಿಗೆಯಲ್ಲಿ ಎಲ್ಲ ಚಿತ್ರಣ ಬದಲಾಗುವ ಸಾಧ್ಯತೆ ಇದ್ದು, ಕುಮಟಾ ಕೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿಯೇ ಏರ್ಪಡಲಿದೆ.